ಕಲ್ಪ ಮೀಡಿಯಾ ಹೌಸ್ | ನವದೆಹಲಿ/ಬೆಂಗಳೂರು |
ದೇಶದಾದ್ಯಂತ ನಿಷೇಧಕ್ಕೆ ಒಳಗಾಗಿರುವ ಪಿಎಫ್’ಐ ಸಂಘಟನೆಗೆ ಸೇರಿರುವ ಬ್ಯಾಂಕ್ ಖಾತೆಗಳಲ್ಲಿ ಕೋಟಿಗಟ್ಟಲೆ ಹಣವಿದ್ದು, ಇವುಗಳನ್ನು ಸೀಜ್ ಮಾಡಲಾಗಿದೆ ಎಂದು ಹೇಳಲಾಗಿದೆ.
ಈ ಕುರಿತಂತೆ ಕೆಲವು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ್ದು, ಪಿಎಫ್’ಐ PFI ಹಾಗೂ ಈ ಸಂಘಟನೆಗೆ ಸೇರಿದ ಮುಖಂಡರ ಬ್ಯಾಂಕ್ ಖಾತೆಗಳಲ್ಲಿ ಕೋಟಿಗಟ್ಟಲೆ ಹಣವಿರುವುದು ಪತ್ತೆಯಾಗಿದೆ. ಇವುಗಳನ್ನು ಸರ್ಕಾರ ಸೀಜ್ ಮಾಡಿದ್ದು, ಇವುಗಳು ಮುಂದುವರೆದಿವೆ.
ಇನ್ನು, ಪಿಎಫ್`ಐ ಸಂಘಟನೆಯ ಬಹಳಷ್ಟು ಸಾಮಾನ್ಯ ಕಾರ್ಯಕರ್ತರ ಖಾತೆಯಲ್ಲೂ ಸಹ ಲಕ್ಷಾಂತರ ರೂ. ಹಣದ ವ್ಯವಹಾರ ನಡೆದಿರುವ ಕುರಿತಾಗಿ ಮಾಹಿತಿಗಳು ಪತ್ತೆಯಾಗಿದೆ. ಯುಪಿಎ ಕ್ಯೂಆರ್ ಕೋಡ್ ಬಳಸಿ, ಲಕ್ಷಾಂತರ ರೂ. ಹಣದ ವ್ಯವಹಾರ ನಡೆದಿದೆ ಎಂದು ಹೇಳಲಾಗಿದೆ.
Also read: ಭಾರತಾಂಬೆಗೆ ಗೌರವ ಸಲ್ಲಿಸಲು ನಿರಾಕರಿಸುವವರು ದೇಶ ಬಿಟ್ಟು ಹೋಗಲಿ: ಶಾಸಕ ಈಶ್ವರಪ್ಪ ಹೇಳಿಕೆ
ಇದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ಇವುಗಳ ಸಮಗ್ರ ತನಿಖೆಗೆ ಮುಂದಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post