ಶಿಕಾಗೊ:ಅ-29:ಮಿಯಾಮಿಗೆ ತೆರಳಬೇಕಿದ್ದ ಅಮೆರಿಕನ್ ಏರ್ ಲೈನ್ಸ್ ನ ಬೋಯಿಂಗ್ 767 ವಿಮಾನವು ಚಿಕಾಗೋ ವಿಮಾನನಿಲ್ದಾಣದಿಂದ ಟೇಕಾಫ್ ಆಗುವ ವೇಳೆಯಲ್ಲಿ ವಿಮಾನಕ್ಕೆ ಬೆಂಕಿಹೊತ್ತಿಕೊಂಡ ಪರಿಣಾಮ 20 ಜನ ಪ್ರಯಾಣಿಕರು ಗಾಯಗೊಂಡಿರುವ ಘಟನೆ ನಡೆದಿದೆ.
ವಿಮಾನ ಟೇಕಾಫ್ ಆಗುತ್ತಿದ್ದಂತೆಯೇ ಬೆಂಕಿ ಕಾಣಿಸಿಕೊಮ್ದಿದೆ. ತಕ್ಷಣ ಎಚ್ಚೆತ್ತ ಸಿಬ್ಬಂದಿ ತುತರ್ು ನಿರ್ಗಮನ ದ್ವಾರಗಳ ಮೂಲಕ ಪ್ರಯಾಣಿಕರಿಗೆ ಪಾರಾಗಲು ಸೂಚಿಸಿದರು. ಎಮಜರ್ೆನಿ ಸ್ಲೈಡ್ ಮೂಲ ಪ್ರಯಾಣಿಕರು ನಿರ್ಗಮಿಸುವ ಸಂದರ್ಭದಲ್ಲಿ 20 ಮಂದಿ ಪ್ರಯಾಣಿಕರಿಗೆ ತರಚು ಗಾಯಗಳು ಮತ್ತು ಮೂಳೆಗೆ ಪೆಟ್ಟಾಗಿವೆ. ಗಾಯಾಳುಗಳಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿದೆ. ಈ ವಿಮಾನದಲ್ಲಿ 161 ಪ್ರಯಾಣಿಕರು ಮತ್ತು ಒಂಭತ್ತು ಮಂದಿ ಸಿಬ್ಬಂದಿ ಇದ್ದರು.
ಈ ಅವಘಡ ಸಂಭವಿಸಲು ಕಾರಣ ಏನು ಎಂಬುದು ಪತ್ತೆಯಾಗಿಲ್ಲ. ವಿಮಾನದ ಟಯರ್ ಗೆ ಬೆಂಕಿ ಹತ್ತಿಕೊಂಡಿತ್ತು ಎಂದು ಹೇಳಲಾಗುತ್ತಿದ್ದರೂ. ವಿಮಾನದ ಇಂಜಿನ್ನಲ್ಲಿ ಸಮಸ್ಯೆ ಕಂಡು ಬಂದುದೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.














