ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಪುನೀತ್ ಅವರು ಕಾಡಿನ ಬಗ್ಗೆ ಹೆಚ್ಚು ಕಾಳಜಿ ಹೊಂದಿದ್ದರು ಈ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳಿಗೆ ಗಿಡ ನೆಟ್ಟು ಕಾಡು ಬೆಳೆಸೋದಕ್ಕೆ ಸಹಕಾರ ನೀಡುವಂತೆ ಮನವಿ ಮಾಡುತ್ತಿದ್ದೇವೆ ಎಂದು ರಾಘವೇಂದ್ರ ರಾಜ್‌ಕುಮಾರ್ ಹೇಳಿದರು.
ಪುನೀತ್ ಮೂರನೇ ತಿಂಗಳ ಪುಣ್ಯಸ್ಮರಣೆ ಅಂಗವಾಗಿ ಅವರು ಕುಟುಂಬಸ್ಥರು ಇಂದು ಕಂಠೀರವ ಸ್ಟುಡಿಯೋಗೆ ಆಗಮಿಸಿ ಪೂಜೆ ಸಲ್ಲಿಸಿದರು. ಪುಣ್ಯ ತಿಥಿ ನಿಮಿತ್ತ ಅಭಿಮಾನಿಗಳಿಗೆ ಅನ್ನದಾನ ಮತ್ತು ೫೦೦ ಸಸಿಗಳನ್ನು ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಪುನೀತ್ ಸಮಾಧಿ ವೀಕ್ಷಣೆಗೆ ಅಭಿಮಾನಿಗಳ ದಂಡು ಹರಿದುಬರುತ್ತಿದೆ. ಅವರ ಮೂಲಕ ಏನನ್ನಾದರೂ ವಾಪಸ್ ಕೊಡಲು ಯೋಚಿಸಿದ್ದು, ಸಸಿಗಳನ್ನು ನೀಡಲು ನಿರ್ಧರಿಸಿದ್ದೇವೆ. ಅಪ್ಪು ಅವರ ಹುಟ್ಟುಹಬ್ಬದ ಒಳಗೆ ಒಂದು ಲಕ್ಷ ಸಸಿ ನೆಡಲು ನಿರ್ಧರಿಸಿದ್ಧೇವೆ. ಗಿಡಗಳಲ್ಲಿ ಆತ್ಮ ವಾಸಿಸುತ್ತೆ ಅನ್ನೋ ಮಾತಿದೆ. ಇಡೀ ಕುಟುಂಬ ಸೇರಿ ಅವರ ಆತ್ಮಕ್ಕೆ ಗೌರವ ಸಲ್ಲಿಸೋ ಕೆಲಸ ಮಾಡುತ್ತಿದ್ದೇವೆ. ಈ ಕಾರ್ಯಕ್ಕೆ ಎಲ್ಲರೂ ಸಹಕರಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪುನೀತ್ ಪತ್ನಿ ಅಶ್ವಿನಿ ಅಭಿಮಾನಿಗಳಿಗೆ ಸಸಿ ವಿತರಿಸಿದರು.
ಇಂದು ಸಂಜೆ ದೀಪ ನಮನ:
ಪುನೀತ್ ಅವರಿಗೆ ನಮನ ಸಲ್ಲಿಸುವ ಸಲುವಾಗಿ ಸ್ಕಿಲ್ ಡಿಪಾರ್ಟ್ ಮೆಂಟ್ ವತಿಯಿಂದ ಅಪ್ಪು ಸಮಾಧಿ ಬಳಿ ಸಂಜೆ ೬ ಘಂಟೆಗೆ ದೀಪೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post