ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸ್ಮಾರ್ಟ್ ಸಿಟಿ ಚಾನಲ್ ಫ್ರೇಂಟ್ ಯೋಜನೆಯ ಒಳಾಂಗಣ ಬ್ಯಾಡ್ಮಿಂಟನ್ ಕ್ರೀಡಾಂಗಣವನ್ನು ಕ್ರೀಡಾ ಆಸಕ್ತರಿಗೆ ಅವಕಾಶ ಮಾಡಿಕೊಡಬೇಕಾಗಿದ್ದು, ಈಗಾಗಲೇ ಒಳಾಂಗಣ ಬ್ಯಾಡ್ಮಿಂಟನ್ ಕೋರ್ಟ್ ತಯಾರಾಗಿ ಹಲವು ದಿನಗಳು ಕಳೆದಿದ್ದು, ಬಾಕಿ ಇರುವ ಕಾಮಗಾರಿಗಳನ್ನು ಶೀಘ್ರದಲ್ಲೇ ಪೂರ್ಣಗೊಳಿಸಿ ಕ್ರೀಡಾ ಆಸಕ್ತರಿಗೆ ಅನುವು ಮಾಡಿಕೊಡಬೇಬೇಕೆಂದು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರಿಗೆ ಕ್ರೀಡಾಸಕ್ತರು ಮನವಿ ಸಲ್ಲಿಸಿದರು.
ಸ್ಮಾರ್ಟ್ ಸಿಟಿ ಚಾನಲ್ ಫ್ರೇಂಟ್ ಯೋಜನೆಯ ಪಾರ್ಕ್ ಗಳಲ್ಲಿ ಓಪನ್ ಜಿಮ್ ಗಳನ್ನು ಅಳವಡಿಸಿದ್ದು ಈಗಾಗಲೇ ಈ ಉಪಕರಣಗಳು ಹಾಳಾಗಿದ್ದು ಕಂಡು ಬಂದಿದೆ ಇದನ್ನು ಸರಿಪಡಿಸಬೇಕು. ಹಾಗೂ ಹಗಲು ಕಾವಲುಗಾರರಿದ್ದು ರಾತ್ರಿ ಕಾವಲುಗಾರರನ್ನು ಕೂಡ ನೇಮಿಸಬೇಕು.

Also read: ಸೇವಾನ್ಯೂನ್ಯತೆ ಹಿನ್ನೆಲೆ ಸರಕಿನ ಹಣ, ಇತರೆ ಖರ್ಚು ಪಾವತಿಸುವಂತೆ ಆದೇಶ
ನೆಟ್ ಕ್ರಿಕೇಟ್ ಅಭ್ಯಾಸಕ್ಕೆ ನೆಲ ಅನುವು ಮಾಡಲಾಗಿದೆ, ಆದರೆ ನೆಟ್ ಅನ್ನು ಅನುವುಮಾಡಿಕೊಡಬೇಕು. ( CRICKET PRACTICE NETS ). ಫಾರೆಸ್ಟ್ ಪಾರ್ಕ್ ನಲ್ಲಿ ಮಕ್ಕಳ ಕ್ರೀಡೆಗೆಂದು ಸುಮಾರು 6 ರಿಂದ 8 ಆಟದ ಸಾಮಾಗ್ರಿಗಳನ್ನು ಹಾಕುವುದಕ್ಕೆ ನಿರ್ಧಾರವಾಗಿದ್ದು ಆದರೆ ಅದರಲ್ಲಿ ಕೆಲವು ಸಾಮಾಗ್ರಿಗಳನ್ನು ಅಳವಡಿಸಿದ್ದು, ಈ ಸಾಮಾಗ್ರಿಗಳು ಈಗಾಗಲೇ ಹಾಳಾಗಿರುತ್ತವೆ, ಇವುಗಳನ್ನು ಸರಿಪಡಿಸುವುದರ ಜೊತೆಗೆ ತಮ್ಮೊಂದಿಗೆ ಚರ್ಚಿಸಿರುವಂತೆ ಇನ್ನಿತರೆ ಆಟದ ಸಾಮಾಗ್ರಿಗಳನ್ನು ಕೂಡ ಅಳವಡಿಸಬೇಕಾಗಿದೆ.

ಮನವಿ ಸಲ್ಲಿಕೆ ಸಂದರ್ಭದಲ್ಲಿ ನಾಗರಾಜ್ ಕಂಕಾರಿ, ಪ್ರಭಾಕರ್, ಅಡಿಟರ್ ರಮೇಶ ಇದ್ದರು.










Discussion about this post