ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
2022ನೇ ಸಾಲಿನ ಗಣೇಶ ಹಬ್ಬದ ಪ್ರಯುಕ್ತ ಶಿವಮೊಗ್ಗ ತಾಲ್ಲೂಕಿನ ವ್ಯಾಪ್ತಿಯಲ್ಲಿ ಪ್ರತಿಷ್ಠಾಪನೆಗೊಳ್ಳುವ ಗಣಪತಿ ಸಮಿತಿಯವರು ಪೊಲೀಸ್ ಇಲಾಖೆಯಿಂದ ದ್ವನಿ ವರ್ಧಕ ಪರವಾನಿಗೆಯನ್ನು , ಮೆಸ್ಕಾಂ ಇಲಾಖೆಯಿಂದ ತಾತ್ಕಾಲಿಕ ವಿದ್ಯುತ್ ಸಂಪರ್ಕ ಮತ್ತು ಮಹಾನಗರ ಪಾಲಿಕೆಯಿಂದ ಅನುಮತಿಯನ್ನು ಪಡೆಯುವುದು ಅವಶ್ಯಕವಿರುತ್ತದೆ.
ಆದ್ದರಿಂದ ವಿವಿಧ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ಅನುಮತಿ ಪಡೆಯುವ ಕೆಲಸವನ್ನು ಸರಳಗೊಳಿಸುವ ಉದ್ದೇಶದಿಂದ ಮೂರು ಇಲಾಖೆಯ ಅಧಿಕಾರಿಗಳು ಒಂದೇ ಸ್ಥಳದಲ್ಲಿ ಲಭ್ಯವಿರುವಂತೆ ಏಕಗವಾಕ್ಷಿ (Single Window) ವ್ಯವಸ್ಥೆಯನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ. ಈ ವ್ಯವಸ್ಥೆಯನ್ನು ಆ.24 ಪ್ರಾರಂಭಿಸಲಾಗುತ್ತಿದ್ದು, ಬೆಳಗ್ಗೆ 10ಗಂಟೆಯಿಂದ ಸಂಜೆ 6ಗಂಟೆಯವರೆಗೆ ಕಾರ್ಯನಿರ್ವಹಿಸುತ್ತದೆ.
ಈ ಕೆಳಕಂಡ ಸ್ಥಳಗಳಲ್ಲಿ ಏಕಗವಾಕ್ಷಿ (Single Window) ವ್ಯವಸ್ಥೆಯನ್ನು ಪ್ರಾರಂಭಿಸುತ್ತಿದ್ದು, ಗಣಪತಿ ಸಮಿತಿಯವರು ಇದರ ಅನಕೂಲವನ್ನು ಪಡೆದುಕೊಳ್ಳಲು ಕೋರಲಾಗಿದೆ.
1) ಶಿವಮೊಗ್ಗ ಪೊಲೀಸ್ ಉಪ – ವಿಭಾಗ ಕಛೇರಿ, ಸಾಗರ ರಸ್ತೆ, ಶಿವಮೊಗ್ಗ.
2) ಮಹಾ ನಗರ ಪಾಲಿಕೆ ಕಛೇರಿ, ಬಿಹೆಚ್ ರಸ್ತೆ, ಶಿವಮೊಗ್ಗ.
3) ವಿನೋಬನಗರ ಪೊಲೀಸ್ ಠಾಣೆ ಆವರಣ, ಪೊಲೀಸ್ ಚೌಕಿ, ಶಿವಮೊಗ್ಗ.
Also read: ಗಣೇಶೋತ್ಸವ ಹಿನ್ನೆಲೆ ಆ.24ರಂದು ಭದ್ರಾವತಿ ಮುನ್ಸಿಪಲ್ ಸಭೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post