Sunday, June 29, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಜಿಲ್ಲೆ ಬೆಂಗಳೂರು ನಗರ

ಎಸ್.ಸಿ/ ಎಸ್.ಟಿ ಮೀಸಲಾತಿ ಹೆಚ್ಚಳ ಐತಿಹಾಸಿಕ ತೀರ್ಮಾನ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

October 13, 2022
in ಬೆಂಗಳೂರು ನಗರ
0 0
0
File Image

File Image

Share on facebookShare on TwitterWhatsapp
Read - 3 minutes

ಕಲ್ಪ ಮೀಡಿಯಾ ಹೌಸ್   |  ಬೆಂಗಳೂರು  |

ಕರ್ನಾಟಕದ ಇತಿಹಾಸದಲ್ಲಿ  ಎಸ್.ಸಿ/ ಎಸ್.ಟಿ ಮೀಸಲಾತಿಯನ್ನು ಹೆಚ್ಚಿಗೆ ಮಾಡುವ ಕೆಲಸವನ್ನು ಯಾವ ಸರ್ಕಾರ ಕೂಡ ಕೈಗೊಂಡಿರಲಿಲ್ಲ. ನಮ್ಮ ಸರ್ಕಾರ ಐತಿಹಾಸಿಕ ತೀರ್ಮಾನವನ್ನು ಮಾಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ CM Basavaraja Bommai ತಿಳಿಸಿದರು.

ಅವರು ಇಂದು ರಾಯಚೂರು ತಾಲ್ಲೂಕಿನ ಗಿಲ್ಲೆಸಗೂರು ಗ್ರಾಮದಲ್ಲಿ ಬಿಜೆಪಿ ಜನಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಳ್ಳುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.
ಕಾಂಗ್ರೆಸ್ ಭಯಗೊಂಡಿದೆ
ಕಳೆದ 50 ವರ್ಷಗಳಿಂದ ಮೀಸಲಾತಿ ಹೆಚ್ವಿಸಲು  ಬೇಡಿಕೆ ಇತ್ತು.  ಕಾಂಗ್ರೆಸ್  ಅಧಿಕಾರವಿದ್ದಾಗ ಏನೂ ಮಾಡಲಿಲ್ಲ. ನಾನು ಎಲ್ಲಾ ಪಕ್ಷದವರನ್ನು ವಿಶ್ವಾಸಕ್ಕೆ ಪಡೆದು ಈ ದಿಟ್ಟ ಕ್ರಮ ತೆಗೆದುಕೊಂಡಿದ್ದೇವೆ. ಈಗ ಅವರಿಗೆ ಭಯ ಹುಟ್ಟಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಈ ದಿಟ್ಟ ಕ್ರಮ ತೆಗೆದುಕೊಂಡಿರುವುದರಿಂದ ಅವರ ಮತ ಬಿಜೆಪಿ ಗೆ ಹೋಗುತ್ತದೆ ಎಂದು ಭಯಗೊಂಡು ಈ ರೀತಿ ಮಾತನಾಡುತ್ತಿದ್ದಾರೆ ಎಂದರು.

ಯಾರೂ ಅಪಸ್ವರ ಎತ್ತಬಾರದು
ಎಸ್.ಸಿ/ಎಸ್.ಟಿ  ಸಮುದಾಯಕ್ಕೆ  ತೆಗೆದುಕೊಂಡಿರುವ ಈ ಕ್ರಮದಲ್ಲಿ  ಯಾರೂ ಕೂಡ ಅಪಸ್ವರದ ಮಾತುಗಳನ್ನು ಆಡಬಾರದು. ಕಳೆದ 50-60 ವರ್ಷ ಆ ಜನಾಂಗ ನೊಂದಿದೆ. ಅವರಿಗೆ  ಅಧಿಕಾರ, ನ್ಯಾಯ ಸಿಕ್ಕಿಲ್ಲ. ಇಂಥ ಸಂದರ್ಭದಲ್ಲಿ  ಈ ಪ್ರಕ್ರಿಯೆ ಪ್ರಾರಂಭವಾಗಿದೆ. ಅದಕ್ಕಾಗಿ ಯಾರೂ ಕೂಡ ಅಪಸ್ವರ ಎತ್ತಬಾರದು.  ಯಾರು ಅಪಸ್ವರ ಎತ್ತುತ್ತಾರೋ ಅವರು ಎಸ್.ಸಿ. ಎಸ್..ಟಿ ವಿರೋಧಿಗಳು  ಎಂದರು.
ಸೂಕ್ತ ನಿರ್ಣಯ
ಹಲವಾರು ಜನಾಂಗಗಳು ವಿವಿಧ  ಬೇಡಿಕೆಗಳನ್ನು  ಇಟ್ಟಿದ್ದಾರೆ. ಕೆಲವರು  ಎಸ್.ಟಿ ಗೆ ಸೇರಿಸಬೇಕೆಂದೂ, ಕೆಲವರು 3ಬಿ ಯಿಂದ 2 ಎ ಗೆ ಸೇರಿಸಬೇಕೆಂತಲೂ, ಕೆಲವರು ಹಿಂದುಳಿದ ವರ್ಗಕ್ಕೆ ಸೇರಿಸಬೇಕೆಂದು ಬೇಡಿಕೆ ಇಟ್ಟಿದ್ದಾರೆ.  ಈಗ ಶಿಕ್ಷಣ ಮತ್ತು ಉದ್ಯೋಗದ ಜಾಗೃತಿಯಾಗಿರುವುದರಿಂದ ಜನರ ಆಶೋತ್ತರಗಳು ಎಲ್ಲಾ ಸಮುದಾಯಗಳಲ್ಲಿ ಹೆಚ್ಚಾಗಿದೆ.  ಎಲ್ಲಕ್ಕೂ ಕಾನೂನಿನಡಿ ಆಯೋಗಗಳು ಶಿಫಾರಸ್ಸು ಮಾಡುವುದರನ್ವಯ ಸೂಕ್ತ ನಿರ್ಣಯಗಳನ್ನು ತೆಗೆದುಕೊಳ್ಳಲಾಗುವುದು ಎಂದರು.

Also read: ನಮ್ಮ ಸಂಸ್ಕೃತಿಯ ಎಲ್ಲಾ ಆಯಾಮಗಳಲ್ಲೂ ಸೃಜನಾತ್ಮಕತೆಯಿದೆ: ರಘುಪತಿ ಎನ್‌. ಶರ್ಮಾ

ಡಿಸೆಂಬರ್ ವರೆಗೆ ಜನಸಂಕಲ್ಪ ಯಾತ್ರೆ
ಜನಸಂಕಲ್ಪ ಯಾತ್ರೆ ನಿರಂತರವಾಗಿ ಡಿಸೆಂಬರ್ ವರೆಗೆ ನಡೆಯುತ್ತಿದೆ. ಎಲ್ಲ್ಲಾ ಜಿಲ್ಲೆಗಳಲ್ಲಿ 50 ಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಮೊದಲ ಹಂತದಲ್ಲಿ ಹಾಗೂ ಎರಡನೇ ಹಂತದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಜನರಿಗೆ ತಿಳಿಸುವುದು ಮತ್ತು ಬರುವ ದಿನಗಳಲ್ಲಿ ಘೋಷಣೆಯಾಗಿರುವ ಕಾರ್ಯಕ್ರಮಗಳು ಫಲಾನುಭವಿಗಳಿಗೆ ಸಮರ್ಪಕವಾಗಿ ಮುಟ್ಟುವ  ರೀತಿಯಲ್ಲಿ ಎಲ್ಲರೂ ಸೇರಿ ಸಂಕಲ್ಪವನ್ನು ಮಾಡಿ  ಜನರ ಕಲ್ಯಾಣ ಕಾರ್ಯಕ್ರಮವನ್ನು  ಮುಂದಿಟ್ಟು ನಾವು ಜನಾದೇಶವನ್ನು  ಪಡೆಯುವ ಈ ಸಂಕಲ್ಪ ಯಾತ್ರೆ ರಾಯಚೂರಿನಿಂದ ಪ್ರಾರಂಭವಾಗುತ್ತಿದೆ. ಜನಸಂದಣಿ ಎಷ್ಟು  ದೊಡ್ಡದಿದೆ, ಉತ್ಸವ ಎಷ್ಟು ದೊಡ್ಡದಿದೆ ಎಂದು  ಕಾಣಬಹುದು. ಇದು ಬರುವ  ದಿನಗಳಲ್ಲಿ 2023 ಕ್ಕೆ  ಭಾರತೀಯ  ಜನತಾ ಪಕ್ಷ ಮತ್ತೆ ಕರ್ನಾಟಕದಲ್ಲಿ  ಆಡಳಿತದ ಚುಕ್ಕಾಣಿ ಹಿಡಿದು ಜನಪರವಾದ ಕೆಲಸ ಮಾಡುತ್ತದೆ ಎನ್ನುವುದರ ಸಂದೇಶ ನೀಡುತ್ತಿದೆ ಎಂದು ಭಾವಿಸುವುದಾಗಿ ತಿಳಿಸಿದರು.
ಕಾಂಗ್ರೆಸ್ ಪಕ್ಷದ ಜೋಡೋ ಯಾತ್ರೆಗೂ ಜನಸಂಕಲ್ಪ ಯಾತ್ರೆಗೂ ಸಂಬಂಧವಿಲ್ಲ.  ಅವರು ಕಾಂಗ್ರೆಸ್ ಜೋಡೋ ಯಾತ್ರೆಯಲ್ಲಿ ಏನು ಮಾಡುತ್ತಿದ್ದಾರೆ ಎಂದು ಗೊತ್ತಿಲ್ಲ. ಆದರೆ ನಮ್ಮದು  ಜನಸಂಕಲ್ಪ, ಜನಸಂಪರ್ಕ ಮಾಡುವ ಯಾತ್ರೆ ಎಂದರು.

ಡಿ.ಕೆ.ಶಿವಕುಮಾರ್ ಜನಸಂಕಲ್ಪ ಯಾತ್ರೆಯನ್ನು ಬಿಜೆಪಿ ಸೋಲುವ ಭಯದಿಂದ ಕೈಗೊಂಡಿದೆ ಎಂಬ ಹೇಳಿಕೆಗೆ ಪ್ರತಿಕಿಯೆ ನೀಡಿ ಈಗ ಅವರು ಜೋಡೋ ಯಾತ್ರೆಯನ್ನು ಸೋಲುವ ಭಯದಿಂದಲೇ ಕೈಗೊಂಡಿದ್ದಾರೆಯೇ ? ರಾಹುಲ್ ಗಾಂಧಿ ಅಸ್ತಿತ್ವ  ಕಳೆದುಕೊಳ್ಳುವ ಭಯದಿಂದ ಭಾರತ್ ಜೋಡೋ ಯಾತ್ರೆ ಮಾಡುತ್ತಿದ್ದಾರೆ.  ಎಲ್ಲರಿಗೂ ಗೊತ್ತಿರುವ ವಿಚಾರ ಎಂದರು.
ರಾಯಚೂರಿಗೆ ಏಮ್ಸ್
ರಾಯಚೂರಿನಲ್ಲಿ ಏಮ್ಸ್  ಸ್ಥಾಪನೆ ಬಗ್ಗೆ ಮುಂದಿನ ವಾರ ದೆಹಲಿಗೆ ಹೋಗುವ ಸಂದರ್ಭದಲ್ಲಿ ಈ ವಿಷಯ ಪ್ರಸ್ತಾಪ ಮಾಡಿ ಹಿಂದುಳಿದ ಜಿಲ್ಲೆಗೆ ಏಮ್ಸ್ ಸ್ಥಾಪನೆಗೆ ಕ್ರಮವಹಿಸಲಾಗುವುದು. ಏಮ್ಸ್  ತರುವಲ್ಲಿ  ನಾನು ಯಶಸ್ವಿಯಾಗುತ್ತೇನೆ ಎಂದು ನನಗೆ ವಿಶ್ವಾಸವಿದೆ ಎಂದರು.

(ವರದಿ: ಡಿ.ಎಲ್. ಹರೀಶ್)     
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: BangaloreCM Basavaraja BommaiKannada News WebsiteKannadaNewsKannadaNewsLiveKannadaNewsOnlineKannadaWebsiteLatest News KannadaNewsinKannadaNewsKannadaಬೆಂಗಳೂರುಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
Previous Post

ನಮ್ಮ ಸಂಸ್ಕೃತಿಯ ಎಲ್ಲಾ ಆಯಾಮಗಳಲ್ಲೂ ಸೃಜನಾತ್ಮಕತೆಯಿದೆ: ರಘುಪತಿ ಎನ್‌. ಶರ್ಮಾ

Next Post

ಭಾರತೀಯ ಮಹಿಳಾ ಕ್ರಿಕೆಟ್ ತಂಡಕ್ಕೆ ಶಿವಮೊಗ್ಗದ ಅದಿತಿ ರಾಜೇಶ್ ಆಯ್ಕೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಭಾರತೀಯ ಮಹಿಳಾ ಕ್ರಿಕೆಟ್ ತಂಡಕ್ಕೆ ಶಿವಮೊಗ್ಗದ ಅದಿತಿ ರಾಜೇಶ್ ಆಯ್ಕೆ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

Dyson announced the results of its first Global Wet Cleaning Study

June 28, 2025

ಅಮೂಲಾಗ್ರ ಹೆಜ್ಜೆ | ಧೂಳು & ಒದ್ದೆ ನೆಲ ಸ್ವಚ್ಛತೆಗೆ ಮಹತ್ವದ ಡೈಸನ್ ವಾಷ್ ಜಿ1 | ಏನಿದರ ವಿಶೇಷತೆ?

June 28, 2025

ಕ್ಯಾನ್ಸರ್ ತಡೆಗಟ್ಟಲು ಜಾಗೃತಿ ಅತ್ಯಗತ್ಯ: ಶಾಸಕ ಅರಗ ಜ್ಞಾನೇಂದ್ರ

June 28, 2025

ಹಾಸನ | ದೇವೇಗೌಡರ ಪ್ರಯತ್ನ | 30 ರಸ್ತೆಗಳ ಮೇಲ್ದರ್ಜೆಗೆ 30 ಕೋಟಿ ರೂ. ಅನುದಾನ | ಗಡ್ಕರಿ ಭರವಸೆ

June 28, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

Dyson announced the results of its first Global Wet Cleaning Study

June 28, 2025

ಅಮೂಲಾಗ್ರ ಹೆಜ್ಜೆ | ಧೂಳು & ಒದ್ದೆ ನೆಲ ಸ್ವಚ್ಛತೆಗೆ ಮಹತ್ವದ ಡೈಸನ್ ವಾಷ್ ಜಿ1 | ಏನಿದರ ವಿಶೇಷತೆ?

June 28, 2025

ಕ್ಯಾನ್ಸರ್ ತಡೆಗಟ್ಟಲು ಜಾಗೃತಿ ಅತ್ಯಗತ್ಯ: ಶಾಸಕ ಅರಗ ಜ್ಞಾನೇಂದ್ರ

June 28, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!