ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ತಾಲೂಕಿನ ಗೊಂದಿಚಟ್ನಹಳ್ಳಿ ಬಳಿ ಬೊಲೆರೋ ಪಿಕಪ್ ವಾಹನ ಪಲ್ಟಿಯಾಗಿ ಇಬ್ಬರು ಯುವಕರು ಸಾವು ಕಂಡಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ.
ಯುವಕರು ಹೊನ್ನಾಳಿ ತಾಲೂಕಿನ ಲಿಂಗಾಪುರದ ಹನುಮಂತ (26) ಹಾಗೂ ದಾನಿ (22) ಮೃತ ದುರ್ದೈ ವಿಗಳು. ಬಾಲಕ ಪವನ್ ಸ್ಥಿತಿ (16) ಗಂಭೀರವಾಗಿದ್ದು, ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ಹಿನ್ನೆಲೆ:
7 ಜನರ ತಂಡ ಲಿಂಗಾಪುರ ದಿಂದ ಚೇಣಿ ಹಿಡಿದಿದ್ದ ತೋಟದಿಂದ ಅಡಕೆ ತರಲು ಮಂಗಳವಾರ ಮುಂಜಾನೆ ರಿಪ್ಪನ್‌ಪೇಟೆಗೆ ತೆರಳಿದ್ದರು. ಸಂಜೆಯವರೆಗೂ ಅಡಕೆ ಗೊನೆ ಕೊಯ್ದು ಲೋಡ್ ಮಾಡಿಕೊಂಡಿದ್ದಾರೆ. ಬಳಿಕ ಲಿಂಗಾಪುರಕ್ಕೆ ತೆರಳುವಾಗ ಗೊಂದಿಚಟ್ನಹಳ್ಳಿಯ ಬಳಿ ಎದುರಿಗೆ ಬಂದ ಆಟೋ ತಪ್ಪಿಸಲು ಹೋಗಿ ವೆಲ್ಡಿಂಗ್ ಶಾಪ್ ಮುಂಭಾಗ ರಸ್ತೆ ಬದಿ ನಿಲ್ಲಿಸಿದ್ದ ಟ್ರ್ಯಾಕ್ಟರ್ ಟ್ರೇಲರ್‌ಗೆ ಗುದ್ದಿದ ಪರಿಣಾಮ ಬೊಲೆರೋ ರಸ್ತೆಯಲ್ಲಿ ಪಲ್ಟಿಯಾಗಿದೆ. ಇದರಿಂದ ಅಡಕೆ ತುಂಬಿದ ಚೀಲಗಳು ಮಲಗಿದವರ ಮೇಲೆ ಬಿದ್ದ ಪರಿಣಾಮ ಇಬ್ಬರು ಮೃತಪಟ್ಟಿದ್ದಾರೆ.

ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















