ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಹಿಜಾಬ್ ಹಾಕಿಕೊಳ್ಳುವುದೇ ಬ್ಯೂಟಿ ಕಾಣಬಾರದು ಎಂದು, ಹಿಜಾಬ್ ಹಾಕಿಕೊಂಡರೇ ಅತ್ಯಾಚಾರ ಕಡಿಮೆ ಆಗುತ್ತದೆ ಎಂದು ಕಾಂಗ್ರೆಸ್ ಶಾಸಕ ಜಮಿರ್ ಅಹಮದ್ ಅವರು ಹೇಳಿರುವುದು ಹಾಸ್ಯಾಸ್ಪದವಾಗಿದೆ ಎಂದು ಹೊಳಲೂರು ಜಿಪಂ ಮಾಜಿ ಸದಸ್ಯ ಕೆ.ಈ. ಕಾಂತೇಶ್ ಹೇಳಿದ್ದಾರೆ.
ಈ ಕುರಿತಂತೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಹಿಜಾಬ್ ಕಡ್ಡಾಯವಿರುವ ಪಕ್ಕದ ಪಾಕಿಸ್ಥಾನದಲ್ಲಿ WAR (War Against Rape) ಸಂಸ್ಥೆಯ ವರದಿ ಪ್ರಕಾರ 2015-2020 ರ ಅವಧಿಯಲ್ಲಿ 22,000 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಈ ಅತ್ಯಾಚಾರಗಳು ಬಹುತೇಕ ಸಂತ್ರಸ್ಥೆಯ ತಂದೆ, ಸಹೋದರರು, ಅಜ್ಜಂದಿರು ಮತ್ತು ಚಿಕ್ಕಪ್ಪಂದಿರಿಂದ ನಡೆದಿರುವುದು ದುರಂತದ ಸಂಗತಿ. ಇದರ ಬಗ್ಗೆ ಏನು ಹೇಳುತ್ತೀರಾ ಜಮೀರ್ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಶಾಲಾ-ಕಾಲೇಜು ಅಂದರೆ ಸಮಾಜದಲ್ಲಿ ಪ್ರೀತಿ-ಸಹಬಾಳ್ವೆಯನ್ನು ರೂಢಿಸಿಕೊಳ್ಳುವ ದೇವಾಯಲವಿದ್ದಂತೆ. ಅಂತಹ ಪವಿತ್ರ ಜಾಗದಲ್ಲಿ ಹಿಜಾಬ್ ಹಾಕೊಕೊಂಡರೆ ಅತ್ಯಾಚಾರ ಕಡಿಮೆ ಆಗುತ್ತೆ ಎಂದು ಹೇಳಿಕೆ ನೀಡಿದ್ದೀರಿ. ಸರ್ಕಾರ ಶಾಲಾ-ಕಾಲೇಜುಗಳಲ್ಲಿ ಸಮವಸ್ತ್ರ ಸಂಹಿತೆ ಕಡ್ಡಾಯವಾಗಿ ಪಾಲಿಸಲು ಹಿಜಾಬ್ ಧರಿಸದಂತೆ ಆದೇಶ ನೀಡಿದೆ. ಹಾಗಾದರೆ ನಿಮ್ಮ ಪ್ರಕಾರ ಶಾಲೆ ಕಾಲೇಜುಗಳಲ್ಲಿ ಅತ್ಯಾಚಾರ ನಡೆಯುತ್ತಾ?. ವಿದ್ಯಾಲಯ ಬಗ್ಗೆ ಇಂತಹ ಕೆಟ್ಟ ಮನಸ್ಥಿತಿ ಹೊಂದಿರುವ ನಿಮ್ಮ ಹೇಳಿಕೆಯನ್ನು ಖಂಡಿಸುತ್ತೇವೆ ಎಂದಿದ್ದಾರೆ.
ಖುಲ್ಲಂ ಖುಲ್ಲಾ ಹಿಂದು ಹೆಣ್ಣುಮಕ್ಕಳನ್ನು ಷಡ್ಯಂತ್ರದ ಮೂಲಕ ಪ್ರೀತಿಯ ಬಲೆಯಲ್ಲಿ ಸಿಲುಕಿಸಿ ವ್ಯವಸ್ಥಿತವಾಗಿ ಲವ್-ಜಿಹಾದ್ ಕರಾಳತೆಯ ಕುರಿತು ಎಂದಾದರು ತಾವು ವಿರೋಧ ವ್ಯಕ್ತಪಡಿಸಿದ್ದೀರಾ ? ಹಿಜಾಬ್ ಪದ್ದತಿಗೆ ಕೋಮುವಾದದ ಬಣ್ಣ ಬಳಿದು ಶಾಲೆ-ಕಾಲೇಜಿನ ಪವಿತ್ರ ಪರಿಸರದಲ್ಲಿ ಅಪನಂಬಿಕೆ-ಅಸಮಾನತೆಯನ್ನು ಹೇರುತ್ತಿರುವ ನಿಮ್ಮ ಕೊಳಕು ಮನಸ್ಥಿತಿಯನ್ನು ಧಿಕ್ಕರಿಸುತ್ತೇನೆ ಎಂದು ಕಾಂತೇಶ್ ಅವರು ಕಿಡಿ ಕಾರಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post