ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಎಕ್ಸಿಸ್ ಟೆಕ್ನಾಲಜಿಸ್ ಬೆಂಗಳೂರು ಇವರ ವಿರುದ್ದ ಅರ್ಜಿದಾರ ರಾಜೇಶ್‍ಎ.ಜಿ ಇವರು ತಾವು ಖರೀದಿಸಿದ ಸರಕಿನ ಸೇವಾನ್ಯೂನ್ಯತೆಗಾಗಿ ಸೂಕ್ತ ಪರಿಹಾರ ಕೋರಿ ಶಿವಮೊಗ್ಗ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮುಂದೆ ದಾಖಲಿಸಿದ್ದ ಪ್ರಕರಣದಲ್ಲಿ ಪೀಠವು ಅರ್ಜಿದಾರರಿಗೆ ಸರಕಿನ ಹಣ ಮತ್ತು ನ್ಯಾಯಾಲಯದ ಮತ್ತು ಇತರೆ ಖರ್ಚು ವೆಚ್ಚ ಪಾವತಿಸುವಂತೆ ಆದೇಶಿಸಿದೆ.
ಅರ್ಜಿದಾರರು 2019-20 ರಲ್ಲಿ ಗೃಹೋಪಯೋಗಕ್ಕಾಗಿ ಎಕ್ಸಿಸ್ ಟೆಕ್ನೋಲಜಿಸ್ ಬೆಂಗಳೂರು ಇವರಿಂದ ಸೋಲಾರ್ ವಾಟರ್ ಹೀಟರನ್ನು ರೂ.40,000 ಪಾವತಿಸಿ ಖರೀದಿಸಿರುತ್ತಾರೆ. ವಾಟರ್ ಹೀಟರ್‌ನಲ್ಲಿದ್ದ ನ್ಯೂನ್ಯತೆಗಳನ್ನು ತಿಳಿಸಿ ಸಾಕಷ್ಟು ಬಾರಿ ಸರಿಪಡಿಸಿಕೊಂಡರೂ ಸಮಸ್ಯೆ ಪರಿಹಾರವಾಗದೇ ಅರ್ಜಿದಾರರು ಲಿಖಿತ ನೋಟಿಸಿನ ಮೂಲಕ ವಿನಂತಿಸಿದರೂ ಎದುರುದಾರರು ಪ್ರತಿಕ್ರಿಯಿಸಿದ ಕಾರಣ ಸೂಕ್ತ ಪರಿಹಾರ ಕೋರಿ ಪ್ರಕರಣ ದಾಖಲಿಸಿರುತ್ತಾರೆ.
ವಾಸ್ತವಾಂಶಗಳನ್ನು ಕೂಲಂಕುಷವಾಗಿ ಪರಿಶೀಲಿಸಿ. ಪೀಠವು ಎದುರುದಾರರಿಗೆ ವಾಟರ್ ಹೀಟರ್ ಹಿಂಪಡೆಯುವ ಮುಖಾಂತರ ಖರೀದಿಸಿದ ಮೊತ್ತ ರೂ.40,000ಗಳನ್ನು ಖರೀದಿಯ ದಿನಾಂಕದಿಂದ ಹಣ ಸಂದಾಯ ಮಾಡುವವರೆಗೆ ವಾರ್ಷಿಕ ಶೇ.7 ಬಡ್ಡಿ ದರದಂತೆ ಹಿಂತಿರುಗಿಸಲು ಮತ್ತು ನ್ಯಾಯಾಲಯ ಇತರೆ ವೆಚ್ಚ ರೂ.18000 ಗಳನ್ನು ಹಿಂತಿರುಗಿಸಲು ಆದೇಶಿಸಿದೆ.
Also read: ಬೀದರ್: ರೈತರ ಜಮೀನುಗಳಿಗೆ ತೆರಳುವ ರಸ್ತೆಗಳನ್ನು ಕೂಡಲೇ ದುರಸ್ತಿಗೊಳಿಸಿ
ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ, ಸದಸ್ಯರಾದ ಸವಿತಾ ಬಿ ಪಟ್ಟಣಶೆಟ್ಟಿ, ಬಿ.ಡಿ. ಯೋಗಾನಂದ ಪೀಠವು ಜು.1ರಂದು ಈ ತೀರ್ಪು ನೀಡಿದೆ ಎಂದು ಆಯೋಗದ ಸಹಾಯಕ ನೋಂದಣಿ ಹಾಗೂ ಸಹಾಯಕ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















