
ಈ ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಚಿಸುವ ಸ್ಪರ್ಧಿಗಳು ಆನ್‍ಲೈನ್ ಮೂಲಕ ಡಿ.31 ರೊಳಗೆ ನೊಂದಾಯಿಸಿಕೊಳ್ಳಬೇಕು. ಈ ಸ್ಪರ್ಧೆಯ ಮೂಲ ಉದ್ದೇಶವೆಂದರೆ ನಾಗರೀಕರು, ಕಚೇರಿ, ಶಾಲೆ ಹಾಗೂ ಇನ್ನಿತರೆ ದಿನನಿತ್ಯದ ಕೆಲಸ ಕಾರ್ಯಗಳಿಗೆ ಕಾಲ್ನಡಿಗೆ ಮತ್ತು ಸೈಕಲ್‍ಗಳನ್ನು ಬಳಸುವುದರ ಮೂಲಕ ಆರೋಗ್ಯದ ಗುಣಮಟ್ಟ ಸುಧಾರಣೆ, ನಡವಳಿಕೆಯಲ್ಲಿ ಬದಲಾವಣೆ ಇತ್ಯಾದಿ ಬಗ್ಗೆ ಜಾಗೃತಿ ಮೂಡಿಸುವುದಾಗಿದೆ.
ಈ ದಿಸೆಯಲ್ಲಿ 2022 ರ ಜ.01 ರಿಂದ 26 ರವರೆಗೆ ಫ್ರೀಡಂ ಟು ವಾಕ್ ಮತ್ತು ಫ್ರೀಡಂ ಟು ಸೈಕಲ್ ಅಭಿಯಾನವನ್ನು ಎಲ್ಲ ಸ್ಮಾರ್ಟ್ ಸಿಟಿಗಳಲ್ಲಿ ಸ್ಪರ್ಧಾತ್ಮಕವಾಗಿ ಸಚಿವಾಲಯ ಹಮ್ಮಿಕೊಂಡಿದೆ. ಸಾರ್ವಜನಿಕರು ಈ ಚಟುವಟಿಕೆಯಲ್ಲಿ ವೈಯಕ್ತಿವಾಗಿ ನೋಂದಣಿ ಮಾಡಿಕೊಂಡು ತಮ್ಮ ಬಿಡುವಿನ ವೇಳೆಯಲ್ಲಿ ತಮಗೆ ಲಭ್ಯವಿರುವ ಸ್ಥಳದಿಂದಲೇ ಈ ಸ್ಪರ್ಧೆಯಲ್ಲಿ ಭಾಗವಹಿಸುವುದರ ಮೂಲಕ ಸ್ಮಾರ್ಟ್ ಸಿಟಿಗಳ ನಡುವಿನ ಸ್ಪರ್ಧೆಯಲ್ಲಿ ಶಿವಮೊಗ್ಗ ಸ್ಮಾರ್ಟ್ ಸಿಟಿಯನ್ನು ವಿಜಯಶಾಲಿಯಾಗಿ ಮಾಡುವಂತೆ ಮನವಿ ಮಾಡಲಾಗಿದೆ.
ಸ್ಪರ್ಧೆಯಲ್ಲಿ ಭಾಗವಹಿಸುವವರುAllForSport ಆ್ಯಪ್‍ನ್ನು ಗೂಗಲ್ ಪ್ಲೇ ಅಥವಾ ಪ್ಲೇಸ್ಟೋರ್‍ನಲ್ಲಿ ಡೌನ್‍ಲೋಡ್ ಮಾಡಿಕೊಂಡು ವಾಕ್ ಮಾಡುವವರುhttps://www.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















