ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಹಿಜಾಬ್ #Hijab ಧರಿಸಿ ಕಾಲೇಜಿಗೆ ಬಂದ ವಿದ್ಯಾರ್ಥಿನಿಯರಿಗೆ ಪ್ರವೇಶ ನಿರಾಕರಿಸಿದ ಪರಿಣಾಮ ಕಾಲೇಜು ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಗರದ ಸಹ್ಯಾದ್ರಿ ಕಾಲೇಜಿನಲ್ಲಿ ನಡೆದಿದೆ.
ಈ ಸಂದರ್ಭದಲ್ಲಿ ಮಾತನಾಡಿದ ವಿದ್ಯಾರ್ಥಿನಿ ಸಾನಿಯಾ, ಕಾಲೇಜು ಪ್ರವೇಶಾತಿ ಸಮಯದಲ್ಲಿ ಹಿಜಾಬ್ ಧರಿಸುವಂತಿಲ್ಲ ಎಂದು ತಿಳಿಸಿಲ್ಲ. ಆದರೆ ಈಗ ಕೋರ್ಟ್ ಆದೇಶ #Court Order ನೀಡಿದೆ ಎಂದು ಹೇಳಿ ಅವಕಾಶ ನೀಡುತ್ತಿಲ್ಲ ಎಂದು ಹೇಳಿದರು.
ಶಾಲಾ ಸಮವಸ್ತ್ರ #School Uniform ಕಡ್ಡಾಯವಾಗಿದ್ದು ಧರ್ಮಾಚರಣೆ ಪಾಲಿಸುವುದು ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಕೇಸರಿ ಶಾಲು #Kesari Shawl ಧರಿಸಿ ಬಂದವರು ಅದನ್ನು ತೆಗೆದಿಟ್ಟು ತರಗತಿ ಕೇಳುತ್ತಿದ್ದಾರೆ. ಆದರೆ ನಾವು ಅದರಿಂದ ವಂಚಿತರಾಗುತ್ತಿದ್ದೇವೆ. ಕೋರ್ಟ್ ಆದೇಶ ನೀಡಿದರೆ ಅದರ ಪ್ರತಿಯನ್ನು ನಮಗೆ ತೋರಿಸಲಿ. ನಮಗೂ ಒಳ್ಳೆಯ ಶಿಕ್ಷಣ ಪಡೆಯಬೇಕೆಂಬ ಆಕಾಂಕ್ಷೆ ಇದೆ. ನಮ್ಮ ತಂದೆ-ತಾಯಿಗಳು ನಮ್ಮ ಭವಿಷ್ಯದ ಬಗ್ಗೆ ಕನಸು ಹೊಂದಿದ್ದಾರೆ. ನಮಗೆ ಹಿಜಾಬ್ ಧರಿಸಿ ತರಗತಿಗೆ ತೆರಳಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post