ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಒಂದೆಡೆ ದೇಶದಾದ್ಯಂತ ಪಿಎಫ್’ಐ ಕಚೇರಿ, ಕಾರ್ಯಕರ್ತರ ನಿವಾಸಗಳ ಮೇಲೆ ಎನ್’ಐಎ ದಾಳಿ ನಡೆಸಿದ್ದರೆ, ಇನ್ನೊಂದೆಡೆ ಇದೇ ಸಂಘಟನೆಯಿಂದ ಭಾರೀ ವಿಧ್ವಂಸಕ ಕೃತ್ಯವೊಂದಕ್ಕೆ ಸಂಚು ರೂಪುಗೊಂಡಿತ್ತು ಎಂಬ ಮಾಹಿತಿ ಹೊರಬಿದ್ದಿದೆ.
ಈ ಕುರಿತಂತೆ ಪೊಲೀಸರು ಬಂಧಿಸಿರುವ ನಾಸಿರ್ ಪಾಷಾ ಹಾಗೂ ಅಶ್ರಫ್ ಬಳಿಯಲ್ಲಿ ಡೈರಿಯೊಂದು ದೊರೆತಿದ್ದು, ಇದರಲ್ಲಿ ಉಲ್ಲೇಖಗೊಂಡಿರುವ ಟ್ರೈನಿಂಗ್ ಪ್ಲಾನ್ ಎಂಬ ಮಾಹಿತಿ ತನಿಖಾಧಿಕಾರಿಗಳ ತಲೆ ಕೆಡಿಸಿದೆ ಎಂದು ಹೇಳಲಾಗಿದೆ.

ಡಿಜೆ ಹಳ್ಳಿ ಹಾಗೂ ಕೆಜೆ ಹಳ್ಳಿ ದಾಳಿ ಹಿಂದಿನ ದಿನವೂ ಸಹ ಇವರುಗಳಿಗೆ ಲಕ್ಷಾಂತರ ರೂಪಾಯಿ ಹಣ ಫಂಡ್ ಹರಿದುಬಂದಿದೆ ಎಂದು ಹೇಳಲಾಗಿದ್ದು, ಈ ಕುರಿತ ತನಿಖೆ ನಡೆದಿದೆ.









Discussion about this post