ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಡಿಸೆಂಬರ್ ತಿಂಗಳಲ್ಲಿ ವಿಕಾಸ ಹಾಗೂ ವಿಪ್ರ ಬಾಂಧವ ಗುಂಪಿನಲ್ಲಿ ಸಂಗ್ರಹಿಸಿರುವ 12,000ರೂ. ಚೆಕ್ ನ್ನು ದಿ. ವಾಗೀಶ ಕುಮಾರ್ ಅವರ ಪತ್ನಿ ಸುಮಾ ಅವರಿಗೆ ಹಸ್ತಾಂತರಿಸಲಾಯಿತು.  ವಿಕಾಸ ಹಿರಿಯ ಸದಸ್ಯರಾದ ಅಚ್ಯುತ ಸಂಕೇತಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಪೂರ್ವಾಶ್ರಮದ ಸಂಬಂಧಿಯಾಗಿರುವ ದಿ. ವಾಗೀಶ ಕುಮಾರ್ ಅವರು ಇತ್ತೀಚೆಗೆ ಅನಾರೋಗ್ಯದಿಂದ ತಮ್ಮ46 ನೆ ವಯಸ್ಸಿನಲ್ಲಿ ನಿಧನರಾದರು. ಮೃತರಿಗೆ ಪತ್ನಿ ಹಾಗೂ ಓರ್ವ ಪುತ್ರಿ ಇದ್ದಾರೆ.
ಈ ಕುಟುಂಬಕ್ಕೆ ನೆರವು ನೀಡಿದ ಎಲ್ಲ ವಿಕಾಸ ಹಾಗೂ ವಿಪ್ರ ಬಾಂಧವ ಗುಂಪಿನ ಸದಸ್ಯರಿಗೆ ಧನ್ಯವಾದಗಳು. ಕಳೆದ ಒಂದು ವರ್ಷದಿಂದ ಪ್ರತಿ ತಿಂಗಳು ಒಂದು ಬ್ರಾಹ್ಮಣ ಕುಟುಂಬಕ್ಕೆ ತಮ್ಮಿಂದ ನೆರವಿನ ಹಸ್ತ ಚಾಚಿದ್ದೀರಿ. ಈ ಮಾನವೀಯ ಸೇವೆಗೆ ಸರಿಸಮನಾದ ಕಾರ್ಯವಿಲ್ಲ. ತಮ್ಮ ಸಹಕಾರ ಹೀಗೆ ಮುಂದುವರಿಯಲಿ  ಹಿರಿಯ ಪತ್ರಕರ್ತ  ಹನುಮೇಶ ಕೃಷ್ಣರಾವ್ ಯಾವಗಲ್ ಹಾರೈಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
 
	    	






 Loading ...
 Loading ... 
							



 
                
Discussion about this post