ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಭಾರತಾಂಬೆಗೆ ಎಲ್ಲರೂ ಗೌರವ ಸಲ್ಲಿಸಬೇಕು, ಒಂದುವೇಳೆ ಗೌರವ ಸಲ್ಲಿಸಲು ಆಗುವುದಿಲ್ಲ ಎನ್ನುವರು ಈ ದೇಶಬಿಟ್ಟು ಹೋಗಬೇಕು ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ Former Minister Eshwarappa ತಿಳಿಸಿದರು.
ಭಯೋತ್ಪಾದಕ ಸಂಘಟನೆಗಳನ್ನು ಈ ದೇಶದಲ್ಲಿ ನೀಷೇಧಿಸಿರುವುದು ಹಿಂದುತ್ವದ ವಿಜಯವೆಂದು ಭಾವಿಸಿ ಈ ದಿನ ಆರ್ಯ ವೈಶ್ಯ ಮಹಾಜನ ಸಮಿತಿ ವತಿಯಿಂದ ಗಾಂಧಿ ಬಜಾರ್ನಲ್ಲಿರುವ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಆಯೋಜಿಸಿದ್ದ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.

ಬಂಧಿತ ಎಲ್ಲ ಪ್ರಮುಖರು ಮುಸ್ಲೀಮ್ ರವರೇ ಆಗಿದ್ದಾರೆ. ಆದರೆ ಎಲ್ಲ ಮುಸಲ್ಮಾನರು ಕೆಟ್ಟವರಲ್ಲ ಅವರಲ್ಲೂ ದೇಶ ಪ್ರೇಮಿಗಳಿದ್ದಾರೆ. ಈ ದೇಶ ಹಿಂದೂ ರಾಷ್ಟ್ರವಾಗಬೇಕು ಎಂದು ನಮ್ಮ ಎಲ್ಲಾ ಹಿರಿಯ ಚೇತನಗಳ ಕನಸು ನನಸಾಗುವ ಸಮಯ ಬಂದಿದೆ. ಹಾಗಾಗಿ ಈ ದಿನವನ್ನು ಆರ್ಯ ವೈಶ್ಯ ಸಮಾಜದವರು ವಿಜಯೋತ್ಸವದಿನವೆಂದು ಆಚರಿಸುತ್ತಿರುವುದು ಸಂತಸ ತಂದಿದೆ ಎಂದರು.

Also read: ಸಿದ್ಧರಾಮಯ್ಯಗೆ ತಲೆ ಕೆಟ್ಟಿದೆ, ಇತ್ತೀಚೆಗೆ ಹುಚ್ಚುಹುಚ್ಚಾಗಿ ಮಾತನಾಡುತ್ತಿದ್ದಾರೆ: ಬಿಎಸ್’ವೈ ಕಟಕಿ
ಆರ್ಯ ವೈಶ್ಯ ಭಜನಾ ಮಂಡಳಿ ಸದಸ್ಯೆಯರು ಪ್ರಾರ್ಥನೆ ಮಾಡಿದರು. ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ವಂದನಾರ್ಪಣೆ ಮಾಡಿದರು.























Discussion about this post