Friday, August 1, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Special Articles

ನಿಮ್ಮ ಮಗುವಿಗೆ ನಾಲಿಗೆ ಒತ್ತಡದ ಸಮಸ್ಯೆ ಬಾಧಿಸುತ್ತಿದೆಯೇ? ಇಲ್ಲಿದೆ ಪರಿಹಾರ

November 17, 2022
in Special Articles
0 0
0
Share on facebookShare on TwitterWhatsapp
Read - 3 minutes

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ  |

ಸುಂದರವಾಗಿ ಕಾಣಲು ಯಾರಿಗೆ ತಾನೆ ಇಷ್ಟವಿರುವುದಿಲ್ಲ ಹೇಳಿ? ಆದರೆ, ಸುಂದರವಾಗಿ ಕಾಣಲು ಮುಖ್ಯವಾಗಿ ಅಂದವಾದ ದಂತಪಂಕ್ತಿಗಳಿರಬೇಕು. ಹಾಗಾಗಿಯೇ ಇಂದಿನ ಬಹುತೇಕ ಹದಿ ಹರೆಯದ ಮಕ್ಕಳು ಸಮರ್ಪಕವಾದ ದಂತಪಂಕ್ತಿಗಳಿಗಾಗಿ ಹಲ್ಲುಗಳ ಮೇಲೆ ಲೋಹದ ತಂತಿಗಳನ್ನು ಹಾಕಿಸಿಕೊಂಡಿರುವುದನ್ನು ನಾವು ಎಲ್ಲೆಡೆ ಕಾಣುತ್ತೇವೆ.

ಮಕ್ಕಳು ದೊಡ್ಡವರಾಗುತ್ತಾ ಯಾವ ಹಂತದಲ್ಲಿ ಈ ಬಗೆಯ ದೋಷಪೂರಿತ ದಂತಪಂಕ್ತಿಗಳಿಗೆ ಗುರಿಯಾಗುತ್ತಾರೆ ಎಂಬುದು ಹೆಚ್ಚಿನ ಪೋಷಕರಿಗೆ ತಿಳಿಯುವುದಿಲ್ಲ. ಸಮಸ್ಯೆ ಗೊತ್ತಾಗುವ ಹೊತ್ತಿಗೆ ಅದು ತೀವ್ರ ಸ್ವರೂಪದ್ದಾಗಿರುತ್ತದೆ. ಸಮಸ್ಯೆ ತೀವ್ರ ಸ್ವರೂಪದ್ದಾದಾಗ ಅದನ್ನು ಸರಿಪಡಿಸಲು ದೀರ್ಘಾವಧಿಯ ಚಿಕಿತ್ಸೆಯೇ ಬೇಕಾಗುತ್ತದೆ. ಕೆಲವೊಮ್ಮೆ ಮುಂದಕ್ಕೆ ಉಬ್ಬಿರುವ ದವಡೆಯನ್ನು ಸರಿ ಪಡಿಸಲು ದವಡೆಯ ಶಸ್ತ್ರಚಿಕಿತ್ಸೆಯನ್ನೇ ಮಾಡಬೇಕಾಗುತ್ತದೆ. ಆದರೆ, ದೋಷವನ್ನು ಮೊದಲೇ ಗುರುತಿಸಿದರೆ ಚಿಕಿತ್ಸೆಯು ಸರಳ ಹಾಗೂ ಅಲ್ಪಾವಧಿಯದಾಗಿರುತ್ತದೆ.
ಹುಟ್ಟಿದ ಮಕ್ಕಳು ತಾಯಿಯ ಹಾಲನ್ನು ನುಂಗುವಾಗ ಸ್ವಲ್ಪ ಮಟ್ಟಿಗೆ ನಾಲಿಗೆಯನ್ನು ಮುಂಚಾಚಿ, ಮೇಲ್ದವಡೆಯ ಮೇಲೆ ಒತ್ತಡವನ್ನು ಹಾಕುವುದು ಸಾಮಾನ್ಯ. ಆರು ತಿಂಗಳು ತುಂಬುವ ಹೊತ್ತಿಗೆ ಶೇಕಡ ಮೂವತ್ತರಿಂದ ನಲವತ್ತರಷ್ಟು ಮಕ್ಕಳಲ್ಲಿ ಈ ಅಭ್ಯಾಸವು ಕ್ರಮೇಣ ಕಡಿಮೆಯಾಗುತ್ತಾ ಹೋಗುತ್ತದೆ. ಆದರೆ, ಕೆಲವು ಮಕ್ಕಳಲ್ಲಿ ಈ ಅಭ್ಯಾಸವು ಇನ್ನೂ ಹಲವಾರು ವರ್ಷಗಳವರೆಗೆ ಮುಂದುವರೆಯಬಹುದು. ಕೆಲವು ಮಕ್ಕಳು ನುಂಗುವಾಗ ಮಾತ್ರ ನಾಲಿಗೆಯನ್ನು ಮುಂಚಾಚಿದರೆ, ಇನ್ನು ಕೆಲವು ಮಕ್ಕಳು ಮಾತನಾಡುವಾಗ ಹಾಗೂ ಸುಮ್ಮನೆ ಇದ್ದಾಗಲೂ ನಾಲಿಗೆಯಿಂದ ಮೇಲ್ದವಡೆಯ ಮೇಲೆ ಒತ್ತಡವನ್ನು ಹಾಕುವ ಅಭ್ಯಾಸವನ್ನು ಮಾಡಿಕೊಂಡಿರುತ್ತಾರೆ.

ಮಗು ಈ ರೀತಿಯ ಅಭ್ಯಾಸವನ್ನು ರೂಢಿಸಿಕೊಳ್ಳಲು ಕಾರಣಗಳೇನು ?

  • ಮಗುವಿಗೆ ಎರಡು ವರ್ಷ ತುಂಬಿದ ಬಳಿಕವೂ ಎದೆ ಹಾಲುಣಿಸಿದಾಗ
  • ಮಕ್ಕಳಿಗೆ ಸದಾ ಹೆಬ್ಬೆರಳು ಚೀಪುವ ಅಭ್ಯಾಸವಿದ್ದಾಗ
  • ಮಗುವಿನ ನಾಲಿಗೆಯು ಗಾತ್ರದಲ್ಲಿ ಸಾಮಾನ್ಯಕ್ಕಿಂತಲೂ ದೊಡ್ಡದಿದ್ದಾಗ
  • ಗಂಟಲಿನ ಒಳಭಾಗಲ್ಲಿರುವ ಟಾನ್ಸಿಲ್/ಅಡೆನಾಯ್ಡ್ ಗ್ರಂಥಿಗಳು ಗಾತ್ರದಲ್ಲಿ ದೊಡ್ಡದಾಗಿದ್ದಾಗ
  • ಮಗುವಿನ ಬಾಯಿ ಹಾಗೂ ಮುಖದ ಮಾಂಸಖಂಡಗಳ ನಡುವೆ ಅಸಮತೋಲನವಿದ್ದಾಗ
  • ಮಗುವಿನ ಬಾಯಿಯನ್ನು ಪೂರ್ತಿಯಾಗಿ ಮುಚ್ಚುವುದರಲ್ಲಿ ದೋಷವಿದ್ದಾಗ
  • ಮಗುವಿಗೆ ಬಾಯಿಯಲ್ಲಿ ಉಸಿರಾಡುವ ಅಭ್ಯಾಸವಿದ್ದಾಗ
  • ಅಲರ್ಜಿ, ಮತ್ತಿತರ ಕಾರಣಗಳಿಂದಾಗಿ ಮೂಗಿನ ಒಳಭಾಗದಲ್ಲಿ ಉರಿಯೂತವಿದ್ದಾಗ

ಆದರೆ ಮಗುವಿಗೆ ನಾಲ್ಕು ವರ್ಷ ತುಂಬಿದ ಮೇಲೆಯೂ ಮುಂದುವರೆಯುವ ಈ ಅಭ್ಯಾಸವು ಮುಂದೆ ಹಲವಾರು ಬಗೆಯ ದಂತ ದೋಷಗಳಿಗೆ ಕಾರಣವಾಗಬಹುದು. ಏಕೆಂದರೆ, ಜೀವಿಯು ಪ್ರತಿ ದಿನಕ್ಕೆ ಸುಮಾರು 1200 ರಿಂದ 2000 ಬಾರಿ ನುಂಗುವ ಪ್ರಕ್ರಿಯೆಯಲ್ಲಿ ತೊಡಗುತ್ತದೆ. ಪ್ರತಿ ಬಾರಿ ನುಂಗುವಾಗ ನಾಲಿಗೆಯನ್ನು ಕೊಂಚ ಮುಂದೆ ಚಾಚುವುದರಿಂದ ಅದು ಹಲ್ಲು ಹಾಗೂ ದವಡೆಗಳ ಮೇಲೆ ಪ್ರಬಲವಾದ ಒತ್ತಡವನ್ನು ಬೀರುತ್ತದೆ. ಹೀಗಾದಾಗ ಹಲ್ಲುಗಳು ಮುಂದೂಡಲ್ಪಡುತ್ತವೆ. ಅಷ್ಟೇ ಅಲ್ಲ, ಹುಟ್ಟುವ ಶಾಶ್ವತ ಹಲ್ಲುಗಳ ಗಾತ್ರ ಹಾಗೂ ಜೋಡಣೆಯಲ್ಲೂ ವ್ಯತ್ಯಾಸವಾಗುತ್ತದೆ.
ಪ್ರಾಥಮಿಕ ಹಂತಗಳಲ್ಲಿಯೇ, ಅಂದರೆ ಮಗು ಆರೇಳು ವರ್ಷದ್ದಿರಬೇಕಾದರೆ, ಅಂದರೆ ಶಾಶ್ವತ ಹಲ್ಲುಗಳು ಹುಟ್ಟುವ ಮೊದಲೇ ಈ ಅಭ್ಯಾಸವನ್ನು ಗುರುತಿಸಿ, ನಿಯಂತ್ರಿಸದೇ ಇದ್ದಲ್ಲಿ ಮುಂದೆ ಮಗುವಿನಲ್ಲಿ ವಿವಿಧ ಬಗೆಯ ದಂತ ದೋಷಗಳು ಕಾಣಿಸಿಕೊಳ್ಳಬಹುದು.

ಕಾಣಿಸಿಕೊಳ್ಳಬಹುದಾದ ದಂತ ದೋಷಗಳು ಯಾವುವು?

  • ಮಧ್ಯದ ಬಾಚಿ ಹಲ್ಲುಗಳು ಸಾಮಾನ್ಯಕ್ಕಿಂತಲೂ ಹೆಚ್ಚು ಅಗಲವಾಗಿ ಹುಟ್ಟಬಹುದು
  • ಮೇಲ್ದವಡೆ/ಕೆಳದವಡೆಯ ಮಧ್ಯ ಅಂತರ ಉಂಟಾದಾಗ
  • ಇದರಿಂದ ಬಾಯಿಯನ್ನು ಪೂರ್ಣ ಮುಚ್ಚಲು ಸಾಧ್ಯವಾಗದೆ ಇರಬಹುದು
  • ಹಲ್ಲುಗಳು ಮುಂದಕ್ಕೆ ಬಂದಂತಾಗಬಹುದು
  • ಪರಸ್ಪರ ಹಲ್ಲುಗಳ ನಡುವೆ ಅಂತರ ಹೆಚ್ಚಾಗಬಹುದು
  • ಅಸಮರ್ಪಕವಾದ ಹಲ್ಲುಗಳ ಜೋಡಣೆ
  • ಸಣ್ಣದಾದ ಹಾಗೂ ಜೋತು ಬಿದ್ದಿರುವ ಮೇಲ್ದುಟಿ
  • ಮಾತನಾಡಲು ತೊದಲಬಹುದು, ಕೆಲವು ಅಕ್ಷರ ಉಚ್ಛರಿಸಲು ಮಗು ಕಷ್ಟ ಪಡಬಹುದು

ಈ ರೀತಿಯ ತೊಂದರೆಯನ್ನು ಸರಿಪಡಿಸಲು ದಂತ ಮೂಳೆ ತಜ್ಞರು ಸಹಾಯ ಮಾಡುತ್ತಾರೆ. ಆದರೆ, ಈ ರೀತಿಯ ಚಿಕಿತ್ಸೆಯು ಸಾಮಾನ್ಯವಾಗಿ ದೀರ್ಘಾವಧಿಯದ್ದಾಗಿರುತ್ತದೆ.
ಆದರೆ ಮಕ್ಕಳ ನಾಲಿಗೆ ಒತ್ತಡದ ಅಭ್ಯಾಸವನ್ನು ಮೊದಲ ಹಂತಗಳಲ್ಲಿಯೇ ಗುರುತಿಸಿದರೆ ಮುಂದಾಗುವ ದಂತ ದೋಷಗಳನ್ನು ತಡೆಯಬಹುದು. ಹಾಗಾಗಿಯೇ, ನಿಮ್ಮ ಮಕ್ಕಳಿಗೆ ಐದರಿಂದ ಆರು ವರ್ಷ ತುಂಬುವಾಗ ಅವರನ್ನು ಸೂಕ್ಷ್ಮವಾಗಿ ಗಮನಿಸಿ. ಮಕ್ಕಳು ನುಂಗುವಾಗ ಅಥವಾ ಮಾತನಾಡುವಾಗ ಅಥವಾ ಸಾಮಾನ್ಯ ಸ್ಥಿತಿಯಲ್ಲಿಯೂ ನಾಲಿಗೆಯನ್ನು ಮುಂಚಾಚಿ, ದವಡೆಯ ಮೇಲೆ ಒತ್ತಡ ಹಾಕುತ್ತಿದ್ದರೆ, ಕೂಡಲೇ ಹತ್ತಿರದ ದಂತ ವೈದ್ಯರಲ್ಲಿ ಸಲಹೆ ಪಡೆಯಿರಿ. ಮಕ್ಕಳ ದಂತ ವೈದ್ಯರು ಹಲವು ತಪಾಸಣೆಗಳ ಮೂಲಕ ಮಗುವಿನ ಸಮಸ್ಯೆಯ ಬಗೆ, ತೀವ್ರತೆ ಹಾಗೂ ಜೊತೆಯಲ್ಲಿಯೇ ಇರಬಹುದಾದ ಇತರ ದೋಷಗಳನ್ನು ಕಂಡು ಹಿಡಿದು ಧೃಡ ಪಡಿಸಿಕೊಳ್ಳುತ್ತಾರೆ ಹಾಗೂ ಸೂಕ್ತ ಚಿಕಿತ್ಸೆಯನ್ನು ಸೂಚಿಸುತ್ತಾರೆ.

ಸೂಚಿಸಬಹುದಾದ ಚಿಕಿತ್ಸೆಗಳು ಯಾವುವು ?

  • ಮಕ್ಕಳಿಗೆ ಸರಿಯಾದ ನುಂಗುವ ಕ್ರಮವನ್ನು ತಿಳಿ ಹೇಳಿ ಅದನ್ನು ರೂಢಿ ಮಾಡಿಸುವುದು
  • ಕೆಳ ದವಡೆಯ ಮಾಂಸ ಖಂಡಗಳು ಬಲಗೊಳ್ಳಲು ಕೆಲ ಬಗೆಯ ಸರಳ ವ್ಯಾಯಾಮಗಳನ್ನು ಹೇಳಿ ಮಾಡಿಸುವುದು
  • ನಾಲಿಗೆಯ ಸಮರ್ಪಕ ಚಲನೆಗಾಗಿ ಕೆಲವು ಸರಳ ವ್ಯಾಯಾಮಗಳನ್ನು ರೂಢಿಸುವುದು

ಬಾಯಿಯ ಒಳಗೆ ಇರಿಸಬಹುದಾದ ಸರಳ ಸಾಧನಗಳ ಬಳಕೆ: ಈ ಸಾಧನಗಳು ನುಂಗುವ ಸಂದರ್ಭದಲ್ಲಿ ನಾಲಿಗೆಯು ಮುಂದೆ ಚಾಚದಂತೆ ತಡೆಯುತ್ತವೆ. ಇವುಗಳಲ್ಲಿ ಕೆಲವು ಸಾಧನಗಳನ್ನು ಕೇವಲ ರಾತ್ರಿ ವೇಳೆಯೂ, ಇನ್ನು ಕೆಲವನ್ನು ದಂತ ವೈದ್ಯರ ಸಲಹೆಯ ಮೇರೆಗೆ ಸಮಸ್ಯೆ ಸರಿ ಹೋಗುವವರೆಗೆ ಶಾಶ್ವತವಾಗಿ ಬಾಯಿಯಲ್ಲಿಯೇ ಇರಿಸಬಹುದು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: Adenoid glandBrush teethDr. Vinaya SrinivasHealth ArticleJawKannada News WebsiteLatest News KannadaShimogaShivamoggaShivamogga NewsShivamogga Subbaiah Medical CollegeSpecial ArticleTonsilಅಡೆನಾಯ್ಡ್ ಗ್ರಂಥಿಟಾನ್ಸಿಲ್ದಂತಪಂಕ್ತಿದವಡೆಬಾಚಿ ಹಲ್ಲುವಿಶೇಷ ಲೇಖನಶಿವಮೊಗ್ಗ
Previous Post

ಗಮನಿಸಿ! ಈ ಎರಡು ದಿನ ಶಿವಮೊಗ್ಗ ನಗರದಲ್ಲಿ ನೀರು ಸರಬರಾಜು ಇರುವುದಿಲ್ಲ

Next Post

ಎಲೆಚುಕ್ಕೆ ರೋಗದ ಅಧ್ಯಯನಕ್ಕೆ ಕೇಂದ್ರದಿಂದ ಬರಲಿದೆ 7 ತಜ್ಞರ ತಂಡ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಎಲೆಚುಕ್ಕೆ ರೋಗದ ಅಧ್ಯಯನಕ್ಕೆ ಕೇಂದ್ರದಿಂದ ಬರಲಿದೆ 7 ತಜ್ಞರ ತಂಡ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಶಾಂತಿಭಂಗ, ಕೊಲೆಯತ್ನ ಆರೋಪಿಗೆ 10 ವರ್ಷ ಶಿಕ್ಷೆ 

August 1, 2025

ಆ.3 | ಪ್ರತಿಭಾ ಪುರಸ್ಕಾರ, ವಿದ್ಯಾನಿಧಿ ವಿತರಣೆ, ಸುವರ್ಣ ದಾಂಪತ್ಯ ಸನ್ಮಾನ ಸಮಾರಂಭ

August 1, 2025

ಸೋಸಲೆ ಶ್ರೀ ವ್ಯಾಸರಾಜ ಮಠಾಧೀಶ ಶ್ರೀ ಶ್ರೀ ವಿದ್ಯಾಶ್ರೀಶತೀರ್ಥರಿಗೆ ಭವ್ಯ ಮೆರವಣಿಗೆ ಮತ್ತು ನಾಣ್ಯ-ಧಾನ್ಯಗಳಿಂದ ತುಲಾಭಾರ

August 1, 2025

ಎಂಪಿಎಂ ಕಾರ್ಖಾನೆ ಪುನರ್ ಆರಂಭಿಸಿ: ಸಿಎಂಗೆ ಶಾಸಕ ಸಂಗಮೇಶ್ವರ್ ಮನವಿ

August 1, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಶಾಂತಿಭಂಗ, ಕೊಲೆಯತ್ನ ಆರೋಪಿಗೆ 10 ವರ್ಷ ಶಿಕ್ಷೆ 

August 1, 2025

ಆ.3 | ಪ್ರತಿಭಾ ಪುರಸ್ಕಾರ, ವಿದ್ಯಾನಿಧಿ ವಿತರಣೆ, ಸುವರ್ಣ ದಾಂಪತ್ಯ ಸನ್ಮಾನ ಸಮಾರಂಭ

August 1, 2025

ಸೋಸಲೆ ಶ್ರೀ ವ್ಯಾಸರಾಜ ಮಠಾಧೀಶ ಶ್ರೀ ಶ್ರೀ ವಿದ್ಯಾಶ್ರೀಶತೀರ್ಥರಿಗೆ ಭವ್ಯ ಮೆರವಣಿಗೆ ಮತ್ತು ನಾಣ್ಯ-ಧಾನ್ಯಗಳಿಂದ ತುಲಾಭಾರ

August 1, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!