No Result
View All Result
Kriti Sanon Raksha Bandhan Controversy GIVA Withdraw Advt copy
English Articles

Kriti Sanon’s Raksha Bandhan Ad Faces Backlash; GIVA Withdraws Campaign

by kalpa News
August 26, 2026
0

Kalpa Media House  |  Bangalore  | Jewellery brand GIVA has withdrawn its Raksha Bandhan advertisement featuring Bollywood actor Kriti Sanon following...

Read moreDetails
b-y-raghavendra-freedom-fighters-independence-day

Remembering Freedom Fighters Is the Duty of Every Indian: MP B.Y. Raghavendra

August 17, 2026
Indriya - Krithi Shetty - Brand Ambassador

Indriya announces Krithi Shetty as Brand Ambassador for Southern Markets

August 14, 2026
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
  • Advertise With Us
  • Grievances
  • About Us
  • Contact Us
Thursday, August 27, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಶಿವಮೊಗ್ಗ

ಶಿವಮೊಗ್ಗದಲ್ಲಿ ಶಂಕಿತ ಉಗ್ರರಿಂದ ಏನೆಲ್ಲಾ ಸೀಜ್ ಮಾಡಲಾಗಿದೆ? ಎಸ್ಪಿ ಲಕ್ಷ್ಮೀ ಪ್ರಸಾದ್ ಹೇಳಿದ್ದೇನು?

ಬಂಧಿತರಿಗೆ ಐಎಸ್' ಐಎಸ್ ಜೊತೆ ಲಿಂಕ್, ಕಾಲೇಜು ದಿನದಿಂದಲೇ ಉಗ್ರ ಚಟುವಟಿಕೆ ಬಗ್ಗೆ ಆಸಕ್ತಿ

kalpa News by kalpa News
September 23, 2022
in ಶಿವಮೊಗ್ಗ
0
ಶಿವಮೊಗ್ಗದಲ್ಲಿ ಶಂಕಿತ ಉಗ್ರರಿಂದ ಏನೆಲ್ಲಾ ಸೀಜ್ ಮಾಡಲಾಗಿದೆ? ಎಸ್ಪಿ ಲಕ್ಷ್ಮೀ ಪ್ರಸಾದ್ ಹೇಳಿದ್ದೇನು?
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  |

ದೇಶ ವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿದ್ದ ಇಬ್ಬರು ಶಂಕಿತ ಉಗ್ರರನ್ನು ವಶಕ್ಕೆ ಪಡೆದು ಬಂಧಿತರಿಂದ ಒಂದು ಕಾರು, ಎರಡು ಲ್ಯಾಪ್‌ಟ್ಯಾಪ್ ಸೇರಿದಂತೆ ಕಾನೂನು ಬಾಹಿರ ಚಟುವಟಿಕೆಗಳಿಗೆ ಉಪಯೋಗಿಸುತ್ತಿದ್ದ ಹಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾರಕ್ಷಣಾಧಿಕಾರಿ ಲಕ್ಷ್ಮೀ ಪ್ರಸಾದ್ SP Lakshmi Prasad ಹೇಳಿದರು.

ನಗರದಲ್ಲಿಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಆ.15ರಂದು ಶಿವಮೊಗ್ಗ ನಗರದಲ್ಲಿ ಪ್ರೇಮ್ ಸಿಂಗ್ ಎಂಬ ಯುವಕನ ಮೇಲೆ ಮುಸ್ಲಿಂ ಯುವಕರು ಚಾಕುವಿನಿಂದ ಹಲ್ಲೆ ಮಾಡಿ ಕೊಲ್ಲಲು ಪ್ರಯತ್ನಿಸಿದ್ದು, ಈ ಕುರಿತಂತೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖಾ ಕಾಲದಲ್ಲಿ 4 ಜನ ಆರೋಪಿತರನ್ನು ದಸ್ತಗಿರಿ ಮಾಡಲಾಗಿತ್ತು. ನಂತರ ತನಿಖೆ ಮುಂದುವರೆದು, ಸದರಿ ಪ್ರಕರಣದಲ್ಲಿ ತೀರ್ಥಹಳ್ಳಿಯ ನಿವಾಸಿಯಾಗಿರುವ ಶಾರೀಕ್ ಬಿನ್ ಅಬ್ದುಲ್ ಮಜೀದ್ ಎಂಬ ವ್ಯಕ್ತಿಯ ಪಾತ್ರ ಇರುವ ಬಗ್ಗೆ ಕಂಡುಬಂದಿದ್ದು ಹಾಗೂ ಶಾರೀಕ್‌ನ ಸಹಚರರು ಮಾಜ್ ಮತ್ತು ಯಾಸೀನ್ ಎಂದು ತಿಳಿದು ಬಂದಿರುತ್ತದೆ ಎಂದರು.

ಆರೋಪಿಗಳಾದ ಶಾರೀಕ್,  ವಾಜ್ ಮತ್ತು ಸೈಯ್ಯದ್ ಯಾಸೀನ್ ಅವರ ಬಗ್ಗೆ ಕೂಲಂಕುಷ ತನಿಖೆ ನಡೆಸಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವುದು ಮತ್ತು ನಿಷೇಧಿತ ಉಗ್ರ ಸಂಘಟನೆಗಳೊಂದಿ ಸಂಬಂಧ ಹೊಂದಿರುವುದು ಕಂಡುಬಂದಿದೆ ಎಂದು ಅವರು ಹೇಳಿದರು.
ಶಾರೀಕ್ ಇತನು 2020 ರಲ್ಲಿ ಮಂಗಳೂರಿನ ಗೋಡೆ ಬರಹದ ಪ್ರಕರಣದಲ್ಲಿ ಎ2 ಆರೋಪಿಯಾಗಿದ್ದು, ದಸ್ತಗಿರಿಯಾಗಿ ಸುಮಾರು 8 ತಿಂಗಳವರೆಗೆ ಜೈಲಿನಲ್ಲಿ ಇದ್ದು ಫೆಬ್ರವರಿ 2021 ಬಿಡುಗಡೆಯಾಗಿರುತ್ತಾನೆ. ಸದರಿ ದೊಡ್ಡಪೇಟೆಯ ತನಿಖಾಧಿಕಾರಿಯವರ ವರದಿ ಮತ್ತು ಪಿಠಾದಿ ಮೇರೆಗೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಿಷೇದಿತ ಉಗ್ರ ಸಂಘಟನೆ ಇಸ್ಲಾಂಮಿಕ್ ಸ್ಟೇಟ್ (ಐ.ಎಸ್.ಐ.ಎಸ್) ಭಯೋತ್ಪಾದಕ ಕೃತ್ಯಗಳನ್ನು ಮುಂದುವರಿಸುವ ಸಲುವಾಗಿ ಒಳಸಂಚು ಮಾಡಿಕೊಂಡು, ದೇಶದ ಐಕ್ಯತೆ ಭದ್ರತೆ ಮತ್ತು ಸಾರ್ವಭೌಮತ್ವಕ್ಕೆ ದಕ್ಕೆಯನ್ನುಂಟು ಮಾಡುವುದಕ್ಕಾಗಿ ಕಾನೂನು ಬಾಹಿರವಾಗಿ ಮತ್ತು ಉದ್ದೇಶಪೂರ್ವಕವಾಗಿ ಸಾರ್ವಜನಿಕ ಆಸ್ತಿ ಮತ್ತು ಪ್ರಾಣಕ್ಕೆ ಅಪಾಯವಾಗುವ ಸ್ಫೋಟಕಗಳನ್ನು ಇಟ್ಟುಕೊಂಡಿರುವ ಬಗ್ಗೆ ಹಾಗೂ ಭಾರತದ ರಾಷ್ಟ್ರಧ್ವಜವನ್ನು ಸುಟ್ಟಿರುವ ವಿಷಯವಾಗಿ ಕಾನೂನು ರೀತ್ಯಾ ಪ್ರಕರಣ ದಾಖಲಾಗಿದೆ ಎಂದರು.

ಆರೋಪಿಗಳಾದ ಈ ಮೂವರು ಶಿವಮೊಗ್ಗದ ತುಂಗಾನದಿಯ ದಡದಲ್ಲಿರುವ ಸ್ಥಳೀಯವಾಗಿ ಕೆಮ್ಮನಗುಂಡಿ ಎಂದು ಕರೆಯುವ ಜಾಗದಲ್ಲಿ ತಾವು ತಯಾರಿಸಿದ ಬಾಂಬ್‌ನ್ನು ಪ್ರಾಯೋಗಿಕವಾಗಿ ಸ್ಫೋಟ ಮಾಡಿರುತ್ತಾರೆ ಹಾಗೂ ಪ್ರಾಯೋಗಿಕವಾಗಿ ಮಾಡಿರುವ ಸ್ಫೋಟವು ಯಶಸ್ವಿಯಾಗಿದ್ದು, ಮುಂದಿನ ದಿನಗಳಲ್ಲಿ ಜಿಹಾದ್‌ ಮಾಡಲು ಸ್ಫೋಟಕ ವಸ್ತುಗಳನ್ನು ಸಂಗ್ರಹಿಸಿ ಇಟ್ಟಿರುತ್ತಾರೆ. ಸ್ವಾತಂತ್ರ್ಯ ದಿನಾಚರಣೆಯ ನಂತರದ ದಿನಗಳಲ್ಲಿ ಭಾರತ ದೇಶದ ರಾಷ್ಟ್ರ ಧ್ವಜವನ್ನು ಬಾಂಬ್‌ ಸಿಡಿಸಿದ ಜಾಗದ ಹತ್ತಿರ ಸುಟ್ಟು ಹಾಕಿ ಅದನ್ನು ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡಿರುತ್ತಾರೆ, ಮತ್ತು ಬಾಂಬ್‌ ತಯಾರಿಸಲು ಬೇಕಾದ ಹಣವನ್ನು ಸಾರೀಕ್‌ನು ಆನ್‌ಲೈನ್‌ ಮುಖಾಂತರ ಯಾಸಿನ್‌ಗೆ ಕಳುಹಿಸಿರುತ್ತಾನೆ ಎಂದು ತಿಳಿಸಿದರು.
ಉಗ್ರ ಸಂಘಟನೆ ಇಸ್ಲಾಂಮಿಕ್ ಸ್ಟೇಟ್ (ಐ.ಎಸ್.ಐ.ಎಸ್) ನ ಭಯೋತ್ಪಾದಕ ಕೃತ್ಯಗಳನ್ನು ಮುಂದುವರೆಸಲು ಆರೋಪಿಗಳು ಯೋಜಿಸಿದ್ದು, ಭಾರತ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿರುವುದು ಬರೀ ಬ್ರಿಟೀಷರ ಆಡಳಿತದಿಂದ ಮಾತ್ರ ಆದರೆ ನಮಗೆ ನಿಜವಾದ ಸ್ವಾತಂತ್ರ್ಯ ಸಿಗಬೇಕಾದರೆ ಈಗ ಇರುವ ಭಾರತದ ವ್ಯವಸ್ಥೆಯ ವಿರುದ್ಧ ಯುದ್ಧ ಸಾರಿ ಬಿಲಾಫತ್‌ ಸ್ಥಾಪಿಸಬೇಕಾಗಿರುತ್ತದೆ ಮತ್ತು ಷರಿಯಾ ಕಾನೂನು ಜಾರಿಗೊಳಿಸಬೇಕಾಗಿರುತ್ತದೆ. ಎಂಬ ವಿಚಾರಧಾರೆಯನ್ನು ಹೊಂದಿರುತ್ತಾರೆ. ಈ ವಿಚಾರಧಾರೆಗೆ ಅನುಗುಣವಾಗಿ ಇಸ್ಲಾಂಮಿಕ್ ಸ್ಟೇಟ್ (ಐ.ಎಸ್‌.ಐ.ಎಸ್) ಕಾರ್ಯನಿರ್ವಹಿಸುತ್ತಿರುತ್ತದೆ ಹಾಗೂ ಇಸ್ಲಾಂ ಧರ್ಮವನ್ನು ಉನ್ನತಿಗೇರಿಸುವ ಸಲುವಾಗಿ ಜಿಹಾದ್‌’ ಮೂಲಕ ಉಫಿ‌ಗಳ ವಿರುದ್ಧ ಯುದ್ಧ ಸಾರುತ್ತಿರುತ್ತಾರೆ. ಇದೇ ರೀತಿಯಾಗಿ ಆರೋಪಿಗಳು ಕೂಡಾ ಅವರು ನಂಬಿದಂತೆ ಖಾಫಿರ್‌ಗಳ ವಿರುದ್ಧ ಜಿಹಾದ್, ಕೆಲಸವನ್ನು ಮಾಡಲು ಇಚ್ಚಿಸಿದ್ದು, ಆದಕ್ಕೋಸ್ಕರ ಸ್ಫೋಟಕಗಳನ್ನು ತಯಾರಿಸಲು ಬೇಕಾದ ಸಾಮಾಗ್ರಿಗಳನ್ನು ಸಂಗ್ರಹಿಸಿ ಇಟ್ಟುಕೊಂಡಿರುತ್ತಾರೆ ಎಂದು ಮಾಹಿತಿ ನೀಡಿದರು.

ಆರೋಪಿತರು ತಮ್ಮ ಮೊಬೈಲ್‌ಗಳಲ್ಲಿ ಟೆಲಿಗ್ರಾಂ ಆಪ್ ನ್ನು ಹೊಂದಿದ್ದರು ಮತ್ತು ಇಸ್ಲಾಂಮಿಕ್ ಸ್ಟೇಟ್ (ಐ.ಎಸ್.ಐ.ಎಸ್) ಇದರ ಅಧಿಕೃತ ಮಾದ್ಯಮವಾದ ಆಲ್-ಹಯತ್ ನ ಟೆಲಿಗ್ರಾಂ ಚಾನಲ್ ನ ಸದಸ್ಯರಾಗಿದ್ದರು. ಆಲ್-ಹಯತ್ ನಿಂದ ಐಸಿಎಸ್‌ ರವರ ಬಹಳಷ್ಟು ಪ್ರಚಾರಕ್ಕೆ ಸಂಬಂಧಿಸಿದ ಸಾಮಾಗ್ರಿಗಳನ್ನು ಆರೋಪಿತರು ಸ್ವೀಕರಿಸುತ್ತಿದ್ದರು. ಶಾರೀಕ್‌ನು ಹಂಚಿಕೊಂಡ ಪಿ.ಡಿ.ಎಫ್, ಪೈಲ್‌ಗಳ ಮತ್ತು ವಿಡಿಯೋಗಳಲ್ಲಿ ಬಾಂಬ್‌ ತಯಾರುಮಾಡುವ ವಿದಾನವನ್ನು ತಿಳಿದುಕೊಂಡು ಅದಕ್ಕೆ ಬೇಕಾಗಿರುವ ಟೈಮರ್, ರೀಲೆ ಸರ್ಕ್ಯೂಟ್‌ಗಳನ್ನು ಅಮೇಜಾನ್‌ನ ಮುಖಾಂತರ ಖರಿದಿಸಿದ್ದು, ಶಿವಮೊಗ್ಗದಲ್ಲಿ 9 ವೊಲ್ಡ್‌ನ ಎರಡು ಬ್ಯಾಟರಿಗಳು, ಸ್ವಿಚ್, ವೈರ್‌ಗಳು, ಮ್ಯಾಚ್ ಬಾಕ್ಸ್‌ಗಳು ಹಾಗು ಇತರೆ ಸ್ಫೋಟಕ ವಸ್ತುಗಳನ್ನು ಖರಿದಿಸಿ ಬಾಂಬ್‌ನ್ನು ತಯಾರುಮಾಡಿರುತ್ತಾರೆ ಎಂದರು.
ಪ್ರಕರಣದ ಮೂರು ಜನ ಆರೋಪಿತರ ಮತ್ತು ಅವರ ಸಂಬಂದಿಕರ ಮನೆಗಳನ್ನು ಸೇರಿದಂತೆ ಶಿವಮೊಗ್ಗ ನಗರ, ಮಂಗಳೂರು ನಗರ ಹಾಗು ತೀರ್ಥಹಳ್ಳಿಯಲ್ಲಿ ಒಟ್ಟು 11 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ಶೋಧಿಸಿ ಹಲವಾರು ಸಾಕ್ಷ್ಯಗಳನ್ನು ಸಂಗ್ರಹಿಸಲಾಯಿತು. 14 ಮೊಬೈಲ್‌ಗಳು ಮತ್ತು 1 ಡಾಂಗಲ್, 2 ಲ್ಯಾಪ್‌ಟಾಪ್‌ಗಳು, 1 ಪೆನ್‌ಡ್ರೈವ್ ಹಾಗೂ ಇತರೆ ಎಲೆಕ್ಟ್ರಾನಿಕ್ಸ್ ಗ್ಯಾಡ್‌ಗಳು, ಬಾಂಬ್ ಸ್ಫೋಟ ಮಾಡಿದ ಸ್ಥಳದಲ್ಲಿ ದೊರಕಿದ ಛಿದ್ರಗೊಂಡ ಬಾಂಬ್‌ನ ಅವಶೇಷಗಳು, ಬಾಂಬ್ ತಯಾರಿಸಲು ಬೇಕಾದ ಸಾಮಗ್ರಿಗಳು ರಿಲೆ ಸರ್ಕಿಟ್, ಬಲ್ಪ್‌ಗಳು, ಮ್ಯಾಚ್ ಬಾಕ್ಸ್‌ಗಳು, ವೈರ್ ಗಳು, ಬ್ಯಾಟರಿಗಳು, ಸ್ಫೋಟಕ ವಸ್ತುಗಳು ಇತ್ಯಾದಿ ಅರೆಬರೆ ಸುಟ್ಟಿರುವ ಭಾರತದ ತ್ರಿವರ್ಣ ರಾಷ್ಟ್ರ ದ್ವಜ, ಪ್ರಮುಖ ದಸ್ತಾವೇಜುಗಳು ಮತ್ತು ದಾಖಲಾತಿಗಳು ಆರೋಪಿತ ಶಾರೀಕ್ ಈತನು ಕೃತ್ಯಕ್ಕೆ ಬಳಸಿದ್ದ ಒಂದು ಮಾರುತಿ ರಿಡ್ಜ್ ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.

ಪ್ರಕರಣದ ತನಿಖೆಯ ಸಮಯದಲ್ಲಿ ತನಿಖಾಧಿಕಾರಿಗಳಾದ ಶಾಂತವೀರ ಡಿ.ವೈ.ಎಸ್.ಪಿ ತೀರ್ಥಹಳ್ಳಿ ರವರು ಎ3-ಸೈಯದ್ ಯಾಸಿನ್‌ನನ್ನು ಹಾಗೂ ಎ2-ಮಾಜ್ ರವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿ ದಸ್ತಗಿರಿ ಮಾಡಲಾಯಿತು. ಹಾಗೂ ಇಬ್ಬರು ಆರೋಪಿತರನನ್ನು ಆ.20ರಂದು ನ್ಯಾಯಾಲಯದಲ್ಲಿ ಹಾಜರುಪಡಿಸಿ ತನಿಖೆ ಕುರಿತು 7 ದಿವಸ ಕಾಲ ಪೊಲೀಸ್‌ ವಶಕ್ಕೆ ಪಡೆದಿರುತ್ತಾರೆ. ಸೈಯದ್ ಯಾಸಿನ್‌ನು ಪಿ.ಯು.ಸಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಆತನ ಜೊತೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ. ಮಾಜ್ ಮುನೀರ್ ಅಹಮ್ಮದ್ ಎಂಬ ವ್ಯಕ್ತಿಯ ಪರಿಚಯವಾಗಿತ್ತು. ಮಾಜ್ ಮುನೀರ್ ಅಹಮ್ಮದ್‌ನ ಮುಖಾಂತರ ಯಾಸಿನ್‌ಗೆ ಶಾರೀಕ್‌ನ ಪರಿಚಯವಾಯಿತು. ತಾನು ಮಾಜಿ ಮತ್ತು ಶಾರೀಕ್ ಬೇಟಿಯಾದಗಲ್ಲೆಲ್ಲಾ ಶಾರೀಕ್‌ನು ಮತ್ತು ಮಾಜಿ ಮುಸ್ಲಿಂ ಮೂಲಭೂತವಾದದ ಬಗ್ಗೆ ಮಾತನಾಡುತ್ತಿದ್ದನು. ಮತ್ತು ಯಾಸಿನ್‌ನ ಮೊಬೈಲ್‌ಗೆ ಮುಸ್ಲಿಂ ಉಗ್ರವಾದಿಗಳಿಗೆ ಸಂಬಂದಿಸಿದ ಮತ್ತು ಇಸ್ಲಾಂಗೆ ಸಂಬಂಧಿಸಿದ ಪಿ.ಡಿ.ಎಫ್, ಪೈಲ್‌ಗಳನ್ನು, ವಿಡಿಯೋ-ಆಡಿಯೋಗಳನ್ನು ಮತ್ತು ಅವುಗಳ, ಲಿಂಕ್‌ಗಳನ್ನು ಟಿಲಿಗ್ರಾಂ, ಇನ್‌ಸ್ಟಾಗ್ರಾಮ್, ವೈರ್, ಎಲಿಮೆಂಟ್, ವಿಕ್ಕರ್, ಇತ್ಯಾದಿ ಮೆಸೆಂಜರ್‌ಗಳನ್ನು ಕಳುಹಿಸುತ್ತಿದ್ದನು ಎಂದು ಹೇಳಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

 

Tags: Kannada News WebsiteKannadaNewsKannadaNewsLiveKannadaNewsOnlineKannadaWebsiteLatest News KannadaLocal NewsMalnad NewsNewsinKannadaNewsKannadaShimogaShivamoggaShivamogga NewsSP Lakshmi Prasadಜಿಲ್ಲಾರಕ್ಷಣಾಧಿಕಾರಿ ಲಕ್ಷ್ಮೀ ಪ್ರಸಾದ್ಮಲೆನಾಡು_ಸುದ್ಧಿಶಿವಮೊಗ್ಗಶಿವಮೊಗ್ಗ_ನ್ಯೂಸ್
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಚಿತ್ರದುರ್ಗ ಮುರುಘಾ ಶ್ರೀಗಳ ಕೊರೋನರಿ ಆಂಜಿಯೋಗ್ರಾಂ ಯಶಸ್ವಿ: ಡಾ. ವಿರುಪಾಕ್ಷಪ್ಪ

Next Post

ನದಿ ದಂಡೆ ಸಂರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಿ: ಶಾಸಕ ಸುಕುಮಾರ್ ಶೆಟ್ಟಿ ಮನವಿ

kalpa News

kalpa News

Next Post
ನದಿ ದಂಡೆ ಸಂರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಿ: ಶಾಸಕ ಸುಕುಮಾರ್ ಶೆಟ್ಟಿ ಮನವಿ

ನದಿ ದಂಡೆ ಸಂರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಿ: ಶಾಸಕ ಸುಕುಮಾರ್ ಶೆಟ್ಟಿ ಮನವಿ

Leave a Reply Cancel reply

Your email address will not be published. Required fields are marked *

No Result
View All Result
Kriti Sanon Raksha Bandhan Controversy GIVA Withdraw Advt copy
English Articles

Kriti Sanon’s Raksha Bandhan Ad Faces Backlash; GIVA Withdraws Campaign

by kalpa News
August 26, 2026
0

Kalpa Media House  |  Bangalore  | Jewellery brand GIVA has withdrawn its Raksha Bandhan advertisement featuring Bollywood actor Kriti Sanon following...

Read moreDetails
b-y-raghavendra-freedom-fighters-independence-day

Remembering Freedom Fighters Is the Duty of Every Indian: MP B.Y. Raghavendra

August 17, 2026
Indriya - Krithi Shetty - Brand Ambassador

Indriya announces Krithi Shetty as Brand Ambassador for Southern Markets

August 14, 2026
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL