ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ವಿಭಿನ್ನ ರೀತಿಯ ವಸ್ತ್ರಗಳು, ವಿಶೇಷ ವಸ್ತುಗಳು ಹಾಗೂ ದುಬಾರಿ ಸನ್‌ಗ್ಲಾಸ್‌ಗಗಳನ್ನು ಧರಿಸುವ ಮೂಲಕ ಸುದ್ಧಿಯಾಗುತ್ತಿದ್ದ ಪ್ರಧಾನಿ ನರೇಂದ್ರ ಮೋದಿಯವರು ಈಗ ಇನ್ನೊಂದು ವಿಷಯದಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ.

ಏನೆಂದು ಯೋಚಿಸುತ್ತಿದ್ದೀರಾ ಹೌದು… ಪ್ರಧಾನಿ ಮೋದಿ ಅವರು ಬಳಸುತ್ತಿರುವ ಶಸ್ತ್ರಸಜ್ಜಿತ ಮರ್ಸಿಡೀಸ್ ಮೇಬ್ಯಾಕ್ ಎಸ್ 650 ಈಗ ಎಲ್ಲರ ಆಕರ್ಷಣಾ ಬಿಂದುವಾಗಿದೆ.

ಇತ್ತೀಚಿಗೆ ರಷ್ಯಾ ಅಧ್ಯಕ್ಷ ವ್ಲಾಡಿಮೀರ್ ಪುಟಿನ್ ಅವರು ದೆಹಲಿಗೆ ಆಗಮಿಸಿದಾಗ ಅವರನ್ನು ಸ್ವಾಗತಿಸಲು ಹೈದರಾಬಾದ್ ಹೌಸ್‌ಗೆ ಆಗಮಿಸಿದ ಮೋದಿ ಅವರು, ಮೊದಲು ಬಾರಿ ಈ ಕಾರಿನಲ್ಲಿ ಕಾಣಿಸಿಕೊಂಡರು. ಈ ಮೂಲಕ ಮೋದಿ ಬೆಂಗಾವಲು ಪಡೆಗೆ ಹೊಸ ವಾಹನ ಸೇರ್ಪಡೆಯಾಗಿದ್ದು, ಮರ್ಸಿಡೆಸ್-ಮೇಬ್ಯಾಚ್ ಎಸ್ 650 ಗಾರ್ಡ್ ವಿಆರ್ 10 ಮಟ್ಟದ ರಕ್ಷಣೆಯುಳ್ಳ ಅತ್ಯಾಧುನಿಕ ಸವಲತ್ತುಗಳ ಮಾಡೆಲ್ ಆಗಿದೆ. ಇದು ಕಾರ್ ಒಂದರಲ್ಲಿ ನೀಡುವ ಅತಿ ಹೆಚ್ಚಿನ ರಕ್ಷಣಾ ಸೌಲಭ್ಯವಾಗಿದೆ/ ಎರಡು ಮೀಟರ್ ದೂರದಲ್ಲಿ 15 ಕೆಜಿ ಟಿಎನ್‌ಟಿ ಸ್ಫೋಟ ಸಂಭವಿಸಿದರೂ ರಕ್ಷಣೆ ನೀಡುತ್ತದೆ. ಸ್ಫೋಟದಿಂದ ಕಾಪಾಡಲು ವಾಹನದ ಕೆಳಭಾಗದಲ್ಲಿ ವಿಶೇಷ ಭದ್ರತಾ ತಂತ್ರಜ್ಞಾನ, ಕಿಟಕಿ ಗಾಜುಗಳಿಗೆ ಪ್ರಬಲ ಗುಂಡು ನಿರೋಧಕ ಅಳವಡಿಸಲಾಗಿದೆ.

ಪ್ರಧಾನಿ ಅವರ ಭದ್ರತಾ ವಾಹನಗಳು ರೇಂಜ್ ರೋವರ್ ವೋಗ್ ಮತ್ತು ಟೊಯೊಟಾ ಲ್ಯಾಂಡ್ ಕ್ರೂಸರ್‌ನಿಂದ ಉನ್ನತೀಕರಣಗೊಂಡಂತಾಗಿದೆ. ಅತ್ಯುನ್ನತ ಸುರಕ್ಷತಾ ಮಾನದಂಡಗಳನ್ನು ಹೊಂದಿರುವ ಈ ಕಾರಿನ ಬೆಲೆ ಸುಮಾರು 12 ಕೋಟಿ ರೂ.ಗಳಿಗೆ ಹೆಚ್ಚು ಎಂದು ತಿಳಿದುಬಂದಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















