ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಇದೆ ಅಂತರಂಗ ಶುದ್ಧಿ #Ede Anthranga Shudhi ಎನ್ನುವ ಹೊಸ ಚಿತ್ರದಲ್ಲಿ ನಟಿಸಿದ್ದು ಸಿನಿಮಾ ರಂಗದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಲು ತಾಲೂಕಿನ ಜನತೆ ಪ್ರೋತ್ಸಾಹ ನೀಡಬೇಕು ಎಂದು ನಟ ಅಮಿತ್ ಮನವಿ ಮಾಡಿದರು.
ತಾಲೂಕಿನ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಈ ವೇಳೆ ಮಾತನಾಡಿದ ಎನ್. ವಿ. ಈರೇಶ್ ಅಧುನಿಕ ಯುಗದಲ್ಲಿ ಸಿನಿಮಾ ರಂಗ ಅತ್ಯಂತ ವೇಗವಾಗಿ ಬೆಳೆಯುತ್ತಿದೆ ಇಂತಹ ಸಂದರ್ಭದಲ್ಲಿ ತಾಲೂಕಿನ ಪ್ರತಿಭೆ ಉತ್ತಮ ಸಾಧನೆ ಮಾಡಿದ್ದು ಅವರಿಗೆ ಯಶಸ್ಸು ದೊರೆಯಲಿ ಎಲ್ಲಾರು ಚಿತ್ರಮಂದಿರಗಳಲ್ಲಿ ಸಿನಿಮಾ ನೋಡಿ ಪ್ರೋತ್ಸಾಹಿಸಿ ಎಂದರು.
ಈ ಸಂದರ್ಭದಲ್ಲಿ ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ಎನ್. ವಿ. ಈರೇಶ್ ಪಾಟೀಲ್, ಸುರೇಶ್ ನಾಯ್ಕ್, ಶಶಿಧರ್ ಚುರ್ಚುಗುಂಡಿ, ದರ್ಶನ್ ಉಳ್ಳಿ , ವೀರನಗೌಡ, ಸುರೇಶ್ , ಗಾಮ ದಯಾನಂದ, ರಾಜು ತಡಗಣಿ, ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post