ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪ್ರತಿ ಬಾರಿಯೂ ಅಭಿಮಾನಿಗಳು ಹಾಗೂ ಸಾರ್ವಜನಿಕರೊಂದಿಗೆ ಜನ್ಮದಿನ ಆಚರಿಸಿಕೊಳ್ಳುತ್ತಿದ್ದ ಸಚಿವ ಕೆ.ಎಸ್. ಈಶ್ವರಪ್ಪ ಅವರ ಪುತ್ರ ಯುವ ಮುಖಂಡ ಕೆ.ಈ. ಕಾಂತೇಶ್ K E Kantesh ಅವರು ಈ ಬಾರಿ ಸಂಭ್ರಮಿಸಿಕೊಳ್ಳುವುದಿಲ್ಲ ಎಂದಿದ್ದಾರೆ.
ಈ ಕುರಿತಂತೆ ಮಾತನಾಡಿದ ಅವರು, ಇತ್ತೀಚೆಗೆ ಶಿವಮೊಗ್ಗ ನಗರದಲ್ಲಿ ನಡೆದ ಕೆಲವು ಅಹಿತಕರ ಘಟನೆಗಳಿಂದ ಎಲ್ಲರೂ ಬಹಳ ನೊಂದಿದ್ದೇವೆ. ಇಂತಹ ಸಂದರ್ಭದಲ್ಲಿ ಬರುತ್ತಿರುವ ನನ್ನ ಜನ್ಮದಿನ ಆಚರಿಸಿಕೊಳ್ಳಲು ಯಾವ ಮನಸ್ಸೂ ನನಗಿಲ್ಲ. ಹೀಗಾಗಿ, ಈ ಬಾರಿ ಜನ್ಮದಿನವನ್ನು ಆಚರಿಸಿಕೊಳ್ಳದೇ ಇರಲು ನಿರ್ಧರಿಸಿದ್ದೇನೆ ಎಂದರು.
Also read: ಗಮನಿಸಿ! ಭದ್ರಾವತಿಯ ಈ ಪ್ರದೇಶಗಳಲ್ಲಿ ಮಾರ್ಚ್ 20ರಂದು ಕರೆಂಟ್ ಇರಲ್ಲ
ನನ್ನ ಮೇಲಿನ ಪ್ರೀತಿ ಅಭಿಮಾನಕ್ಕಾಗಿ ತಾವು ಹಾರ, ತುರಾಯಿ, ಉಡುಗೊರೆ ತರುವ ಹಾಗೂ ಫ್ಲೆಕ್ಸ್’ಗಳಿಗಾಗಿ ವೆಚ್ಚ ಮಾಡುವ ಹಣವನ್ನು ಹಿಂದೂ ಸುರಕ್ಷಾ ನಿಧಿಗೆ ಅರ್ಪಿಸಿ, ಸಮಾಜದ ಜೊತೆಗೆ ಬಲವಾಗಿ ನಿಲ್ಲಬೇಕು ಎಂದು ವಿನಂತಿಸಿಕೊಳ್ಳುತ್ತೇನೆ ಎಂದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post