ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕರ್ನಾಟಕ ರಾಜ್ಯ ಸುರಕ್ಷತಾ ಸಂಸ್ಥೆ (ರಿ) ಕಾರ್ಖಾನೆಗಳು, ಬಾಯ್ಲರ್ ಗಳು, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆ ಹಾಗೂ ಸುರಕ್ಷತಾ ಪರಿಷತ್‌ನ ಸಹಯೋಗದೊಂದಿಗೆ ಜಯನಗರದ ಶಿವರಾತ್ರೀಶ್ವರ ಸೆಂಟರ್ ಜೆ.ಎಸ್.ಎಸ್. ಆಡಿಟೋರಿಯಮ್ ನಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಸುರಕ್ಷತಾ ದಿನಾಚರಣೆ National Safety day celebration ಕಾರ್ಯಕ್ರಮದಲ್ಲಿ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ Labor Minister Shivarama Hebbar ಅವರ ಅನುಪಸ್ಥಿತಿಯಲ್ಲಿ ರಾಜ್ಯಮಟ್ಟದ ಸುರಕ್ಷತಾ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.
ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಪ್ರಾರಂಭಿಸಿ, ಸುರಕ್ಷತಾ ಧ್ವಜಾರೋಹಣ ಮತ್ತು ಸುರಕ್ಷತಾ ವಾಗ್ದಾನ ತೆಗೆದುಕೊಳ್ಳಲಾಯಿತು. ಇಲಾಖೆಯ ನಿರ್ದೇಶಕ ಶ್ರೀನಿವಾಸ್, ಅಪೋಟೆಕ್ಸ ರಿಸರ್ಚ್ ಪ್ರೈವೇಟ್ ಲಿಮಿಟೆಡ್ ನಿರ್ದೇಶಕ ಯೋಗಾಂಜನೇಯ ರೆಡ್ಡಿ, ರಾಷ್ಟೀಯ ಸುರಕ್ಷತಾ ಪರಿಷತ್ತಿನ ಗೌರವ ಕಾರ್ಯದರ್ಶಿ ಪಿ.ಸಿ. ವೆಂಕಟೇಶ್ವರಲು ಧ್ವಜಾರೋಹಣ ನೆರವೇರಿಸಿದರು.
ಸುರಕ್ಷತಾ ಸಂಸ್ಕೃತಿಯ ವಿಕಾಸಕ್ಕಾಗಿ ಯುವಪೀಳಿಗೆಯನ್ನು ಪ್ರೋತ್ಸಾಹಿಸಿ ಎಂಬುದು ಈ ಬಾರಿಯ ಸುರಕ್ಷತಾ ದಿನದ ವಿಷಯ ವಾಕ್ಯವಾಗಿತ್ತು. ಈ ವಿಷಯವನ್ನು ಮುಂದಿಟ್ಟುಕೊಂಡು ವಿವಿಧ ಜಿಲ್ಲೆಗಳಿಂದ ಆಗಮಿಸಿದ ಉದ್ಯೋಗಿಗಳಿಗೆ ಕಾರ್ಯಾಗಾರ ಏರ್ಪಡಿಸಲಾಗಿತ್ತು. ಸುರಕ್ಷತೆ, ಆರೋಗ್ಯ ಮತ್ತು ಕಾರ್ಖಾನೆಯ ಕಾನೂನು ಮತ್ತು ಕಾಯ್ದೆ ವಿಷಯದ ಮೇಲೆ ನುರಿತ ತಜ್ಞರು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಜೆ ಎಸ್ ಎಸ್ ಹೈಸ್ಕೂಲ್ ಮತ್ತು ಕಾಲೇಜು ವಿದ್ಯಾರ್ಥಿಗಳು, ಉಪಾಧ್ಯಾಯರು, ಇಲಾಖೆಯ ಹಿರಿಯ ಮತ್ತು ಕಿರಿಯ ಅಧಿಕಾರಿಗಳು, ರಾಜ್ಯದ ವಿವಿಧ ಜಿಲ್ಲೆಯಗಳಿಂದ ಆಗಮಿಸಿದ ವಿವಿಧ ಕಾರ್ಖಾನೆಗಳ ಉದ್ಯೋಗಿಗಳು ಭಾಗವಹಿಸಿದ್ದರು.
ವೇದಿಕೆಯ ಕಾರ್ಯಕ್ರಮ ಜ್ಯೋತಿ ಬೆಳಗಿಸಿ ಪ್ರಾರಂಭಿಸಿದರು. ವೇದಿಕೆಯಲ್ಲಿ ಕಾರ್ಖಾನೆಗಳು, ಬಾಯ್ಲರ್ ಗಳು, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆ ನಿರ್ದೇಶಕ ಶ್ರೀನಿವಾಸ್, ಅಡಿಷನಲ್ ಡೈರೆಕ್ಟರ್ ಮಂಜಪ್ಪ, ರಾಷ್ಟೀಯ ಸುರಕ್ಷತಾ ಪರಿಷತ್ತಿನ ಗೌರವ ಕಾರ್ಯದರ್ಶಿ ಪಿ.ಸಿ. ವೆಂಕಟೇಶ್ವರಲು, ಕಾರ್ಯಕ್ರಮ ಆಯೋಜಿಸಿ ಹೆಚ್ಚಿನ ಸಹಾಯ ಮಾಡಿರುವ ಬಾಶ್ ಕಾರ್ಖಾನೆಯ ಉಪಾಧ್ಯಕ್ಷರು ಮತ್ತು ಪ್ಲಾಂಟ್ ಹೆಡ್ ಹೆಚ್.ಬಿ. ತೋಂಡೇಶ್, ಜಿ.ಇ. ಸಮೂಹದ ವ್ಯವಸ್ಥಾಪಕ ನಿರ್ದೇಶಕರು ಮಹೇಶ್ ಶಾಸ್ತ್ರೀ , ಕರ್ನ್ ಲಿವರ್ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರಾದ ಚಾರ್ಜ್ ಫಿಷರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕೇಂದ್ರ ಕಾರ್ಮಿಕ ಸಚಿವಾಲಯವು 1966ರ ಮಾರ್ಚ್ 4ರಂದು ರಾಷ್ಟ್ರೀಯ ಸುರಕ್ಷತಾ ಪರಿಷತ್ ಸ್ಥಾಪಿಸಿತು. ಸ್ವಾಯತ್ತ ಸಂಸ್ಥೆಯಾಗಿ, ಎಲ್ಲ ಹಂತಗಳಲ್ಲಿ ಸುರಕ್ಷತೆ ಮತ್ತು ಆರೋಗ್ಯದ ಮೇಲಿನ ಸುಸ್ಥಿರತೆಯನ್ನು ವೃದ್ದಿಸುವುದು, ಉತ್ತೇಜಿಸುವುದು ಮತ್ತು ನಿರ್ವಹಿಸುವ ಕೆಲಸ ಮಾಡಲಾಗುತ್ತಿದೆ. ಕಾರ್ಯಕ್ರಮ ಆರಂಭಕ್ಕೆ ಮುನ್ನ ಕಾರ್ಖಾನೆಗಳು, ಬಾಯ್ಲರ್ ಗಳು, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆ ನಿರ್ದೇಶಕ ಶ್ರೀನಿವಾಸ್ ಇಲಾಖೆಯ ಅಭಿವೃದ್ಧಿಗಾಗಿ ಸಂವಾದ ಮತ್ತು ಸಲಹೆ ಕಾರ್ಯಕ್ರಮ ಆಯೋಜಿಸಿ ಹಾಜರಿದ್ದರು. ಉದ್ಯೋಗಿಗಳಿಂದ ಸಲಹೆಯನ್ನು ಪಡೆದರು, ಸಂವಾದ ಸಲಹೆಯನ್ನು ಮುಂದಿನ ದಿನಗಳಲ್ಲಿ ಸರಿಪಡಿಸಲಾಗುತ್ತದೆ ಎಂದು ಅವರು ಆಶ್ವಾಸನೆ ನೀಡಿದರು.
ಸುರಕ್ಷತೆಗೆ ಹೆಚ್ಚಿನ ಮಹತ್ವ ಸಿಗುವ ದೃಷ್ಠಿಯಿಂದ ಮುಂದಿನ ವರ್ಷದ ಸುರಕ್ಷತಾ ದಿನಾಚರಣೆಯನ್ನು ರಾಜ್ಯದ ರಾಜದಾನಿಯಲ್ಲಿ ಪ್ರಾರಂಭ ಮಾಡಿ ಸಮಾರೋಪ ಸಮಾರಂಭವನ್ನು ಬೇರೆ ಸ್ಥಳದಲ್ಲಿ ವಿಶೇಷ ರೀತಿಯಲ್ಲಿ ಮಾಡಲಾಗುತ್ತದೆ. ಸಮಯದ ಅಭಾವದಿಂದ ತಮ್ಮ ಯಾವುದೇ ಸಲಹೆ ಸೂಚನೆಗಳು ಇದ್ದರೆ, ನಮ್ಮ ಗಮನಕ್ಕೆ ತರಲು ಮನವಿ ಮಾಡಿದರು.
ಭಾರ್ಗವಿ ಆರ್ಟ್ಸ್ ಮತ್ತು ನೃತ್ಯ ಅಕಾಡೆಮಿಯ ಸದಸ್ಯರಿಂದ ನೃತ್ಯ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅತ್ಯುತ್ತಮ ಸುರಕ್ಷತಾ ಪದ್ದತಿಯನ್ನು ಅಳವಡಿಸಿ ಉತ್ತಮ ಸುರಕ್ಷತಾ ವಾತವರಣ ಮೂಡಿಸಿದ ಕಾರ್ಖಾನೆ ಮತ್ತು ಬಾಯ್ಲರುಗಳ ಉತ್ತಮ ನಿರ್ವಹಣಾ ಪದ್ಧತಿಗಳನ್ನು ಅನುಸರಿಸುತ್ತಿರುವ ಕೈಗಾರಿಕೆಗಳನ್ನು ಇಲಾಖೆಯು ಗುರುತಿಸಿ ಪ್ರಶಸ್ತಿಗಳನ್ನು ನೀಡಲಾಯಿತು.
ಸುರಕ್ಷತಾ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆಯನ್ನು ಮಾಡಿದ ಕಾರ್ಮಿಕರಿಗೆ, ಸುರಕ್ಷತಾ ಅಧಿಕಾರಿಗೆ, ವೈದ್ಯಾಧಿಕಾರಿಗಳಿಗೆ ಮತ್ತು ಕಾರ್ಖಾನೆಯ ಕಲ್ಯಾಣ ಅಧಿಕಾರಿಗಳಿಗೆ ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಲಾಯಿತು. ರಾಜ್ಯ ಮಟ್ಟದ ಸುರಕ್ಷತಾ ರಸಪ್ರಶ್ನೆ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಇದೇ ಸಂದರ್ಭದಲ್ಲಿ ಬಹುಮಾನಗಳನ್ನು ವಿತರಿಸಲಾಯಿತು.
ಬಜೆಟ್ ಹಿನ್ನೆಲೆಯಲ್ಲಿ ಆಹ್ವಾನಿತ ಅತಿಥಿಗಳಾದ ಕಾರ್ಮಿಕ ಸಚಿವರಾದ ಮಾನ್ಯ ಶ್ರೀ ಶಿವರಾಮ್ ಹೆಬ್ಬರ್ ಹಾಗೂ ಸರ್ಕಾರದ ಕಾರ್ಮಿಕ ಇಲಾಖೆಯ ಅಡಿಷನಲ್ ಸೆಕ್ರೆಟರಿ ಡಾ.ಜಿ.ಕಲ್ಪನಾ ಐ ಎ ಎಸ್ ಇವರು ಹಾಜರಾಗಿರಲಿಲ್ಲ, ಶುಭಾಶಯದ ಸಂದೇಶಗಳನ್ನು ಕಳಿಸುವ ಮೂಲಕ ಕಾರ್ಯಕ್ರಮಕ್ಕೆ ಶುಭಾಶಯಗಳು ಕೊರಿದ್ದರು.
ವರದಿ: ಮುರುಳೀಧರ್ ನಾಡಿಗೇರ್
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post