ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಗಣಪತಿ ಹಬ್ಬದಂದು ಕೋಮು ಗಲಭೆ ಸೃಷ್ಟಿಸುವ ಹುನ್ನಾರ ಇದ್ದು, ಮೂವರು ವ್ಯಕ್ತಿಗಳನ್ನು ಕೊಲೆ ಮಾಡಲು ಸಂಚು ರೂಪಿಸಲಾಗಿದೆ. ಇದರ ಹಿಂದೆ ಮೊಹಮ್ಮದ್ ಪೈಸನ್ ಎಂಬಾತ ಇರುವುದಾಗಿ ಬರೆದ ಅನಾಮಧೇಯ ಪತ್ರದ ಜಾಡು ಹಿಡಿದ ಶಿವಮೊಗ್ಗ ಪೊಲೀಸರು ಘಟನೆಗೆ ಸಂಬಂಧಪಟ್ಟಂತೆ ಓರ್ವನನ್ನು ಬಂಧಿಸಿದ್ದಾರೆ.
ಗಾಂಧಿಬಜಾರ್ನ ಗಂಗಾಪರಮೇಶ್ವರಿ ದೇವಾಲಯದ ಬಳಿ ಕಾಕಿ ಕವರ್ ಒಂದರಲ್ಲಿ ಸ್ಥಳೀಯ ವ್ಯಾಪಾರಿಯೊಬ್ಬರಿಗೆ ಅನಾಮಧೇಯ ಪತ್ರ ಸಿಕ್ಕಿದ್ದು, ಅದನ್ನು ಅವರು ತಕ್ಷಣ ಪೊಲೀಸರಿಗೆ ಹಸ್ತಾಂತರಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆ ಕೈಗೊಂಡಾಗ ಇದೊಂದು ಸುಳ್ಳಿನ ಪ್ರಕರಣ ಎಂದು ತಿಳಿದುಬಂದಿದೆ.
ಘಟನೆ ಹಿನ್ನೆಲೆ:
ಅನಾಮಧೇಯ ಪತ್ರದ ಜಾಡು ಹಿಡಿದ ಪೊಲೀಸರು ಇದಕ್ಕೆ ಸಂಬಂಧಪಟ್ಟ ಆಯುಬ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಮಹಮದ್ ಫೈಝಲ್ ಎಂಬಾತನ ಪತ್ನಿಯ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಹಿನ್ನೆಲೆಯಲ್ಲಿ ಈ ರೀತಿಯ ಅನಾಮಧೇಯ ಪತ್ರ ಬರೆದು ಮೊಹಮ್ಮದ್ ಫೈಝಲ್ನನ್ನು ಜೈಲಿಗೆ ಕಳುಹಿಸಿ ಆತನ ಪತ್ನಿಯೊಂದಿಗೆ ಇರಬೇಕು ಎನ್ನುವ ದುರುದ್ದೇಶದಿಂದ ಈ ಅನಾಮಧೇಯ ಪತ್ರ ಬರೆದಿರುವುದಾಗಿ ತಿಳಿಸಿದ್ದಾನೆ.
Also read: ಸೆ.3ರಂದು ಡಾ. ಪೋಶೆಟ್ಟಿಹಳ್ಳಿ ಗುರುರಾಜ ಸೇರಿ ಇಬ್ಬರಿಗೆ ಟಿ.ವಿ. ಕಪಾಲಿಶಾಸ್ತ್ರಿ ಪ್ರಶಸ್ತಿ ಪ್ರದಾನ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post