ಕಲ್ಪ ಮೀಡಿಯಾ ಹೌಸ್ | ಮಂಗಳೂರು/ತೀರ್ಥಹಳ್ಳಿ |
ಶನಿವಾರ ಮಂಗಳೂರಿನ ರಿಕ್ಷಾದಲ್ಲಿ ಸಂಭವಿಸಿದ ಸ್ಪೋಟಕ್ಕೆ ಸಂಬಂಧಿಸಿದಂತೆ ತೀರ್ಥಹಳ್ಳಿ ಲಿಂಕ್ ಇದ್ದು, ಪಟ್ಟಣದಲ್ಲಿರುವ ಪ್ರಮುಖ ಆರೋಪಿ, ಉಗ್ರ ಶಾರೀಕ್ Terrorist Shariq ನಿವಾಸದ ಮೇಲೆ ಪೊಲೀಸರು ದಾಳಿ ನಡೆಸಿ, ತಪಾಸಣೆ ನಡೆಸಿದ್ದಾರೆ.
ಶನಿವಾರ ಮಂಗಳೂರಿನಲ್ಲಿ ಸಂಭವಿಸಿದ ಆಟೋರಿಕ್ಷಾ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ತೀರ್ಥಹಳ್ಳಿಯ ಶಾರೀಕ್ ನಿವಾಸದ ಮೇಲೆ ಶಿವಮೊಗ್ಗ ಪೊಲೀಸರು ದಾಳಿ ನಡೆಸಿ, ಸುಮಾರು 15 ಮಂದಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ವರದಿಯಾಗಿದೆ. ಶಾರೀಕ್ ಮತ್ತು ಮಾಜ್ ಮನೆಗೆ ತೆರಳಿ ಪೊಲೀಸರ ತಂಡ ಪರಿಶೀಲನೆ ನಡೆಸಿದ್ದು, ಬಾಳೆಬೈಲಿನಲ್ಲಿ ಒಂದು ಮನೆ ಮತ್ತು ಸೊಪ್ಪುಗುಡ್ಡೆಯಲ್ಲಿ ಮೂರು ಮನೆ ಮೇಲೆ ದಾಳಿ ನಡೆಸಿ, ತಪಾಸಣೆ ನಡೆಸಲಾಗಿದೆ.
ಆಗುಂಬೆ ಪಿಎಸ್’ಐ ಶಿವಕುಮಾರ್, ಮಾಳೂರು ಪಿಎಸ್’ಐ ನವೀನ್ ಕುಮಾರ್ ಮಠಪತಿ, ತೀರ್ಥಹಳ್ಳಿ ಇನ್’ಸ್ಪೆಕ್ಟರ್ ಅಶ್ವಥ್ ಗೌಡ, ಮಾಳೂರು ಸರ್ಕಲ್ ಇನ್’ಸ್ಪೆಕ್ಟರ್ ಪ್ರವೀಣ್ ನೀಲಮ್ಮನವರ್ ನೇತೃತ್ವದಲ್ಲಿ ದಾಳಿ ನಡೆದಿದೆ.
ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ಕುಟುಂಬಸ್ಥರನ್ನು ಪೊಲೀಸರು ಮಂಗಳೂರಿಗೆ ಕರೆದೊಯ್ದು ವಿಚಾರಣೆಗೆ ಒಳಪಡಿಸಿದ್ದಾರೆ. ಶಾರೀಕ್ ಚಿಕ್ಕಮ್ಮ, ಅಜ್ಜಿ ಹಾಗೂ ಸಹೋದರಿಯರು ಆತ ಶಾರೀಕ್ ಎಂದು ಆತನ ಸಹೋದರಿಯರು ಗುರುತಿಸಿದ್ದಾರೆ ಎಂದು ವರದಿಯಾಗಿದೆ.
Also read: ರಾತ್ರೋರಾತ್ರಿ ಮೆಗ್ಗಾನ್ ವೈದ್ಯರು ಹಾಗೂ ಸಿಬ್ಬಂದಿಗಳು ಧರಣಿ ನಡೆಸಿದ್ದೇಕೆ? ಇಷ್ಟಕ್ಕೂ ನಡೆದಿದ್ದೇನು?
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post