ಕಲ್ಪ ಮೀಡಿಯಾ ಹೌಸ್ | ಸೊರಬ |
ಕೖಷಿಯೇ ಪ್ರಧಾನವಾಗಿರುವ ನಮ್ಮ ನಾಡಿನಲ್ಲಿ ಬಹುತೇಕ ಆಚರಣೆಗಳು ಭೂಮಿ ತಾಯಿಗೇ ಸಂಬಂಧಿಸಿರುತ್ತದೆ. ಅದೇರೀತಿ ವರ್ಷದ ಆಶ್ವೀಜ ಮಾಸದ ಹುಣ್ಣಿಮೆಯಂದು ನಡೆಯುವ ಭೂಮಿ ಹುಣ್ಣಿಮೆ Bhoomi Hunnime ಅಥವಾ ಸೀಗೆ ಹುಣ್ಣಿಮೆ ಚೊಚ್ಚಲ ಗರ್ಭಿಣಿಗೆ ಬಯಕೆ ತೀರಿಸುವ ಸಾಂಕೇತಿಕ ಆಚರಣೆಯಾಗಿದೆ.
ಕೖಷಿ ಕುಟುಂಬಗಳು ಇಂದಿಗೂ ಇಂತಹ ಸಾಂಪ್ರದಾಯಿಕ ಆಚರಣೆಗಳಿಂದ ಹಿಂದೆ ಸರಿದಿಲ್ಲ. ಈ ಹಿನ್ನೆಲೆಯಲ್ಲಿ ಭಾನುವಾರ ನಡೆಯಲಿರುವ ಭೂಮಿಹುಣ್ಣಿಮೆಗೆ ಕೃಷಿ ಕುಟುಂಬಗಳು ತಯಾರಿ ನಡೆಸುತ್ತಿದ್ದು, ಗ್ರಾಮಾಂತರ ಪ್ರದೇಶದಲ್ಲಿ ಭೂಮಿ ತಾಯಿಗೆ ಚರಗು ಬೀರುವ ಕಲಾತ್ಮಕ ಜನಪದ ಹಿನ್ನೆಲೆಯನ್ನುಳ್ಳ ಭೂಮಣ್ಣಿ ಬುಟ್ಟಿ ತಯಾರಿ ಭರದಿಂದ ನಡೆಯುತ್ತಿದೆ.

Also read: ಭಗವಂತನ ಅಪರೋಕ್ಷ ಜ್ಞಾನ ಪಡೆಯಲು ಏನು ಮಾಡಬೇಕು! ಫಲ ನೀಡುವ ಕೆಲಸಗಳು ಯಾವುವು?
ಯಾವುದೇ ಕೖತಕ ರಾಸಾಯನಿಕ ಬಣ್ಣವಾಗಲಿ, ಬ್ರಷ್ ಬಳಸದೇ ಹತ್ತಿಯಿಂದ ಚಿತ್ತಾರ ಬಿಡಿಸುವುದು ವಿಶೇಷವಾಗಿದೆ. ಈ ಕಲೆಯಲ್ಲಿ ಚುಕ್ಕೆ, ಗೀಟು, ರಂಗೋಲಿ ಪ್ರಧಾನ, ಸಾಮಾನ್ಯವಾಗಿ ಮನೆ, ಗಿಡ, ಮರ, ಹಕ್ಕಿ, ಮನುಷ್ಯ, ಮೀನು, ಪ್ರಾಣಿ, ಏಣಿ, ತೇರು ಮುಂತಾದ ನವಿರು ಎಳೆಗಳು ಇರುತ್ತವೆ. ಇಂತದೆ ಚಿತ್ರ ಧಾನ್ಯ ಸಂಗ್ರಹಿಸಿಡುವ ಪಣತ, ಒಕ್ಕಲಾಟದ ಬಣವೆ, ಧಾನ್ಯದ ರಾಶಿಯ ಬಳಿ, ದೀಪಾವಳಿಯ ಸಮಯದಲ್ಲಿ ಗೋ ಪೂಜೆ, ಬಲೀಂದ್ರನ ಪೂಜೆ, ಮದುವೆ ಹಸೆ ಗೋಡೆಗಳಲ್ಲಿ ಭಿತ್ತರಗೊಳ್ಳುವುದನ್ನು ಕಾಣಬಹುದು. ಆದಾಗ್ಯೂ ಭೂಮಣ್ಣಿ ಬುಟ್ಟಿ ತುಸು ಭಿನ್ನವಾಗಿದ್ದು, ಕೖಷಿ ಮೂಲ ಪರಿಕಲ್ಪನೆ, ಅದಕ್ಕೆ ಪೂರಕವೆನಿಸುವ ಸಾಮಾಗ್ರಿ, ಸಲಕರಣೆಗಳು ಹೆಚ್ಚು ದಟ್ಟವಾಗಿರುತ್ತವೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post