ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಿನ್ನೆ ಹತ್ಯೆಗೀಡಾದ ಬಜರಂಗದಳ ಕಾರ್ಯಕರ್ತ ಹರ್ಷನ #Bajarangadal activist Harsha ಅಂತಿಮ ಯಾತ್ರೆ ವೇಳೆ ಸಿದ್ದಯ್ಯ ರಸ್ತೆಯಲ್ಲಿ ಕಲ್ಲು ತೂರಾಟ ನಡೆಸಲಾಗಿದ್ದು, ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ.
ಹರ್ಷನ ನಿವಾಸಕ್ಕೆ ಮೃತದೇಹ ತಂದ ನಂತರ ಸಚಿವ ಈಶ್ವರಪ್ಪ, #Minister Eshwarappa, ಸಂಸದ ರಾಘವೇಂದ್ರ #MP Raghavendra ಅವರುಗಳು ಅಂತಿಮ ದರ್ಶನ ಪಡೆದರು. ಆನಂತರ ಅಲ್ಲಿಂದ ರೋಟರಿ ಚಿತಾಗಾರಕ್ಕೆ ಮೆರವಣಿಗೆ ಆರಂಭವಾಗಿತ್ತು. ಮೆರವಣಿಗೆ ಸಿದ್ಧಯ್ಯ ರಸ್ತೆ ತಲುಪುತ್ತಿದ್ದಂತೆಯೇ ಏಕಾಏಕಿ ಮತ್ತೆ ಕಲ್ಲುತೂರಾಟ ಆರಂಭವಾಗಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ಕಲ್ಲು ತೂರಾಟದಿಂದ ಹಲವು ಮಂದಿಗೆ ಗಾಯವಾಗಿದ್ದು, ಓರ್ವನಿಗೆ ಗಂಭೀರವಾದ ಗಾಯವಾಗಿದೆ ಎಂದು ವರದಿಯಾಗಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ಲಾಠಿ ಪ್ರಹಾರ ನಡೆಸಲಾಗಿದ್ದು, ಕೆಲವು ಕಡೆಗಳಲ್ಲಿ ಟಿಯರ್ ಗ್ಯಾಸ್ ಪ್ರಯೋಗ ಮಾಡಲಾಗಿದೆ.
Also read: ನಿಮಗಿಂತ ಜಾಸ್ತಿ ನನಗೆ ಸಿಟ್ಟಿದೆ, ನೀವು ಹೇಳಿದಂತೆ ಎನ್’ಕೌಂಟರ್ ಮಾಡೋಕಾಗಲ್ಲ: ಈಶ್ವರಪ್ಪ ಖಡಕ್ ಮಾತು
ಜಿಲ್ಲಾಧಿಕಾರಿ, ಜಿಲ್ಲಾ ರಕ್ಷಣಾಧಿಕಾರಿಗಳು ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳದಲ್ಲಿದ್ದು ಪರಿಸ್ಥಿತಿ ನಿಯಂತ್ರಿಸುತ್ತಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post