ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪ್ರೇಮ ವಿವಾಹ ಕರುಳ ಕುಡಿಯನ್ನು ನೀಡಿತು. ಇಲ್ಲಿ ಮೊದಲಿನಿಂದಲೂ ನಿಗೂಢವಾಗಿ ಆಕ್ರೋಶಕ್ಕೆ ಕಾರಣವಾಗಿದ್ದ ಜಾತಿ ಎಂಬ ವಿಕೃತತೆಗೆ ಈಗ ಸಂಬಂಧವನ್ನು ಕಳಚುವ ಯತ್ನ ಮಾಡಿತೇ? ಪ್ರೀತಿಸಿ ಮದುವೆಯಾಗಿ ಮನೆಯವರ ಹಿರಿಯರ ಆಶೀರ್ವಾದ ಪಡೆಯಲು ಸಾಧ್ಯವಾಗದ ಹಿನ್ನೆಲೆಯ ಕಾರಣ ಇಂತಹದೊಂದು ಜಗಳಕ್ಕೆ ದಾರಿಮಾಡಿಕೊಟ್ಟಿದೆ.
ಭದ್ರಾವತಿಯ ಮೈದೊಳಲಿನ ನಿವಾಸಿಯಾಗಿರುವ ಸುನಿತಾ (26) ಅದೇ ಗ್ರಾಮದ ರಮೇಶ್ (35) ಎಂಬುವರೊಂದಿಗೆ ಪ್ರೀತಿಯಾಗಿರುತ್ತದೆ. (ಇಬ್ಬರ ಹೆಸರು ಬದಲಿಸಲಾಗಿದೆ) ಮೊದಲೇ ಯುವತಿ ಸುನಿತಾ ನಿಮ್ಮ ಜಾತಿ ಬೇರೆ ಮತ್ತು ನಮ್ಮ ಜಾತಿ ಬೇರೆ ಇಲ್ಲಿಗೆ ನಿಲ್ಲಿಸುವಂತೆ ರಮೇಶ್’ಗೆ ತಾಕೀತು ಮಾಡಿದ್ದಾಳೆ.
ನಾನು ಮನೆಯಲ್ಲಿ ಈ ಪ್ರೀತಿಯನ್ನ ಒಪ್ಪಿಸುವೆ. ನೀನು ಹಿಂಜರಿಯ ಬೇಡ ಎಂದು ಒಪ್ಪಿಸಿದ ಯುವಕ ರಮೇಶ್ ಎಂಸಿ ಹಳ್ಳಿಯಲ್ಲಿರುವ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸುನಿತಾಳನ್ನು ಮದುವೆಯಾಗುತ್ತಾನೆ. ಒಂದು ಗಂಡು ಮಗುವಾಗಿದ್ದು 2018 ರಲ್ಲಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಗಂಡ ಹೆಂಡತಿ ಎಂದು ಮದುವೆಯಾಗುತ್ತಾರೆ.
ಆದರೆ ರಮೇಶ್ ಮನೆಯಲ್ಲಿ ಈ ಮದುವೆಯನ್ನು ಒಪ್ಪದ ಗಿರಿ ಮನೆಯವರು ಆಶ್ರಯ ಕೇಳಿಬಂದ ಸುನಿತಾಳನ್ನು ಸೊಸೆಯೆಂದು ಒಪ್ಪಲಿಲ್ಲ. ನೀನು ಉನ್ಬತ ಜಾತಿಯವನು ಇತರೆ ಜಾತಿಯವರ ಜೊತೆ ಯಾಕೆ ಮಾದುವೆ ಮಾಡಿಕೊಂಡಿರುವೆ ಎಂದು ರಮೇಶ್ ಮನೆಯವರು ಆತನ ಮಂಕುಬೂದಿ ಎರಚಿ ಸುನಿತಾಳನ್ನು ತಿರಸ್ಕರಿಸುವಂತೆ ಮಾಡಿದ್ದಾರೆ ಆರೋಪಿಸಲಾಗಿದೆ.
ಪತಿಯನ್ನ ಅರಿಸಿ ಬಂದ ಸುನಿತಾಳಿಗೆ ರಮೇಶ್ ಮನೆಯವರು ಕಾಲಿನಿಂದ ತುಳಿದು ಜೀವ ಬೆದರಿಕೆ ಹಾಕಿರುವುದಾಗಿ ಆಕೆ ಆರೋಪಿಸಿ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post