ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಜ್ಯ ಸರ್ಕಾರಿ ನೌಕರರಿಗೆ ಬರೋಬ್ಬರಿ ಶೇ.27.25ರಿಂದ ಶೇ.31ಕ್ಕೆ ಡಿಎ ಘೋಷಣೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.
ಈ ಕುರಿತಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ CM Basavaraja Bommai ಹೇಳಿಕೆ ನೀಡಿದ್ದು, 2020ರ ಜುಲೈ 1ರಿಂದ ಪೂರ್ವಾನ್ವಯವಾಗುವಂತೆ ರಾಜ್ಯ ಸರ್ಕಾರದ ಎಲ್ಲಾ ನೌಕರರಿಗೆ ತುಟ್ಟಿ ಭತ್ಯೆ ಏರಿಕೆ ಮಾಡಲಾಗಿದೆ.
ಸನ್ಮಾನ್ಯ ಮುಖ್ಯಮಂತ್ರಿ @BSBommai ಅವರು ರಾಜ್ಯ ಸರ್ಕಾರಿ ನೌಕರರು ಹಾಗೂ ನಿವೃತ್ತ ನೌಕರರ ತುಟ್ಟಿ ಭತ್ಯೆಯನ್ನು ದಿ. 1ನೇ ಜುಲೈ 2022 ರಿಂದ ಅನ್ವಯವಾಗುವಂತೆ 3.75% ನಷ್ಟು ಹೆಚ್ಚಿಸಿಲು ಅನುಮೋದಿಸಿದ್ದಾರೆ. ಇದಕ್ಕಾಗಿ ಸರ್ಕಾರ ಹೆಚ್ಚುವರಿಯಾಗಿ ರೂ 1,282.72 ಕೋಟಿ ರೂ. ಭರಿಸಲಿದೆ.
— CM of Karnataka (@CMofKarnataka) October 7, 2022
ಸದ್ಯ ಶೇ.3.75ರಷ್ಟು ಏರಿಕೆ ಮಾಡಿರುವುದರಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ 1282.72ಕೋಟಿ ಹೆಚ್ಚುವರಿ ಬೀಳಲಿದೆ ಎಂದಿದ್ದಾರೆ.
ಇದೇ ವರ್ಷದ ಏಪ್ರಿಲ್ನಲ್ಲಿ ಕೊನೆಯದಾಗಿ ರಾಜ್ಯಸರ್ಕಾರ ತುಟ್ಟಿ ಭತ್ಯೆ ಏರಿಸಿತ್ತು. ಕೇಂದ್ರ ಸರ್ಕಾರ ತನ್ನ ನೌಕರರಿಗೆ ಶೇ.4ರಷ್ಟು ತುಟ್ಟಿ ಭತ್ಯೆ ಏರಿಕೆ ಮಾಡಿದ ಬೆನ್ನಲ್ಲೆ ರಾಜ್ಯ ಸರ್ಕಾರವೂ ಸಹ ತನ್ನ ನೌಕರರಿಗೆ ಸಿಹಿ ಸುದ್ದಿ ನೀಡಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post