ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಬೆಂಗಳೂರಿನ ಸಹಕಾರ ನಗರದಲ್ಲಿ ಉತ್ತರಾಧಿಮಠದ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥರಿಂದ ಸ್ಥಾಪಿಸಲಾದ ರಾಘವೇಂದ್ರ ಸ್ವಾಮಿಗಳ ಬೃಂದಾವನ ಸನ್ನಿಧಾನದಲ್ಲಿ ಮೂರು ದಿನಗಳ ಆರಾಧನಾ ಮಹೋತ್ಸವ ಜರುಗಿತು.
ಭಕ್ತಿ ಹಾಗೂ ಶ್ರದ್ಧೆಗಳಿಂದ ನಡೆದ ರಾಯರ 351ನೇ ಆರಾಧನಾ ಮಹೋತ್ಸವದಲ್ಲಿ ಸಾವಿರಾರು ಜನ ಭಕ್ತರು ಭಾಗವಹಿಸಿದ್ದರು. ಕಲಿಯುಗದ ಕಾಮಧೇನು ರಾಘವೇಂದ್ರ ಸ್ವಾಮಿಗಳ ಆರಾಧನೆ ಪ್ರಯುಕ್ತ ಪಂಚಾಮೃತ ಅಭಿಷೇಕ, ಅಷ್ಟೋತ್ತರ, ಪುಷ್ಪಾಲಂಕಾರ,ಪಂಡಿತರಿಂದ ಉಪನ್ಯಾಸ, ಭಕ್ತಿ ಸಂಗೀತ ಸುಧೆ, ರಥೋತ್ಸವ -ಹೀಗೆ ಅನೇಕ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಪಂಡಿತ ಪ್ರಸನ್ನ ಆಚಾರ್ಯ, ಪಂಡಿತ ಎಚ್ ಎನ್ ಮಾಹುಲಿ ಹಾಗೂ ಮಠದ ಉಸ್ತುವಾರಿ ವಹಿಸಿರುವ ಎನ್ ಎಚ್ ಕಾಂತನವರ್ ಅವರ ಮಾರ್ಗದರ್ಶನದಲ್ಲಿ ಮೂರು ದಿನಗಳ ಆರಾಧನಾ ಮಹೋತ್ಸವ ಅದ್ದೂರಿಯಾಗಿ ನಡೆಯಿತು.
ಮಧ್ಯಾರಾಧನೆ ದಿನ ಹಿರಿಯ ಪತ್ರಕರ್ತ ಹನುಮೇಶ್ ಕೆ ಯಾವಗಲ್ ಹಾಗೂ ‘ವಕೀಲರ ವಾಣಿ’ ಪತ್ರಿಕೆಯ ರಾಮಕೃಷ್ಣ ಅವರನ್ನು ಸನ್ಮಾನಿಸಲಾಯಿತು.








Discussion about this post