ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಎಸಿಬಿ ರದ್ದಾದ ಬೆನ್ನಲ್ಲೇ ನಗರದ 10ಕ್ಕೂ ಅಧಿಕ ಸರ್ಕಾರಿ ಆಸ್ಪತ್ರೆಗಳಿಗೆ ಲೋಕಾಯುಕ್ತ Lokayuktha ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸರ್ಕಾರಿ ಆಸ್ಪತ್ರೆ ಸಿಬ್ಬಂದಿಗಳ ವಿರುದ್ಧ ದೂರುಗಳು ಬಂದ ಹಿನ್ನೆಲೆಯಲ್ಲಿ ಇಂದು ಸುಮಾರು 10ಕ್ಕೂ ಅಧಿಕ ಆಸ್ಪತ್ರೆಗಳಿಗೆ ಲೋಕಾಯುಕ್ತ ಪೊಲೀಸರು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿ, ಬಿಸಿ ಮುಟ್ಟಿಸಿದ್ದಾರೆ.
ಆಸ್ಪತ್ರೆಗಳಲ್ಲಿನ ದಾಖಲೆ, ಹಾಜರಾತಿ, ಕಡತಗಳ ಪರಿಶೀಲನೆ ನಡೆಸಿರುವ ಅಧಿಕಾರಿಗಳು ಔಷಧಿ ಸಂಗ್ರಹಗಳ ಕುರಿತಾಗಿಯೂ ಸಹ ಮಾಹಿತಿ ಪಡೆದಿದ್ದಾರೆ.
Also read: ಶಿರಾ ಬಳಿ ಭೀಕರ ಅಪಘಾತ, 9 ಮಂದಿ ಕೂಲಿ ಕಾರ್ಮಿಕರ ಸಾವು: ಕೂಗಿದರೂ ಸಹಾಯಕ್ಕೆ ಬಾರದ ಜನ
ನಗರದಾದ್ಯಂತ ಆಸ್ಪತ್ರೆಗಳ ಮೇಲಿನ ಪರಿಶೀಲನೆ ಇನ್ನೂ ಮುಂದುವರೆದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post