ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಭಾರತ ಸೇವಾದಳ ಸಂಸ್ಥೆಯು ರಾಷ್ಟ್ರದ್ವಜದ ಮಹತ್ವ ಸಾರುವ ಏಕೈಕ ಸಂಸ್ಥೆಯಾಗಿದ್ದು ಎಂದು ಭಾರತ ಸೇವಾದಳದ ಜಿಲ್ಲಾಧ್ಯಕ್ಷ ವೈ.ಎಚ್. ನಾಗರಾಜ್ ಹೇಳಿದರು.
ಭೂಪಾಳಂ ಶಾಲೆಯ ಜಿಲ್ಲಾ ಭಾರತ ಸೇವಾದಳ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಜಿಲ್ಲಾ ಸಮಿತಿ ಮತ್ತು ತಾಲೂಕು ಸಮಿತಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಭಾರತ ಸೇವಾದಳ ಶಿಕ್ಷಣ ಕ್ಷೇತ್ರ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದೆ. ಅದರಂತೆ ಜಿಲ್ಲಾ ಸಮಿತಿಯು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಮುಂದಿನ ದಿನಗಳಲ್ಲಿ ತಾಲೂಕು ಸಮಿತಿ ಸಹಕಾರದೊಂದಿಗೆ ಯಶಸ್ವಿಗೊಳಿಸಲಾಗುವುದು ಎಂದು ತಿಳಿಸಿದರು.
Also read: ಅಳಬೇಡ ತಾಯಿ, ನಿಮ್ಮೊಂದಿಗೆ ನಾವಿದ್ದೇವೆ: ಮಳೆಯಿಂದ ಮನೆ ಕಳೆದುಕೊಂಡ ಮಹಿಳೆಗೆ ಕಾಂತೇಶ್ ಧೈರ್ಯ
ಭಾರತ ಸೇವಾದಳವನ್ನು ಇನ್ನು ಉತ್ತುಂಗಕ್ಕೆ ಬೆಳೆಸುವ ನಿಟ್ಟಿನಲ್ಲಿ ಹಲವಾರು ಉತ್ತಮ ಕಾರ್ಯಗಳನ್ನು ಹಮ್ಮಿಕೊಳ್ಳುವ ಉದ್ದೇಶ ಹೊಂದಲಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರಿ ಶಾಲೆ ಬಿಪಿಓ ಏರಿಯಾದಲ್ಲಿ ಸ್ವಚ್ಚತಾ ಮತ್ತು 75 ಸಸಿಗಳನ್ನು ನೆಡುವ ಮೂಲಕ ವನಮಹೊತ್ಸವ ಅಭಿಯಾನ ಹಾಗೂ ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ ಬೈಕ್ ಮತ್ತು ಸೈಕಲ್ ಜಾಥಾ, ತಾಪಂ ಮತ್ತು ಎಲ್ಲಾ ತಾಲೂಕು ಹಾಗೂ ಗ್ರಾಮಾಧಿಕಾರಿಗಳಿಗೆ ರಾಷ್ಟ್ರ ಧ್ವಜ ಕಾರ್ಯಾಗಾರ ಹಮ್ಮಿಕೊಳ್ಳಲು ತೀರ್ಮಾನಿಸಲಾಯಿತು ಎಂದು ತಿಳಿಸಿದರು.
ಸಭೆಯಲ್ಲಿ ಎನ್.ಅರ್. ದೇವಾನಂದ್, ಸಿ.ಪಿ. ಹೆಗ್ಗಡೆ, ನರೇಂದ್ರ, ಸಂತೋಷ್, ಗಾಯತ್ರಿ ಮತ್ತು ವಿ. ಚನ್ನಬಸಪ್ಪ, ರಮೇಶ್ ಬಾಬು ಹಾಗೂ ಜಿಲ್ಲೆಯ ತಾಲೂಕು ಸಮಿತಿ ಅಧ್ಯಕ್ಷರು ಕಾರ್ಯದರ್ಶಿಗಳು ಉಪಸ್ಥಿತರಿದ್ದರು. ಜಿಲ್ಲಾ ಕಾರ್ಯದರ್ಶಿ ಜೆ. ಶಿವಮೂರ್ತಿ ಸ್ವಾಗತಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post