ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಮ್ಯಾಕ್ ವುಡ್ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಕೊಂಡ್ರಾಸಿ ಉಪೇಂದರ್ ನಿರ್ಮಿಸುತ್ತಿರುವ ಆರ್.ಕೆ.ಗಾಂಧಿ ನಿರ್ದೇಶನದ ಕನ್ನಡ,ತೆಲುಗು, ತಮಿಳು ಭಾಷೆಯಲ್ಲಿ ನಿರ್ಮಾಣವಾಗುತ್ತಿರುವ ‘ರುದ್ರಾಕ್ಷಪುರ’ ಚಲನಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ.
ನಾಲ್ಕು ಹಂತದ ಚಿತ್ರೀಕರಣವನ್ನು ಯಶಸ್ವಿಯಾಗಿ ಕೋಲಾರ ,ಚಿಕ್ಕಬಳ್ಳಾಪುರ ಮತ್ತು ಚಿತ್ರದುರ್ಗದ ಹಲವು ಸುಂದರ ತಾಣಗಳಲ್ಲಿ ಮತ್ತು ಹೈದ್ರಾಬಾದ್ ಗಳಲ್ಲಿ ಚಿತ್ರೀಕರಣ ಮುಗಿಸಿದ್ದು ಅಂತಿಮ ಚಿತ್ರೀಕರಣವನ್ನು ಹಿರಿಯ ನಟ ಶೋಭರಾಜ್ ಅವರು ಲಂಚಕ್ಕಾಗಿ ಆಸೆ ಪಡದೆ ಪ್ರಾಮಾಣಿಕವಾಗಿ ದುಡಿಯುವ ಅಧಿಕಾರಿ ಮತ್ತು ಅವರ ಕುಟುಂಬವನ್ನು ಕೊಲ್ಲುವ ದೃಶ್ಯಗಳನ್ನು ಚಿಕ್ಕಬಳ್ಳಾಪೂರ ಜಿಲ್ಲೆಯ ಸುತ್ತಮುತ್ತ ಚಿತ್ರೀಕರಿಸುವದರೊಂದಿಗೆ ಮುಕ್ತಾಯಗೊಳಿಸಲಾಯಿತು.
ಬೆಂಗಳೂರಿನಿಂದ ಹೈದರಾಬಾದ್ ಚಲನಚಿತ್ರವೊಂದರ ಆಡಿಷನ್ ಗಾಗಿ ತೆರಳುವ ಮೂರು ಜನ ಹುಡುಗಿಯರು ಹಾಗೂ ಮೂರು ಜನ ಹುಡುಗರಿಗೆ ಮಾರ್ಗಮಧ್ಯದಲ್ಲಿರುವ ಅನಂತಪುರ ಸಮೀಪದ ರುದ್ರಾಕ್ಷಪುರ ಕಾಡಿನಲ್ಲಿ ಆಕಸ್ಮಿಕವಾಗಿ ನರಹಂತಕರ ಕೈಗೆ ಸಿಕ್ಕಿಹಾಕಿಕೊಳ್ಳುತ್ತಾರೆ. ಅವರಿಂದ ಆರು ಜನರೂ ಹೇಗೆ ಪಾರಾಗುತ್ತಾರೆ ಎಂಬ ಕುತೂಹಲ ಭರಿತ ಸಾಹಸಮಯ ಕಥಾವಸ್ತು ಚಿತ್ರದಲ್ಲಿದೆ. ತಾರಾಗಣದಲ್ಲಿ ಮಣಿಸಾಯಿತೇಜ, ಪವನ್ ವರ್ಮ, ರಾಜೇಶ್ ರೆಡ್ಡಿ, ವೈಢೂರ್ಯ, ರೇಖಾ, ಸುನೀತ, ಅಕ್ಷರ ನಿಹ, ವೆಂಕಟಗಿರಿ ಶ್ರೀನಿವಾಸ, ಆನಂದ್,ಸಂತೋಷ್, ನಾಗಮಹೇಶ್, ಮಂತ್ರಿ ರಾಘವೇಂದ್ರ, ಶೋಭರಾಜ್ ,ಸುನಂದ, ಶಿವ, ಛಾಂದನಿ,ಸತ್ಯದೇವ, ಭಕ್ತರಹಳ್ಳಿ ರವಿ, ವೀರಬಾಬು ,ಸುರೇಶ್ ಕೊಂಡೇಟಿ, ಕೃಷ್ಣ, ತರುಣ್, ಪವನ್‌ಕುಮಾರ್, ರಾಜೇಂದ್ರ, ಜೀವ, ರವಿಕುಮಾರ್, ಪದ್ಮಜಯಂತಿ, ಏಕಾಂತ್ ರೆಡ್ಡಿ ಮೊದಲಾದವರು ಅಭಿನಯಿಸಿದ್ದಾರೆ.
Also read: ಹಿಂದೂ ಕಾರ್ಯಕರ್ತನನ್ನು ಹತ್ಯೆಗೈದ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ರಾಮ್ ಸೇನೆ ಆಗ್ರಹ
ಗಂಟಾಡಿ ಕೃಷ್ಣ ಮತ್ತು ಜಯಸೂರ್ಯ ಸಾಹಿತ್ಯ ಮತ್ತು ಸಂಗೀತವಿದೆ, ಎಂ.ನಾಗೇಂದ್ರಕುಮಾರ ರೇಲಂಗಿ ಛಾಯಾಗ್ರಹಣ, ಸ್ಟಾರ್ ಮಲ್ಲಿ, ಬಾಜಿರವರ ಸಾಹಸ, ರಾಜು ದಾಸರಿ ಸ್ಥಿರಚಿತ್ರಣ, ಮಲ್ಲಿ ಸಂಕಲನ, ವೀರಬಾಬು ಪತ್ರಿಕಾ ಸಂಪರ್ಕ, ಡಾ.ಪ್ರಭು ಗಂಜಿಹಾಳ, ಡಾ.ವೀರೇಶ್ ಹಂಡಗಿ ಪ್ರಚಾರಕಲೆ, ಕಲಾ ನಿರ್ದೇಶನ ಕರೀಮ್, ಪ್ರಸಾಧನ ಮೇಕಪ್ ಸಿದ್ದು, ನೃತ್ಯ ಅಣ್ಣಾರಾವ್ ,ಹಲವಾರು ಚಿತ್ರಗಳನ್ನು ನಿರ್ದೇಶಿಸಿರುವ ಯುವ ಉತ್ಸಾಹಿ ನಿರ್ದೇಶಕ ಆರ್.ಕೆ.ಗಾಂಧಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಈ ಮೊದಲೇ ನಿರ್ಧರಿಸಿದಂತೆ ಇದೆ ತಿಂಗಳು ಚಿತ್ರ ಬಿಡುಗಡೆಯಾಗಬೇಕಿತ್ತು. ಕೆಲವು ಕಾರಣಾಂತರದಿಂದ ಚಿತ್ರೀಕರಣ ತಡವಾಗಿದ್ದರಿಂದ ಚಿತ್ರವನ್ನು ಮಾರ್ಚ ತಿಂಗಳಲ್ಲಿ ತೆರೆಗೆ ತರುವ ಪ್ರಯತ್ನ ನಡೆದಿದೆ ಎಂದು ನಿರ್ದೇಶಕ ಆರ್.ಕೆ.ಗಾಂಧಿ ತಿಳಿಸಿದ್ದಾರೆ.
ವರದಿ: ಡಾ. ಪ್ರಭು ಅ ಗಂಜಿಹಾಳ-9448775346
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post