ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಿರಂತರ ಮಳೆಯಿಂದಾಗಿ ನಗರದಲ್ಲಿ 8 ಮನೆಗಳು ಬಿದ್ದಿದ್ದು, ಇನ್ನು ಮೂರರಿಂದ ನಾಲ್ಕು ದಿನಗಳಲ್ಲಿ ಮನೆ ಹಾನಿಗೀಡಾಗಿರುವ ಸಂತ್ರಸ್ತರಿಗೆ ಪರಿಹಾರ ಒದಗಿಸಲಾಗುವುದು ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ K S Eshwarappa ಭರವಸೆ ನೀಡಿದರು.
ನಗರದ ಶೇಷಾದ್ರಿ ಪುರ ಮತ್ತು ಬಾಪೂಜಿ ನಗರದ ಮನೆ ಹಾನಿಗೀಡಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಬಾರಿ ನಗರದಲ್ಲಿ ಒಟ್ಟು 47 ಮನೆಗಳು ಬಿದ್ದಿದ್ದು, ಆ ಎಲ್ಲಾ ಸಂತ್ರಸ್ತ್ರರಿಗೆ ಈಗಾಗಲೇ 95 ಸಾವಿರ ರೂ. ಪರಿಹಾರ ಧನ ನೀಡಲಾಗಿದೆ. ಹಾಗೂ ಈಗ ಬಿದ್ದಿರುವ ಅಧಿಕೃತ ಮನೆಗಳ ವಾರಸುದಾರರಿಗೆ ಪ್ರಸ್ತುತ ನಿಯಮದಂತೆ ತಹಶೀಲ್ದಾರ್ ಸಮೀಕ್ಷೆ ಅನ್ವಯ ಇನ್ನು ಮೂರುರಿಂದ ನಾಲ್ಕು ದಿನಗಳಲ್ಲಿ ಪರಿಹಾರ ನೀಡಲಾಗುವುದು ಎಂದರು.
ಮನೆ ಬಾಗಶಃ ಹಾನಿಗೀಡಾರುವ ಸಂತ್ರಸ್ತರಿಗೆ 95 ಸಾವಿರ ರೂ. ಹಾಗೂ ಸಂಪೂರ್ಣ ಹಾನಿಗೀಡಾಗಿರುವ ಅಧಿಕೃತ ಮನೆಗಳಿಗೆ 5 ಲಕ್ಷ ರೂ. ಪರಿಹಾರ ಒದಗಿಸಲಾಗುವುದು. ಇನ್ನು ಅನಧಿಕೃತ ಮನೆ ವಾರಸುದಾರರಿಗೆ ಎಷ್ಟು ಪರಿಹಾರ ಸಂದಾಯವಾಗಬೇಕು ಎನ್ನುವುದನ್ನು ಜಿಲ್ಲಾಧಿಕಾರಿಗಳ ಸಭೆ ಮೂಲಕ ತೀರ್ಮಾನಿಸಲಾಗುವುದು ಎಂದರು.
Also read: ಅಕ್ರಮ ಮರಳುಗಾರಿಕೆ ತಡೆಗೆ ಕಟ್ಟುನಿಟ್ಟಿನ ಕ್ರಮ: ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಸೂಚನೆ
ಕಳೆದ ಬಾರಿ ಮನೆ ಕಳೆದುಕೊಂಡಿರುವ ಅನಧಿಕೃ ಮನೆ ಮಾಲಿಕರಿಗೆ ಪಾಲಿಕೆ ವತಿಯಿಂದ ೨೫ಸಾವಿರ ರೂ. ನೀಡಲಾಗಿತ್ತು. ಈ ಬಾರಿ ವಿಶೇಷ ಸಭೆ ಕರೆದು ಪರಿಹಾರದ ಬಗ್ಗ ಚರ್ಚಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಮೇಯರ್ ಸುನೀತಾ ಅಣ್ಣಪ್ಪ, ಉಪಮೇಯರ್ ಶಂಕರ್ ಗನ್ನಿ, ಚನ್ನಬಸಪ್ಪ ಇನ್ನತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post