ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದಲ್ಲಿ ಚುಂಚಾದ್ರಿ ಮಹಿಳಾ ವೇದಿಕೆ ವತಿಯಿಂದ ಡಿ.5ರ ಭಾನುವಾರ ಬಾಲರಾಜ್ ಅರಸು ರಸ್ತೆಯಲ್ಲಿರುವ ಒಕ್ಕಲಿಗರ ಭವನದಲ್ಲಿ ಖಾದ್ಯಮೇಳವನ್ನು ಆಯೋಜಿಸಲಾಗಿದೆ.
ಮೇಳವು ಬೆಳಗ್ಗೆ 10ರಿಂದ ಆರಂಭವಾಗಲಿದ್ದು, ರಾತ್ರಿ 9 ರವರೆಗೆ ನಡೆಯಲಿದೆ. ಮೇಳದಲ್ಲಿ ರುಚಿಕರ ಸಸ್ಯಹಾರಿ ಹಾಗೂ ಮಾಂಸಹಾರಿ ಖಾದ್ಯಗಳು ಸೇರಿದಂತೆ ಗೋಲ್ಡ್ ಕವರಿಂಗ್ ಆಭರಣ, ಪುಸ್ತಕ, ಸ್ಯಾರೀಸ್, ಕುರ್ತಿಸ್, ರೆಡಿ ಬ್ಲೌಸ್, ರಾಜಸ್ತಾನಿ ಡ್ರೇಸ್ ಮೆಟಿರಿಯಲ್, ಲೆಹಂಗಸ್, ಹೋಂ ಗಾರ್ಡನಿಂಗ್ ಹಾಗೂ ತಿಂಡಿ, ತಿನಿಸುಗಳ ಪ್ರದರ್ಶನ ಮತ್ತು ಮಾರಾಟವನ್ನು ಆಯೋಜಿಸಲಾಗಿದೆ.
ಜನಪದ ನೃತ್ಯ, ಭಾವಗೀತೆಗಳು, ಮತ್ತು ಮೇಕಪ್ ಸ್ಪರ್ದೆ, ಹಾಗೂ ನಗು ಹೊನಲಿನ ಆಟೋಟಗಳು ಜರುಗಲಿವೆ. ಹೆಚ್ಚಿನ ಮಾಹಿತಿಗಾಗಿ ಅಧ್ಯಕ್ಷರಾದ ಭಾರತಿ ರಾಮಕೃಷ್ಣ -9449739042, ಕಾರ್ಯದರ್ಶಿ ಮಮತಾ ಶಿವಣ್ಣ – 9448105901ಗೆ ಸಂಪರ್ಕಿಸಿ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post