No Result
View All Result
Minister Somanna Inspects & Inaugurates Road Under Bridges in Tumkur District eliminating level Crossing gates
English Articles

Minister Somanna Inspects & Inaugurates Road Under Bridges in Tumkur District eliminating level Crossing gates

by ಕಲ್ಪ ನ್ಯೂಸ್
February 26, 2026
0

Kalpa Media House  |  Bengaluru  | Union Minister of State for Railways and Jal Shakti, V. Somanna, today inaugurated three...

Read moreDetails
Le Méridien Dehradun in the Foothills of the Himalayas, Inviting Guests to Slow Down and Savour the Good Life

Le Méridien Dehradun in the Foothills of the Himalayas, Inviting Guests to Slow Down and Savour the Good Life

February 25, 2026
From Complex Revisions to Robotic Spine Care: Narayana Health City Marks 10,000 Surgery Milestone

From Complex Revisions to Robotic Spine Care: Narayana Health City Marks 10,000 Surgery Milestone

February 24, 2026
Amazon Opens Its Second Largest Office in Asia in Bengaluru

Amazon Opens Its Second Largest Office in Asia in Bengaluru

February 24, 2026
ಪೊಂಗಲ್ ಹಬ್ಬದ ಪ್ರಯುಕ್ತ ಕೊಟ್ಟಾಯಂ – ಬೆಂಗಳೂರು ಕ್ಯಾಂಟೋನ್ಮೆಂಟ್ ನಡುವೆ ವಿಶೇಷ ರೈಲು ಸಂಚಾರ

SWR Opens Makajipalli–Dharmavaram Double Line Project

February 23, 2026
  • Advertise With Us
  • Grievances
  • About Us
  • Contact Us
Friday, February 27, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಬೆಂಗಳೂರು ನಗರ

ಎಚ್.ಟಿ. ಪೋತೆಯವರು ಕೇವಲ ಸಾಹಿತ್ಯ ಕ್ಷೇತ್ರಕ್ಕೆ ಮಾತ್ರ ಸೀಮಿತರಲ್ಲ: ಹಂಪ ನಾಗರಾಜಯ್ಯ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
November 30, 2022
in ಬೆಂಗಳೂರು ನಗರ
0
ಎಚ್.ಟಿ. ಪೋತೆಯವರು ಕೇವಲ ಸಾಹಿತ್ಯ ಕ್ಷೇತ್ರಕ್ಕೆ ಮಾತ್ರ ಸೀಮಿತರಲ್ಲ: ಹಂಪ ನಾಗರಾಜಯ್ಯ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್   |  ಬೆಂಗಳೂರು  |

ಪೋತೆ ಸ್ನೇಹಮಯಿ, ವಾತ್ಸಲ್ಯ ಮಯಿ, ವಿಶ್ವಾಸಕ್ಕೆ ಎಂದೂ ಕುಂದು ತರುವ ವ್ಯಕ್ತಿ ಅಲ್ಲ. ಪೋತೆ ಅನೇಕ ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅವರು ಕೇವಲ ಸಾಹಿತ್ಯ ಕ್ಷೇತ್ರಕ್ಕೆ ಮಾತ್ರ ಸೀಮಿತರಲ್ಲ ಎಂದು ಹಿರಿಯ ಸಾಹಿತಿ ಹಂಪನಾ ಹೇಳಿದರು.

ಅವರು ಸಪ್ನ ಬುಕ್ ಹೌಸ್, ಕನ್ನಡ ಜನಶಕ್ತಿ ಕೇಂದ್ರ ಬೆಂಗಳೂರು ಹಾಗೂ ಕಲಬುರಗಿಯ ಪ್ರೊ. ಮಲ್ಲೇಪುರಂ ಸಾಂಸ್ಕೃತಿಕ ಪ್ರತಿಷ್ಠಾನ ಸಹಯೋಗದೊಂದಿಗೆ ನಡೆದ ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪ್ರೊ. ಎಚ್.ಟಿ. ಪೋತೆಯವರ ನಾಲ್ಕು ಕೃತಿಗಳ ಅವಲೋಕನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪೋತೆ ಅವರ ಬಹು ಮುಖ್ಯ ಕ್ಷೇತ್ರ ಅಂದ್ರೆ ಜಾನಪದ ಕ್ಷೇತ್ರ. ಅವರು ಜಾನಪದ ಕ್ಷೇತ್ರದಲ್ಲಿ ವಿಶಿಷ್ಟ ಕೆಲಸಗಳನ್ನು, ಪ್ರಯೋಗಳನ್ನು ಮಾಡುತ್ತಲೇ ಬಂದಿದ್ದಾರೆ. ಅವರು ಯಾವ ಸಮಾಜದಿಂದ ಬಂದರು ಆ ಸಮಾಜದ ಹೊರ ಅಧ್ಯಯನ ಮತ್ತು ಒಳ ಅಧ್ಯಯನವನ್ನು ಮಾಡಿದ್ದಾರೆ ಹಾಗೂ ಆ ಸಮುದಾಯವನ್ನು ಅಭಿವೃದ್ಧಿ ಪಡಿಸಿದ ಅಂಬೇಡ್ಕರ್‌ ಅವರಂತೆ ಇನ್ನಿತರ ವ್ಯಕ್ತಿಗಳ ಬಗ್ಗೆ ಆಳವಾದ ಅಧ್ಯಯನ ಮಾಡಿದ್ದಾರೆ. ಅವರು ಬೆಳೆದು ಬಂದಿರುವ ಹಾದಿ ಬಹಳ ವಿಭಿನ್ನವಾಗಿದೆ. ಇನ್ನು ಮುಂದೆಯೂ ಇನ್ನಷ್ಟು ಹೊಸ ಕೃತಿಗಳು ಅವರಿಂದ ಬರಲಿ ಎಂದು ಆಶಿಸಿದರು.

ಕನ್ನಡ ಅಧ್ಯಯನ ಕೇಂದ್ರ ಕರ್ನಾಟಕ ವಿಶ್ವವಿದ್ಯಾಲಯ ಸಹಾಯಕ ಪ್ರಾಧ್ಯಾಪಕ ಮುದೇನೂರು ನಿಂಗಪ್ಪ ಮಾತಾನಾಡಿ, ‘ಬಯಲೆಂಬೊ ಬಯಲು’ ವಚನ ಸಾಹಿತ್ಯವಾಗಿದೆ. ತಾತ್ವಿಕ ನೆಲೆಯಲ್ಲಿಈ ಕೃತಿಯನ್ನು ಕಟ್ಟಿಕೊಟ್ಟಿದ್ದಾರೆ. ಯಾವುದೇ ಲೇಖಕ ತನ್ನ ಆತ್ಮ ವಿಶ್ವಾಸವನ್ನು ಕೊನೆಯವರೆಗೂ ಇಟ್ಟುಕೊಳ್ಳಬೇಕು ಎಂಬುದನ್ನು ಈ ಕಾದಂಬರಿಯಲ್ಲಿ ತಿಳಿಹೇಳಲಾಗಿದೆ ಎಂದು ಅವರು ಕೃತಿಯ ಬಗ್ಗೆ ಅವಲೋಕನ ಮಾಡಿದರು.
ಶ್ರೀಶೈಲ ನಾಗರಾಳ ಮಾತನಾಡಿ, ಪೋತೆ ಅವರು ಜನಪದ ಕ್ಷೇತ್ರ, ವಿಚಾರವಾದಿ ಕ್ಷೇತ್ರದಲ್ಲೂ ಸಾಧನೆ ಮಾಡಿದ್ದು ಬಹುಮುಖ್ಯವಾಗಿ ಅವರು ಸೃಜನಶೀಲ ಲೇಖಕ ಕೂಡ ಹೌದು. ಅವರ ಎರಡು ಕಾದಂಬರಿಗಳು ‘ಬಯಲೊಂಬ ಬಯಲು’ ಮತ್ತು ‘ಮಹಾಬಿಂದು’ ಕಾದಂಬರಿ ಪುನರಾವಲೋಕನಕ್ಕೆ ಹೆಸರುವಾಸಿಯಾಗಿವೆ. ವಿಶ್ವ ಪರ್ಯಟನೆ ಮಾಡಿದ ವ್ಯಕ್ತಿ ಎಂಬ ಹೆಗ್ಗಳಿಕೆಯೂ ಇವರಿಗಿದೆ ಎಂದು ಹೇಳಿದರು.

ಕನ್ನಡ ವಿಭಾಗ ಶೇಷಾದ್ರಿಪುರಂ ಸಂಜೆ ಕಾಲೇಜಿನ ಮುಖ್ಯಸ್ಥರು ಸತ್ಯಮಂಗಲ ಮಹಾದೇವ ಅವರು ಮಾತಾನಾಡಿ, ‘ಅಂಬೇಡ್ಕರ್ ಭಾರತ’ ಹಲವು ಹೂಗಳ ಹಾರವಾಗಿದೆ. ಹಾಗೆಯೇ ಭಾರತವು ಜಾತ್ಯಾತೀತಗಳಿಂದ, ಸಮಾನತೆಯಿಂದ ಕೂಡಿದ ದೇಶವಾಗಿದೆ. ಅಂಬೇಡ್ಕರ್‌ ಕಂಡ ಭಾರತವನ್ನು ಪೋತೆಯವರು ಕಟ್ಟಿಕೊಟ್ಟಿದ್ದಾರೆ ಎಂದು ‘ಅಂಬೇಡ್ಕರ್ ಭಾರತ’ ಕೃತಿಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.
ದಿ ಆಕ್ಸ್‌ಫರ್ಡ್ ಕಾಲೇಜ್ ಆಫ್ ಬ್ಯುಸಿನೆಸ್ ಮ್ಯಾನೇಜ್‌ಮೆಂಟ್‌ನ ಸಹ ಪ್ರಾಧ್ಯಾಪಕ ಶಿವರಾಜ ಬ್ಯಾಡರಹಳ್ಳಿಯವರು, ಜನಪದ ಕೃತಿ ಎಂಬುದು ಬಹಳ ಸುಲಭವಾಗಿರುತ್ತದೆ ಎಂಬ ಭ್ರಮೆಯಲ್ಲಿ ಎಲ್ಲರೂ ಇರುತ್ತಾರೆ. ಆದರೆ ನಿಜವಾದ ಜನಪದ ಸಾಹಿತ್ಯ 1970 ರಲ್ಲಿ ಪ್ರಾರಂಭವಾಯಿತು. ಇಂದಿನ ಕಾಲದಲ್ಲಿ ಎಲ್ಲ ಕೃತಿಗಳಿಗೂ ಪ್ರಶಸ್ತಿ ಸಿಗುವುದನ್ನು ನಾವು ಕಾಣುತ್ತೇವೆ. ಇಂದು ಒಂದು ಪುಸ್ತಕವು ಮರುಮುದ್ರಣಗೊಳ್ಳಬೇಕಾದರೆ ಬಹಳ ಕಷ್ಟವಿದೆ. ಆದರೆ ಈ ಕೃತಿಯು ಮರು ಮುದ್ರಣಗೊಂಡು ಪ್ರಶಸ್ತಿಯನ್ನು ಪಡೆದುಕೊಂಡಿದೆ ಎಂದು ಸಮಾಜೋಜಾನಪದ ಮತ್ತು ಜಾನಪದ ಜ್ಞಾನ-ವಿಜ್ಞಾನ ಕೃತಿಯ ಬಗ್ಗೆ ವಿಷಯ ಮಂಡನೆ ಮಾಡಿದರು.

ಲೇಖಕ ಎಚ್.ಟಿ. ಪೋತೆ ಮಾತಾನಾಡಿ, ನಾನು ಈ ಕೃತಿಗಳನ್ನು ರಚಿಸಲು ಮುಖ್ಯ ಕಾರಣ ನಮ್ಮ ದೇಶಕ್ಕೆ ಅಂಟಿಕೊಂಡಿರುವ ಜಾತಿಪದ್ಧತಿ, ಮತಾಂಧತೆಯನ್ನು ಹೋಗಲಾಡಿಸಬೇಕು ಎಂಬುದಾಗಿದೆ. ಸಂವಿಧಾನ ಇರಲಿಲ್ಲ ಎಂದರೆ ನನ್ನ ಪ್ರಕಾರ ನಾನು ಹಾಗೂ ನನ್ನ ಕುಟುಂಬದ ಸದಸ್ಯರು ವಿದ್ಯಾವಂತಾರಾಗುತ್ತಿರಲಿಲ್ಲ. ಇಂದು ನಾನು ಈ ಕನ್ನಡ ಸಾಹಿತ್ಯಕ್ಷೇತ್ರದಲ್ಲಿ ನಿಂತಿದ್ದೇನೆ ಎಂದಾದರೆ ಅದು ನನಗೆ ಸಾಮಾನ್ಯ ವಿಚಾರವಲ್ಲ. ಏಕೆಂದರೆ ಕನ್ನಡ ಸಾಹಿತ್ಯ ಕೇಂದ್ರ ಎನ್ನುವುದು ಒಂದು ಪುಣ್ಯ ಶಕ್ತಿ ಕೇಂದ್ರವಾಗಿದೆ ಎಂದು ತನ್ನ ಓದಿನ ದಿನ ಹಾಗೂ ಕಷ್ಟದ ದಿನಗಳನ್ನು ಮೆಲುಕು ಹಾಕಿದರು.
ಹಿ.ಚಿ.ಬೋರಲಿಂಗಯ್ಯ ಮಾತಾನಾಡಿ. ಇಂದಿನ ಕಾಲದಲ್ಲಿ ಪತ್ರಿಕೆಗಳನ್ನು ಓದುವವರೇ ಇಲ್ಲ. ಇನ್ನು ಪುಸ್ತಕಗಳನ್ನು ಓದುವವರ ಸಂಖ್ಯೆ ತೀರ ಕ್ಷೀಣಿಸಿದೆ. ಇದು ನಿಜವಾದ ದುರಂತ. ಇಂತಹ ಕಾಲಘಟ್ಟದಲ್ಲಿ ಪೋತೆಯವರಂತಹ ಲೇಖಕರು ಇರುವುದು ಇಂದಿನ ಸಾಹಿತ್ಯ ಕ್ಷೇತ್ರ ಉಳಿಯಲು ಬಹು ಮುಖ್ಯ ಕಾರಣ ಎನ್ನಬಹುದಾಗಿದೆ. ಪೋತೆಯವರ 3 ಕೃತಿಗಳು ಒಂದೊಂದು ಸಂದೇಶವನ್ನು ನೀಡುತ್ತವೆ ಹಾಗೂ ಅವರು ನಡೆಸಿರುವ ಅಧ್ಯಯನ ಪುಸ್ತಕದಲ್ಲಿ ಬಹಳ ಚೆನ್ನಾಗಿ ಬಿಂಬಿತವಾಗಿದೆ ಎಂದು ಅಧ್ಯಕ್ಷೀಯ ನುಡಿಗಳಾನ್ನಾಡಿದರು.

ಜನಶಕ್ತಿ ಕೇಂದ್ರ ಅಧ್ಯಕ್ಷ ರಾಮೇಗೌಡ ಸ್ವಾಗತಿಸಿ, ನಂಜುಂಡ ಅವರು ವಂದಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: BangaloreKannada News WebsiteKannadaNewsKannadaNewsLiveKannadaNewsOnlineKannadaWebsiteLatest News KannadaNewsinKannadaNewsKannadaಬೆಂಗಳೂರು
Share211Tweet123Send
Previous Post

ಕೊಪ್ಪಳ: ಕಿರ್ಲೋಸ್ಕರ್ ಕಾರ್ಖಾನೆ ಆವರಣದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

Next Post

ಎನ್ ಯು ಆಸ್ಪತ್ರೆಯ ವರ್ಸಿಯಸ್ ರೋಬೋಟಿಕ್ ಸರ್ಜಿಕಲ್ ಸಿಸ್ಟಮ್‌ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಚಾಲನೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಎನ್ ಯು ಆಸ್ಪತ್ರೆಯ ವರ್ಸಿಯಸ್ ರೋಬೋಟಿಕ್ ಸರ್ಜಿಕಲ್ ಸಿಸ್ಟಮ್‌ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಚಾಲನೆ

ಎನ್ ಯು ಆಸ್ಪತ್ರೆಯ ವರ್ಸಿಯಸ್ ರೋಬೋಟಿಕ್ ಸರ್ಜಿಕಲ್ ಸಿಸ್ಟಮ್‌ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಚಾಲನೆ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

February 12, 2026
ಪೊಂಗಲ್ ಹಬ್ಬದ ಪ್ರಯುಕ್ತ ಕೊಟ್ಟಾಯಂ – ಬೆಂಗಳೂರು ಕ್ಯಾಂಟೋನ್ಮೆಂಟ್ ನಡುವೆ ವಿಶೇಷ ರೈಲು ಸಂಚಾರ

ಈ ಎಲ್ಲಾ ದಿನಗಳು ಮೈಸೂರು-ಶಿವಮೊಗ್ಗ ಎಕ್ಸ್’ಪ್ರೆಸ್, ಅರಸೀಕೆರೆ ರೈಲುಗಳ ಬಿಗ್ ಅಪ್ಡೇಟ್

February 6, 2026
ತುಮಕೂರು – ದಾವಣಗೆರೆ ನೇರ ರೈಲು ಮಾರ್ಗ ಪೂರ್ಣ | ಯಾವಾಗ ಸಂಚಾರ ಆರಂಭ?

ತುಮಕೂರು – ದಾವಣಗೆರೆ ನೇರ ರೈಲು ಮಾರ್ಗ ಪೂರ್ಣ | ಯಾವಾಗ ಸಂಚಾರ ಆರಂಭ?

February 27, 2026
ಸಂಚಾರ ದಟ್ಟಣೆ ನಿಯಂತ್ರಿಸಲು ರೈಲ್ವೆ ಕೆಳ ಸೇತುವೆಗಳು ಸಹಕಾರಿ: ಸಚಿವ ಸೋಮಣ್ಣ

ಸಂಚಾರ ದಟ್ಟಣೆ ನಿಯಂತ್ರಿಸಲು ರೈಲ್ವೆ ಕೆಳ ಸೇತುವೆಗಳು ಸಹಕಾರಿ: ಸಚಿವ ಸೋಮಣ್ಣ

February 26, 2026
ಪತ್ರಕರ್ತರ ಹಿತ ಕಾಯಲು ಬದ್ಧ: ಕೇಂದ್ರ ಸಚಿವರ ಭರವಸೆ

ಪತ್ರಕರ್ತರ ಹಿತ ಕಾಯಲು ಬದ್ಧ: ಕೇಂದ್ರ ಸಚಿವರ ಭರವಸೆ

February 26, 2026
ಮನೆ ನಿರ್ಮಾಣ ಸಾಮಗ್ರಿ ಕಳ್ಳತನ | ಓರ್ವನ ಬಂಧನ

ಮನೆ ನಿರ್ಮಾಣ ಸಾಮಗ್ರಿ ಕಳ್ಳತನ | ಓರ್ವನ ಬಂಧನ

February 26, 2026
Minister Somanna Inspects & Inaugurates Road Under Bridges in Tumkur District eliminating level Crossing gates

Minister Somanna Inspects & Inaugurates Road Under Bridges in Tumkur District eliminating level Crossing gates

February 26, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL