ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ಸರ್ಜಿ ಫೌಂಡೇಶನ್ ಹಾಗೂ ಸರ್ಜಿ ಆಸ್ಪತ್ರೆಗಳ ಸಮೂಹ ಮತ್ತು ಸಮೃದ್ಧಿ ಸೇವಾ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಮಂಗಳವಾರ ರವೀಂದ್ರ ನಗರದ ಸರಕಾರಿ ಪ್ರಾಥಮಿಕ ಶಾಲೆ , ವಿನಾಯಕ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಟೈಫಾಯಿಡ್ ಲಸಿಕೆಯನ್ನು ನೀಡಲಾಯಿತು.
ಶಿಬಿರಕ್ಕೆ ಸರ್ಜಿ ಫೌಂಡೇಶನ್ನಿನ ನಿರ್ದೇಶಕಿಯಾದ ನಮಿತಾ ಸರ್ಜಿ ಅವರು ಚಾಲನೆ ನೀಡಿದರು. ಸಮೃದ್ಧಿ ಸೇವಾಟ್ರಸ್ಟ್‌ನ ಅಧ್ಯಕ್ಷೆ ತೇಜಸ್ವಿನಿ, ಕಾರ್ಯದರ್ಶಿ ಎಂ.ಜೆ. ಪ್ರವೀಣ್ ಕುಮಾರ್, ರವೀಂದ್ರ ನಗರದ ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಪುಷ್ಪಾ, ವಿನಾಯಕ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ರೀತಾ ಹಾಜರಿದ್ದರು.
ಶಿಬಿರದಲ್ಲಿ ಸರ್ಜಿ ಆಸ್ಪತ್ರೆಯ ಮಕ್ಕಳ ತಜ್ಞರಾದ ಡಾ. ಸುಭಾಷ್, ಡಾ. ರಶ್ಮಿ ಮಕ್ಕಳ ಆರೋಗ್ಯ ತಪಾಸಣೆ ನಡೆಸಿ, ಟೈಫಾಯಿಡ್ ಲಸಿಕೆ ನೀಡಿದರು. 50 ಕ್ಕೂ ಹೆಚ್ಚು ಮಕ್ಕಳು ಈ ಪ್ರಯೋಜನ ಪಡೆದುಕೊಂಡರು. ಮಕ್ಕಳಿಗೆ ಉಚಿತ ಔಷಧ ಹಾಗೂ ವಾಟರ್ ಬಾಟಲ್ ವಿತರಿಸಲಾಯಿತು. ಈ ಸಂದರ್ಭ ಸರ್ಜಿ ಫೌಡೇಶನ್ನಿನ ನಿರ್ದೇಶಕಿ ನಮಿತಾ ಸರ್ಜಿ ಅವರನ್ನು ಸನ್ಮಾನಿಸಲಾಯಿತು.
Also read: ನ.17ರಂದು ವಿಶೇಷಚೇತನ ಮಕ್ಕಳ ಹಬ್ಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post