ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಕರ್ನಾಟಕ ಸಂಘ, ಮೈನ್ ಮಿಡ್ಲ್ ಶಾಲಾವರಣದಲ್ಲಿ ಕಸ ಕೊಡಿ, ಹಣ ಪಡಿ, ಕಾರ್ಯಕ್ರಮಕ್ಕೆ ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಶಿವಮೊಗ್ಗ ಜಿಲ್ಲಾ ಅಧ್ಯಕ್ಷ ಚನ್ನವೀರಪ್ಪ ಗಾಮನಗಟ್ಟಿ ಅವರು ಬೀದಿ ಬದಿಯ ವ್ಯಾಪಾರಿಗಳಿಗೆ 25ಲೀ. ನ ಎಣ್ಣೆ ಕ್ಯಾನ್ ನೀಡುವುದರ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಾವುಗಳು ಮನೆಗಳಿಗೆ ಯಾವುದೇ ರೀತಿಯ ಕಸವನ್ನು ತರುವುದಿಲ್ಲ. ದುಬಾರಿ ಹಣವನ್ನು ಕೊಟ್ಟು ಹಣ್ಣು, ತರಕಾರಿ ಕರಿದಿಸುತ್ತೇವೆ. ಆದರೆ, ಮನೆಗೆ ಬಂದಾಗ ಬಹಳಷ್ಟು ವಸ್ತುಗಳು ಹಾಳಗಿರುತ್ತವೆ. ಅವುಗಳು ನಮಗೆ ಬೇಡವಾದಾಗ ಮಾತ್ರ ಅವುಗಳು ಕಸಗಳಾಗಿ ಕಾಣತೋಡುತ್ತವೆ ಎಂದು ಹೇಳಿದರು.
ಕಸವನ್ನು ಸಂಗ್ರಹಿಸಿ ಕಸದ ಗಾಡಿ ಬರದೆ ಇದ್ದಾಗ ಅದರ ವಾಸನೆ ತಾಳಲಾರದೆ ರಾತ್ರಿ ವೇಳೆ ಇನ್ನೊಬ್ಬರ ಕಾಂಪೌಂಡ್ ನಲ್ಲಿ ಅವರು ಇಲ್ಲದೆ ವೇಳೆ ಸುರಿದು ಬಂದು ಯಾರಿಗೂ ತಿಳಿಯದಂತೆ ನಿದ್ರಿಸುತ್ತೇವೆ. ಆದರೆ ಕಸದಿಂದ ಗೊಬ್ಬರ ಹಾಗೂ ಪ್ಲಾಸ್ಟಿಕ್ ವಸ್ತುಗಳಿಂದ ಇತರೆ ಪುನರ್ ಬಳಸುವ ವಸ್ತುಗಳಾಗಿವೆ ಮಾರ್ಪಡುತ್ತಿವೆ ಎಂದು ತಿಳಿಸಿದರು.
ಎಲ್ಲಾ ರೀತಿಯ ಕಸವ ಕೊಡಿ ಹಣವ ಪಡಿ ಎಂದು ಕಂಪನಿಗಳು ಮುಂದೆ ಬಂದಿವೆ, ಆದರೆ ಸಾರ್ವಜನಿಕರಿಗೆ ಇದರ ಬಗ್ಗೆ ಅರಿವಿನ ಕೊರತೆ ಕಾಣುತ್ತಿದೆ. ಇಂದು M11 Industris pvt.LTD RUCO (ಯೂಕೊ) ಕಂಪನಿಯು ಸಾರ್ವಜನಿಕರು ತಿಂಡಿ ತಿನಿಸು ಪದಾರ್ಥಗಳ ಕರಿದ ತಿನ್ನಲು ಯೋಗ್ಯವಲ್ಲದ ಎಣ್ಣೆಯನ್ನು ಎಲ್ಲೂ ಚಲ್ಲದೆ ನಮಗೆ ನೀಡಿ ಅದಕ್ಕೆ ಒಂದು ಲೀ.ಗೆ ಇಷ್ಟು ಹಣ ನೀಡುತ್ತೇವೆ. ನಾವುಗಳು ಇದರಿಂದ ಬಯೊ ಡೀಸೇಲ್ ತಯಾರಿಸುತ್ತೇವೆ ಎಂದು ಮುಂದೆ ಬಂದಿವೆ. ಹಾಗಾಗಿ ಶಿವಮೊಗ್ಗ ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರಿಗೆ ಯೂಕೊ ಕಂಪನಿಯ ಕರಿದ ಎಣ್ಣೆ ನೀಡಲು 25 ಲೀಟರನ ಕ್ಯಾನ್ ಉಚಿತ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ M11 Industris ಚೀಫ್ ಬಿಸಿನೆಸ್ ಆಫೀಸರ್ ಚಂದ್ರಶೇಖರ, ಯೂಕೊ ಮ್ಯಾನೇಜರ್ ರಾಜೇಶ್ ತ್ಯಾಗರಾಜನ್, ಬೀದಿ ಬದಿ ವ್ಯಾಪಾರಸ್ಥರ ಸಂಘಟನೆಗಳ ಪದಾಧಿಕಾರಿಗಳಾದ ದಿನೇಶ್, ಮಣಿ ಗೌಂಡರ್, ರಂಗಮ್ಮ ಹನುಮಂತಪ್ಪ, ಬಸವರಾಜ್ ಚಂದ್ರಪ್ಪ ಹಾಗೂ ಇತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post