ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು, ನಾಡಿನ ಹೆಸರಾಂತ ಪತ್ರಕತ೯, ಸಾಹಿತಿ, ವಿಮಶ೯ಕ ಡಾ. ಚಂದ್ರಶೇಖರ ಪಾಟೀಲರ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದೆ..
ಸಂಘದ ಅಧ್ಯಕ್ಷ ಕೆ. ವಿ. ಶಿವಕುಮಾರ್, ಪ್ರಧಾನ ಕಾಯ೯ದಶಿ೯ ವೈದ್ಯ, ರಾಜ್ಯ ಸಮಿತಿ ನಿದೇ೯ಶಕ ಎನ್. ರವಿಕುಮಾರ್, ನಗರ ಕಾಯ೯ದಶಿ೯ ವಿ.ಟಿ. ಅರುಣ್ ಹಾಗೂ ಕಾಯ೯ಕಾರಿ ಸಮಿತಿ ಸದಸ್ಯರು ಕಿರು ಪತ್ರಿಕೋದ್ಯಮಕ್ಕೆ ಪಾಟೀಲರು ನೀಡಿದ ಕೊಡುಗೆಯನ್ನು ಸ್ಮರಿಸಿದ್ದಾರೆ.
ಪ್ರೊ. ಚಂದ್ರ ಶೇಖರ ಪಾಟೀಲ ಅವರು ಚಂಪಾ ಎಂದೇ ನಾಡಿನಾದ್ಯಂತ ಗುರುತಿಸಿಕೊಂಡ ಬಂಡಾಯದ ಗಟ್ಟಿ ಧ್ವನಿಯ ಸಾಹಿತಿ.
ಕನ್ನಡದ ಅಸ್ಮಿತೆಯಾಗಿಯೂ ಗಮನ ಸೆಳೆದ ಚಂಪಾ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಸಲ್ಲಿಸಿದ ಸೇವೆ, ಆ ಸಂದರ್ಭದಲ್ಲಿ ಶಿವಮೊಗ್ಗೆಯಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಅವರು ಸರ್ಕಾರಕ್ಕೆ ಸಡ್ಡು ಹೊಡೆದ ಪರಿಷತ್ ಕನ್ನಡಿಗರ ಸ್ವಾಭಿಮಾನಿ ಸಂಸ್ಥೆ ಎನ್ನುವುದನ್ನು ಸಾರಿದ್ದನ್ನು ಯಾರೂ ಮರೆಯಲಾಗದು ಎಂದಿರುವ ಅವರು, ಆರು ದಶಕಗಳಷ್ಟು ದೀರ್ಘ ಕಾಲ ಸಂಕ್ರಮಣ ಮಾಸಿಕವನ್ನು ಮುನ್ನಡೆಸುವುದರ ಮೂಲಕ ಕಿರು ಪತ್ರಿಕೋದ್ಯಮಕ್ಕೆ ಮಹತ್ವ ತಂದುಕೊಟ್ಟವರು. ಭಾಷೆ, ಸೊಗಡು ಮತ್ತು ಸಾಹಿತ್ಯವನ್ನು ಒಟ್ಟಿಗೆ ಕನ್ನಡ ಮನಸುಗಳಿಗೆ ಉಣಬಡಿಸಿದ್ದು, ಕನ್ನಡಿಗರನ್ನು ಜಾಗೃತಗೊಳಿಸಿದ್ದು ಶ್ಲಾಘನೀಯ ಎಂದಿದ್ದಾರೆ.
ಚಂಪಾ ಕನ್ನಡದ ಆಸ್ತಿ. ಅಗಲಿದ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಕುಟುಂಬ ವರ್ಗಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಸಂಘದ ಪದಾಧಿಕಾರಿಗಳು ಪ್ರಾರ್ಥಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post