ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮೇಕ್ ಇನ್ ಇಂಡಿಯಾ Make in India ಯೋಜನೆಯಿಂದ ಹೊಸ ಹೊಸ ಕೈಗಾರಿಕೆಗಳಿಗೆ ಹಾಗೂ ಉದ್ಯಮಿಗಳಿಗೆ ಉತ್ತಮ ಅವಕಾಶ ಸಿಗುತ್ತಿದೆ ಎಂದು ವಿಧಾನ ಪರಿಷತ್ ಶಾಸಕ ಡಿ.ಎಸ್. ಅರುಣ್ D S Arun ಹೇಳಿದರು.
ಶಿವಮೊಗ್ಗ ನಗರದಲ್ಲಿ ಗಣೇಶ್ ರೂಫಿಂಗ್ ಹಾಗೂ ಲ್ಯಾಂಡ್‌ಮಾರ್ಕ್ ಕ್ರಾಫ್ಟ್ ಸಂಸ್ಥೆ ವತಿಯಿಂದ ಆಯೋಜಿಸಿದ್ದ “ಫ್ಯಾಬ್ರಿಕೇರ‍್ಸ್ ಮೀಟ್” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕೈಗಾರಿಕಾ ಕ್ಷೇತ್ರದಲ್ಲಿ ಹೊಸ ಉದ್ಯಮಗಳಿಗೆ ಹಾಗೂ ಸಾಮಾನ್ಯ ಜನರಿಗೆ ಹಾಗೂ ಎಲ್ಲ ವರ್ಗದ ಜನರಿಗೆ ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ಮೇಕ್‌ಇನ್ ಇಂಡಿಯಾದಿಂದ ಉತ್ತಮ ಅವಕಾಶ ಸಿಗುತ್ತಿದೆ. ಇದರಿಂದ ಉದ್ಯೋಗ ಸೃಷ್ಠಿ ಆಗುತ್ತಿದೆ ಎಂದು ತಿಳಿಸಿದರು.
ಉದ್ಯಮಿಗಳ ಸಮಾವೇಶಗಳಿಂದ ಕಂಪನಿಗಳ ಹೊಸ ಹೊಸ ಉತ್ಪನ್ನಗಳ ಪರಿಚಯ ಹಾಗೂ ಗುಣಮಟ್ಟ ಹಾಗೂ ಕಾರ್ಯಕ್ಷಮತೆ ಬಗ್ಗೆ ಎಲ್ಲರಿಗೂ ಪರಿಚಿತವಾಗುತ್ತದೆ. ಎಲ್ಲ ಉದ್ಯಮಿದಾರರ ನಡುವೆ ಉತ್ತಮ ಸಂಪರ್ಕ ಸಂವಹನ ಸಾಧ್ಯವಾಗುತ್ತದೆ. ಕಾರ್ಮಿಕರಿಗೂ ಕೈಗಾರಿಕಾ ಕ್ಷೇತ್ರದಲ್ಲಿನ ಹೊಸ ಬೆಳವಣಿಗೆಗಳ ಬಗ್ಗೆ ಅರಿವು ಮೂಡುತ್ತದೆ ಎಂದರು.
ಗಣೇಶ್ ರೂಫಿಂಗ್ ಸಂಸ್ಥೆಯು ಹಾಗೂ ಮಾಲೀಕ ಪ್ರದೀಪ್ ಎಲಿ ಅವರು ಗ್ರಾಹಕರಿಗೆ ಗುಣಮಟ್ಟದ ವಸ್ತುಗಳನ್ನು ಒಳ್ಳೆಯ ಬೆಲೆಯಲ್ಲಿ ವಿತರಿಸುತ್ತ ಮಾರುಕಟ್ಟೆಯಲ್ಲಿ ಉತ್ತಮ ಹೆಸರು ಹೊಂದಿದೆ ಎಂದು ಹೇಳಿದರು.
Also read: ಇಬ್ಬರು ಮಕ್ಕಳೊಂದಿಗೆ ಮಹಿಳೆ ಆತ್ಮಹತ್ಯೆ
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್. ಗೋಪಿನಾಥ್ ಮಾತನಾಡಿ, ಮೇಕ್ ಇನ್ ಇಂಡಿಯಾ ಯೋಜನೆಯಲ್ಲಿ ಸರ್ಕಾರದ ಸೌಲಭ್ಯ ಹಾಗೂ ಸಹಾಯಧನದ ಸಹಕಾರ ಪಡೆದು ಹೊಸ ಹೊಸ ಉದ್ಯಮ ಆರಂಭಿಸಬೇಕು. ಸರ್ಕಾರದ ಯೋಜನೆಗಳ ಬಗ್ಗೆ ಅರಿವು ಮೂಡಿಸಿಕೊಂಡು ಪ್ರಯೋಜನ ಪಡೆದುಕೊಳ್ಳಬೇಕು. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸದಸ್ಯತ್ವ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯದರ್ಶಿ ವಸಂತ್ ಹೋಬಳಿದಾರ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕಟ್ಟಡ ನಿರ್ಮಾಣದ ಮೇಲ್ಭಾಗದಲ್ಲಿ ರೂಫಿಂಗ್ ಮಾಡಿಸುವ ಪ್ರವೃತ್ತಿ ಹೆಚ್ಚಾಗಿದೆ ಹಾಗೂ ಆವಶ್ಯಕತೆ ಇದೆ. ಕಟ್ಟಡ ವಿನ್ಯಾಸ ಹಾಗೂ ಭದ್ರತೆಯಲ್ಲಿ ಫ್ಯಾಬ್ರಿಕೇಟರ್ ಕಾರ್ಯಕ್ಷಮತೆ ಮುಖ್ಯ ಎಂದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ನಿರ್ದೇಶಕ, ಗಣೇಶ ರೂಫಿಂಗ್ ಮಾಲೀಕ ಪ್ರದೀಪ್ ವಿ.ಎಲಿ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯ್‌ಕುಮಾರ್, ವಿಪಿನ್ ಲಿಡೋ, ಇಂತಿಹಾಸ್, ರಾಕೇಶ್, ದೀಪಕ್ ಮತ್ತಿತರರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post