ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕಾರ್ತಿಕ ಮಾಸದ ಕಡೆಯ ಸೋಮವಾರದಂದು ನಗರದ ಊರಗಡೂರಿನ ಗುಡ್ಡೆ ಮರಡಿಯ ಶ್ರೀ ಮಲ್ಲೇಶ್ವರ ದೇವಾಲಯದಲ್ಲಿ ಲೋಕಕಲ್ಯಾಣಾರ್ಥವಾಗಿ ನಗರ ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ಸಹಸ್ರಾರ್ಚನೆ ಹಾಗೂ ಕಾರ್ತಿಕ ದೀಪೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ 115 ಕಾರ್ಯಕರ್ತೆಯರು ಸಹಸ್ರಾರ್ಚನೆಯಲ್ಲಿ ಪಾಲ್ಗೊಂಡಿದ್ದರು.
ರಾಜ್ಯ ಪ್ರಕೋಷ್ಠಗಳ ಸಂಯೋಜಕರಾದ ಎಂ.ಬಿ. ಭಾನುಪ್ರಕಾಶ್, ನಗರ ಅಧ್ಯಕ್ಷ ಜಗದೀಶ್, ನಗರ ಮಹಿಳಾ ಮೋರ್ಚಾ ಅಧ್ಯಕ್ಷೆ ಸುರೇಖಾ ಮುರಳಿಧರ್, ಪ್ರಧಾನ ಕಾರ್ಯದರ್ಶಿ ರಶ್ಮಿ ಶ್ರೀನಿವಾಸ್, ಜಿಕ್ಕಮಗಳೂರು ಜಿಲ್ಲಾ ಮಹಿಳಾ ಪ್ರಭಾರಿ ರೇಣುಕಾ ನಾಗರಾಜ್, ಸೂಡಾ ಸದಸ್ಯರಾದ ಉಮಾಮೂರ್ತಿ, ದೇವರಾಜ್, ಮಹಾ ನಗರಪಾಲಿಕೆ ಸದಸ್ಯರಾದ ಸಂಗೀತಾ ನಾಗರಾಜ್, ಲಕ್ಷ್ನೀ ಶಂಕರನಾಯ್ಕ್, ಕಲ್ಪನಾ ರಮೇಶ್, ನಗರ ಸಮಿತಿ ಹಾಗೂ ನಗರ ಮಹಿಳಾ ಮೋರ್ಛಾದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post