ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ಕುವೆಂಪು ಶತಮಾನೋತ್ಸವ ಬಿ.ಎಡ್ ಕಾಲೇಜಿನಲ್ಲಿ ರೋಟರಿ ಶಿವಮೊಗ್ಗ ಉತ್ತರದಿಂದ ಇಲ್ಲಿನ ಮಕ್ಕಳಿಗೆ ವಿಶೇಷವಾಗಿ ಹೆಣ್ಣುಮಕ್ಕಳಿಗೆ ಇಂದು ನ್ಯಾಪ್ಕಿನ್ ಬರ್ನರ್ ಸೌಲಭ್ಯ ವನ್ನು ಕಾಲೇಜಿಗೆ ನೀಡಲಾಯಿತು.
ಅಮೇರಿಕದ ಮೊಡೆಸ್ಟೋ ಕ್ಲಬ್ ವತಿಯಿಂದ ರೋಟರಿ ಉತ್ತರದ ಸಹಯೋಗದೊಂದಿಗೆ ಸುಮಾರು 21 ಶಾಲೆಗೆ ಸುಮಾರು 27 ಲಕ್ಷ ವೆಚ್ಚದಲ್ಲಿ ಶೌಚಾಲಯ , ನ್ಯಾಪ್ಕಿನ್ ಬರ್ನರ್, ಕುಡಿಯವ ನೀರು, ಹ್ಯಾಂಡ್ ವಾಸ್ ಮತ್ತು ಶಿಕ್ಷಕರಿಗೆ ತರಬೇತಿ ನೀಡುವ ಪರಿಕರಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಗೌರ್ವನರ್ ಎ.ಎಸ್. ಚಂದ್ರಶೇಖರ, ಜಿ. ವಿಜಯಕುಮಾರ, ರವೀಂದ್ರ ನಾಥ ಐತಾಳ, ಪ್ರಿನ್ಸಿಪಾಲ್ ಮಧು , ಸಂಸ್ಥೆಯ ಅಧ್ಯಕ್ಷರಾದ ರೋ. ಶ್ರೀಕಾಂತ, ಉಪಾಧ್ಯಕ್ಷರಾದ ರೋ. ಆದಿಮೂರ್ತಿ, ಶಿಕ್ಷಕರು ಹಾಗೂ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post