ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಜ್ಯದಲ್ಲಿ ಸೋಮವಾರದಿಂದ ಮೊದಲ ಹಂತದಲ್ಲಿ 8ರಿಂದ 10ನೆಯ ತರಗತಿಯವರೆಗೂ ಶಾಲೆಗಳು ಆರಂಭವಾಗಲಿದ್ದು, ಆನಂತರದಲ್ಲಿ ಉಳಿದ ಉನ್ನತ ತರಗತಿಗಳನ್ನು ಆರಂಭಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.
ಈ ಕುರಿತಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ತುರ್ತು ಸಭೆ ನಡೆಸಲಾಗಿದ್ದು, ಸ್ವತಃ ಸಿಎಂ ಅವರೇ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ನಾಳೆ ಸಂಜೆಯ ಎಲ್ಲ ಡಿಸಿ ಹಾಗೂ ಡಿಡಿಪಿಐಗಳೊಂದಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ, ಸ್ಥಳೀಯ ಮಟ್ಟದಿಂದ ವರದಿ ತರಿಸಿ, ಚರ್ಚೆ ನಡೆಸಲಾಗುತ್ತದೆ. ಆನಂತರ ಪಿಯುಸಿ ಹಾಗೂ ಪದವಿ ಕಾಲೇಜುಗಳ ಆರಂಭದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದರು.
ಹೊರಗಿನ ಪ್ರಚೋದನೆಗಳಿಂದ ಮೊದಲ ಎರಡು ದಿನ ಅಶಾಂತಿಯ ವಾತಾವರಣ ಸೃಷ್ಠಿಯಾಗಿತ್ತು. ಆದರೆ, ಕಳೆದ ಎರಡು ದಿನಗಳಿಂದ ವಿದ್ಯಾರ್ಥಿಗಳು ಅತ್ಯಂತ ಸಂಯಮದಿಂದ ವರ್ತಿಸುತ್ತಿದ್ದು, ಎರಡು ದಿನಗಳಿಂದ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಇದಕ್ಕೆ ಸಹಕರಿಸಿದ ಮಕ್ಕಳಿಗೆಲ್ಲಾ ನಾನು ಧನ್ಯವಾದ ಅರ್ಪಿಸುತ್ತೇನೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post