ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಎಸ್‌ಆರ್‌ಎಸ್ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಎಫ್-4 ಫೀಡರ್‌ಗೆ ಸಂಬಂಧಿಸಿದಂತೆ ಮಾಡಲ್ ಸಬ್‌ಡಿವಿಷನ್ ಯೋಜನೆಯಡಿ ನ.22ರಂದು ಸ್ಪನ್ ಪೋಲ್ ಅಳವಡಿಕೆ ಕಾಮಗಾರಿ ಇರುವುದರಿಂದ ಅಂದು ಬೆಳಿಗ್ಗೆ 9ರಿಂದ ಸಂಜೆ 6ಗಂಟೆವರೆಗೆ ನಗರದ ಮೀನಾಕ್ಷಿ ಭವನ್ ರಸ್ತೆ, ಬಾಪೂಜಿ ನಗರ, ಶಂಕರಮಠ ರಸ್ತೆ, ಸೋಮಯ್ಯ ಲೇಔಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ತಿಳಿಸಿದೆ.
23ರಂದು ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ:
ನಗರ ಉಪವಿಭಾಗ-2ರ ಘಟಕ 4ರ ವ್ಯಾಪ್ತಿಯಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿಯಲ್ಲಿ ಯು.ಜಿ. ಕೇಬಲ್ ಕಾಮಗಾರಿ ಕೈಗೊಳ್ಳುವುದರಿಂದ ನಗರದ ಕೆಳಕಂಡ ಪ್ರದೇಶಗಳಲ್ಲಿ ನವೆಂಬರ್ 23ರ ಬೆಳಿಗ್ಗೆ 9ರಿಂದ ಸಂಜೆ 6ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಬೆಕ್ಕಿನಕಲ್ಮಠ, ಕೋಟೆ ರಸ್ತೆ , ಮಾರಿಗದ್ದುಗೆ, ಎಸ್.ಪಿ.ಎಂ ರಸ್ತೆ, ಒ.ಬಿ.ಎಲ್ ರಸ್ತೆ, ಪೆನ್ಶನ್ ಮೊಹಲ್ಲಾ, ಸಿ.ಎಲ್.ರಾಮಣ್ಣ ರಸ್ತೆ, ಹಳೇ ಪೋಸ್ಟ್ ಆಫೀಸ್ ರಸ್ತೆ, ಲಷ್ಕರ್ ಮೊಹಲ್ಲಾ, ಅರೆ ದುರ್ಗಮ್ಮನ ಕೇರಿ, ಕೃಷ್ಣ ಕೆಫೆ ಕೆಳಗೆ, ಎಲ್‌ಐಸಿ ಆಫೀಸ್ ಹಿಂಭಾಗ, ಕೋಟೆ ಪೊಲೀಸ್ ಸ್ಟೇಷನ್ ರಸ್ತೆ, ಸೈನ್ಸ್ ಫೀಲ್ಡ್ ರಸ್ತೆ, ಸಾಯಿ ಎಕ್ಸ್‌ಪೋಟ್ರ್ಸ್ ಬಿ.ಹೆಚ್. ರಸ್ತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಎಸ್.ಆರ್.ಎಸ್ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಎಫ್-2 ಫೀಡರ್‌ಗೆ ಸಂಬಂಧಿಸಿದಂತೆ ಮಾಡಲ್ ಸಬ್‌ಡಿವಿಷನ್ ಯೋಜನೆಯಡಿ ನ.23ರಂದು ಸ್ಪನ್ ಪೋಲ್ ಅಳವಡಿಕೆ ಕಾಮಗಾರಿ ಇರುವುದರಿಂದ ಅಂದು ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ನಗರ ವ್ಯಾಪ್ತಿಯ ಪಾರ್ಕ್ ಬಡಾವಣೆ, ತಿಲಕ್‌ನಗರ, ದುರ್ಗಿಗುಡಿ, ರಾಘವೇಂದ್ರ ಸ್ವಾಮಿ ಮಠದ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ತಿಳಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












Discussion about this post