ಕಲ್ಪ ಮೀಡಿಯಾ ಹೌಸ್ | ಸಾಗರ |
ಸಾಗರ ಮತ್ತು ಹೊಸನಗರ ತಾಲೂಕಿನ ಮರಳು ಸಾಗಾಣಿಕೆ ಲಾರಿ ಮಾಲೀಕರಿಂದ ಕಮೀಷನ್ ವಸೂಲಿ ಮಾಡುತ್ತಿರುವುದಾಗಿ ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಆರೋಪಿಸಿರುವ ಹಿನ್ನೆಲೆ ಧರ್ಮಸ್ಥಳಕ್ಕೆ ಹೋಗುವ ಕಾರ್ಯಕ್ರಮದಲ್ಲಿ ಸಣ್ಣ ಬದಲಾವಣೆ ಮಾಡಲಾಗಿದ್ದು, ಫೆ. 13ರ ಬದಲು 12ರಂದು ಭೇಟಿ ನೀಡುವುದಾಗಿ ಶಾಸಕ ಹಾಲಪ್ಪ ತಿಳಿಸಿದ್ದಾರೆ.

ಫೆ. 11 ಮತ್ತು 13ರಂದು ಮನೆಯಲ್ಲಿ ಮದುವೆ ಸಮಾರಂಭ ಆಯೋಜಿಸಲಾಗಿದೆ. ಹಾಗೂ 14 ರಂದು ವಿಧಾನಸಭಾ ಅಧಿವೇಶನ ಇರಲಿದ್ದು, ಒಂದು ದಿನ ಮುಂಚಿತವಾಗಿ ಫೆ. 12ರಂದು ಧರ್ಮಸ್ಥಳಕ್ಕೆ ಭೇಟಿ ನೀಡುವುದಾಗಿ ತಿಳಿಸಿದ್ದಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















