ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಬಿಜೆಪಿಯ ಯುವ ಮುಖಂಡ ಪ್ರವೀಣ್ ನೆಟ್ಟಾರು ಅವರ ಬರ್ಬರ ಹತ್ಯೆಯನ್ನು ತೀವ್ರವಾಗಿ ಖಂಡಿಸಿ ನಗರದ ಗೋಪಿ ವೃತ್ತದಲ್ಲಿ ಹಿಂದು ಪರ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾ ಸಂಸದ ಬಿ ವೈ ರಾಘವೇಂದ್ರ, ಆರ್.ಎಸ್.ಎಸ್ ನ ಕರ್ನಾಟಕ ದಕ್ಷಿಣ ಪ್ರಾಂತ ಸಂಪರ್ಕ್ ಸಹ ಪ್ರಮುಖ್ ಯಾದವಕೃಷ್ಣ ಮತ್ತು ಜಿಲ್ಲಾ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ರಾದ ವಾಸುದೇವ್ ಪ್ರತಿಭಟನೆಯನ್ನು ಉದ್ದೇಶೀಸಿ ಮಾತನಾಡಿ, ಹತ್ಯೆಯನ್ನು ತೀವ್ರವಾಗಿ ಖಂಡಿಸಿದರು.
ಈ ಸಂದರ್ಭದಲ್ಲಿ ,ಆರ್.ಎಸ್.ಎಸ್ ನ ದಕ್ಷಿಣ ಪ್ರಾಂತ ಸಹ ಕಾರ್ಯ ವಾಹಕರಾದ ಪಟ್ಟಾಬಿ ರಾಮ್, ಶಾಸಕ ಕೆ. ಎಸ್. ಈಶ್ವರಪ್ಪ, ವಿಧಾನಪರಿಷತ್ ಸದಸ್ಯರಾದ ಎಸ್. ರುದ್ರೇಗೌಡ್ರು, ಡಿ. ಎಸ್. ಅರುಣ್, ವಿಧಾನಪರಿಷತ್ ಮಾಜಿ ಸದಸ್ಯ ಎಂ. ಬಿ. ಭಾನುಪ್ರಕಾಶ್, ಮಹಾನಗರ ಪಾಲಿಕೆ ಮೇಯರ್ ಸುನೀತಾ ಅಣ್ಣಪ್ಪ, ಪ್ರಮುಖರಾದ ಗಿರೀಶ್ ಪಟೇಲ್, ಎ. ಎನ್. ನಟರಾಜ್, ಎಸ್. ಎನ್. ಚನ್ನಬಸಪ್ಪ, ಜ್ಯೋತಿಪ್ರಕಾಶ್, ಚೇತನ್, ಸುಧಾಕರ್, ಪರಿವಾರದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
Also read: ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಕರಾವಳಿ ಪ್ರದೇಶದಲ್ಲಿ ವಿಶೇಷ ಪೊಲೀಸ್ ಕ್ರಮ: ಸಿಎಂ








