ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಭದ್ರಾ ನದಿ ತಟದಲ್ಲಿರುವ ಶೃಂಗೇರಿ ಶ್ರೀ ಶಂಕರ ಮಠದಲ್ಲಿ ಆಯೋಜಿಸಲಾಗಿದ್ದ ಲಲಿತಾ ಹೋಮ ಕಾರ್ಯಕ್ರಮವು ದಕ್ಷಿಣಾಮ್ನಾಯ ಶಾರದಾ ಪೀಠದ ವಿಧುಶೇಖರ ಭಾರತಿ ಸನ್ನಿಧಾನಂಗಳವರ ಸಮ್ಮುಖದಲ್ಲಿ ಸಂಪನ್ನಗೊAಡಿತು.
ನಿನ್ನೆ(ಶುಕ್ರವಾರ) ಸಂಜೆ ನಗರಕ್ಕೆ ಆಗಮಿಸಿದ ಶ್ರೀಗಳವರನ್ನು ಕೆಎಸ್’ಆರ್’ಟಿಸಿ ಡಿಪೋ ಬಳಿಯಲ್ಲಿ ಪೂರ್ಣಕುಂಭದೊAದಿಗೆ ಸ್ವಾಗತಿಸಲಾಯಿತು. ಅಲ್ಲಿಂದ, ಅಲಂಕೃತ ವಾಹನದಲ್ಲಿ ಶ್ರೀಗಳ ಅದ್ದೂರಿ ಮೆರವಣಿಗೆ ನಡೆಸಲಾಯಿತು. ಡೊಳ್ಳು ಕುಣಿತ, ಕರಾವಳಿಯ ಚಂಡೆ ವಾದ್ಯ, ನಾದಸ್ವರದದ ಮೆರುಗಿನೊಂದಿಗೆ ಉತ್ಸವದಲ್ಲಿ ನೂರಾರು ಮಹಿಳೆಯರು ಜ್ಯೋತಿಗಳನ್ನು ಹಿಡಿದು ಸಾಗಿದರು.
ಶ್ರೀಮಠದಲ್ಲಿ ಆಗಮಿಸಿದ ನಂತರ ಮಹಾಗಣಪತಿ, ಶ್ರೀಶಾರದಾಂಬೆ ಹಾಗೂ ಶ್ರೀಶಂಕರಾಚಾರ್ಯರ ದರ್ಶನ ಪಡೆದು, ಧೂಳಿ ಪಾದಪೂಜೆಯಲ್ಲಿ ಪಾಲ್ಗೊಂಡರು. ಆನಂತರ ಶ್ರೀ ಚಂದ್ರಮೌಳೇಶ್ವರ ದೇವರ ಪೂಜೆ ನೆರವೇರಿಸಿದರು.
ಇಂದು ಶ್ರೀಗಳ ಸಮ್ಮುಖದಲ್ಲಿ ಶ್ರೀಲಲಿತಾ ಹೋಮ ಪೂರ್ಣಾಹುತಿ ನಡೆದಿದ್ದು, ಆನಂತರ ನೆರೆದಿದ್ದ ಭಕ್ತರಿಗೆ ಗುರುಗಳು ಫಲ ಮಂತ್ರಾಕ್ಷತೆ ಅನುಗ್ರಹಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post