ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಾಧನೆಗಳ ಸರದಾರ ಡಾ.ಎಸ್.ವಿ. ಶಾಸ್ತ್ರಿಯವರಿಗೆ ಮಾರ್ಚ್ 19ರಂದು ಸಂಜೆ 6 ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ‘ಶ್ರೀ ಗುರವೇ ನಮ:’ದ ಮೂಲಕ ಅಭಿನಂದನೆಯನ್ನು ಸಲ್ಲಿಸಲಾಗುವುದು ಎಂದು ಅಭಿನಂದನಾ ಸಮಿತಿಯ ಎಸ್.ಕೆ. ಶೇಷಾಚಲ ಹೇಳಿದರು.
ಇಂದು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್.ವಿ.ಶಾಸ್ತ್ರಿಯವರು ಉಪಾಧ್ಯಾಯರಾಗಿ, ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ, ಲೇಖಕರಾಗಿ ಹೆಸರು ಮಾಡಿ ದ್ದಾರೆ. ಹಲವಾರು ಸಂಸ್ಥೆಗಳನ್ನು ಶಿವಮೊಗ್ಗದಲ್ಲಿ ಆರಂಭಿ ಸಿದ್ದಾರೆ. ಸಾವಿರಾರು ಯುವಕ – ಯುವತಿಯರನ್ನು ಸದಸ್ಯರನ್ನಾಗಿ ಮಾಡಿ, ವ್ಯಕ್ತಿತ್ವ ವಿಕಸನ ಶಿಬಿರಗಳನ್ನು ಆಯೋ ಜಿಸಿದ್ದಾರೆ. ಅನೇಕರಿಗೆ ಧೈರ್ಯ ತುಂಬಿದ್ದಾರೆ. ಅತಿ ಹೆಚ್ಚು ಬಾರಿ ರಕ್ತದಾನ ಮಾಡಿದ್ದಾರೆ. ಅವರ ಶಿಷ್ಯಂದಿರು ಇಂದು ವಿಶ್ವದಾದ್ಯಂತ ಇದ್ದಾರೆ. ಇಂತಹ ಮಹಾನ್ ಗುರುವನ್ನು ಅಭಿನಂದಿಸುವುದು ನಮ್ಮ ಕರ್ತವ್ಯ ಕೂಡ ಆಗಿದೆ ಎಂದರು.

ಗುರುಕುಲ ಶಿಕ್ಷಣವನ್ನ ಸ್ಥಾಪಿಸಿ, ಪದವಿಪೂರ್ವ, ಪದವಿ ಶಿಕ್ಷಣ ಕಾಲೇಜುಗಳ ಮೂಲಕ ವಿದ್ಯಾದಾನ ಮಾಡಿದ ಮಹ ನೀಯರು ಕೂಡ ಇವರಾಗಿದ್ದಾರೆ. ಜೂನಿಯರ್ ಛೇಂಬರ್ ಮೂಲಕ ಸೇವೆ ಮಾಡಿದ್ದಾರೆ. ಮೊಟ್ಟ ಮೊದಲ ಬಾರಿಗೆ ಶಿವಮೊಗ್ಗದಲ್ಲಿ ಸಂಸತ್ ಅಧಿವೇಶನದ ಅಣಕು ಪ್ರದರ್ಶನವನ್ನು ವಿದ್ಯಾರ್ಥಿಗಳ ಮೂಲಕ ನೀಡಿದ್ದಾರೆ. ಸುಮಾರು 4500ಕ್ಕೂ ಹೆಚ್ಚು ತರಬೇತಿ ಶಿಬಿರಗಳನ್ನು ಆಯೋಜಿಸಿದ ಖ್ಯಾತಿ ಇವರದ್ದಾಗಿದ್ದು, ಇವರ ಸಾಧನೆ ಗುರುತಿಸಿ ಇಂಡಿಯನ್ ಎಂಪೈರ್ ವಿ.ವಿ. ಗೌರವ ಡಾಕ್ಟರೇಟ್ ಪದವಿ ನೀಡಿದೆ
ಎಂದರು.

Also read: ಮಾರ್ಚ್ 18ರಂದು ಶ್ರೀ ಬಾಲಸುಬ್ರಮಣ್ಯಸ್ವಾಮಿಯ ರಥೋತ್ಸವ
ಅಭಿನಂದನಾ ಸಮಾರಂಭವನ್ನು ಸಚಿವ ಕೆ.ಎಸ್. ಈಶ್ವರಪ್ಪ ಉದ್ಘಾಟಿಸುವರು. ಅಭಿನಂದನಾ ಸಮಿತಿಯು ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಅಧ್ಯಕ್ಷತೆ ವಹಿಸುವರು. ಸಂಸದ ರಾಘವೇಂದ್ರ ಅಭಿನಂದನಾ ಗ್ರಂಥ ಬಿಡುಗಡೆ ಮಾಡುವರು. ಮುಖ್ಯ ಅತಿಥಿಗಳಾಗಿ ಶಾಸಕರಾದ ಅಶೋಕ್ ನಾಯ್ಕ, ಎಸ್. ರುದ್ರೇಗೌಡ, ಮಂಜುನಾಥ ಭಂಡಾರಿ, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಮಾಜಿ ಶಾಸಕರಾದ ಆರ್. ಪ್ರಸನ್ನಕುಮಾರ್, ಕೆ.ಬಿ. ಪ್ರಸನ್ನ ಕುಮಾರ್, ಆರ್.ಕೆ. ಸಿದ್ದರಾಮಣ್ಣ, ಎಂ.ಬಿ. ಭಾನುಪ್ರಕಾಶ್, ಉಪಮೇಯರ್ ಶಂಕರ್ ಗನ್ನಿ, ಪಾಲಿಕೆ ವಿಪಕ್ಷ ನಾಯಕ ಹೆಚ್.ಸಿ. ಯೋಗೀಶ್, ಸಣ್ಣ ಕೈಗಾರಿಕೆಗಳ ನಿಗಮದ ಉಪಾಧ್ಯಕ್ಷ ಎಸ್. ದತ್ತಾತ್ರಿ, ಮಾಜಿ ಸ್ಕೂಡಾ ಅಧ್ಯಕ್ಷ ಎಸ್.ಎಸ್. ಜ್ಯೋತಿ ಪ್ರಕಾಶ್ ಸೇರಿದಂತೆ ಹಲವರು ಗಣ್ಯರು ಉಪಸ್ಥಿತರಿರುವರು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಪದಾಧಿಕಾರಿಗಳಾದ ಶಾಂತಾ ಶೆಟ್ಟಿ, ಪುಷ್ಪಾ ಶೆಟ್ಟಿ, ಅ.ನಾ. ವಿಜಯೇಂದ್ರ, ವೆಂಕಟೇಶ್ ಮೂರ್ತಿ, ಜಿ, ವಿಜಯಕುಮಾರ್, ಎನ್.nಪರಮೇಶ್, ಹರ್ಷ ಕಾಮತ್, ಎಸ್.ಎಸ್, ವಾಗೀಶ್, ಅನಂತಶೆಟ್ಟಿ, ಓಂಪ್ರಕಾಶ್ ತೇಲ್ಕರ್ ಮೊದಲಾದವರಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















