No Result
View All Result
swr vigilance awareness campaign 2026 hubballi dharwad
English Articles

SWR Vigilance Dept Organizes Inter-School Competitions to Promote Integrity & Ethical Values

by kalpa News
September 24, 2026
0

Kalpa Media House  |  Hubballi | The Vigilance Department of South Western Railway (SWR) organized a series of inter-school competitions...

Read moreDetails
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
Hubballi railway Station Swacchata Pakhwada

Hubballi Division : Swachhata Hi Seva and Swachhata Pakhwada–2026 Launched in

September 18, 2026
swr mysuru division swacchata hi seva 2026 campaign

SWR : Mysuru Division Launches Swachhata Hi Seva 2026 Campaign

September 18, 2026
  • Advertise With Us
  • Grievances
  • About Us
  • Contact Us
Thursday, September 24, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಸಾತ್ವಿಕ ಮನಸ್ಸು, ಸೂಕ್ಷ್ಮ ಸಂವೇದನೆ | ಆತ್ಮೀಯತೆಯಲ್ಲಿದ್ದವರಿಗೆ ಮಾತ್ರ ಗೊತ್ತು ನಾ.ಡಿಸೋಜರ ವ್ಯಕ್ತಿತ್ವ

kalpa News by kalpa News
January 6, 2025
in Special Articles
0
ಸಾತ್ವಿಕ ಮನಸ್ಸು, ಸೂಕ್ಷ್ಮ ಸಂವೇದನೆ | ಆತ್ಮೀಯತೆಯಲ್ಲಿದ್ದವರಿಗೆ ಮಾತ್ರ ಗೊತ್ತು ನಾ.ಡಿಸೋಜರ ವ್ಯಕ್ತಿತ್ವ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ-ಯು.ಜೆ. ನಿರಂಜನಮೂರ್ತಿ  |

ಸೂಕ್ಷ್ಮ ಸಂವೇದನೆ, ಸಾತ್ವಿಕ ಮನಸ್ಸು, ತಿಳಿ ನೀರಿನಂತಹ ಶಾಂತ ಚಿತ್ತತೆ ಇದು ಕನ್ನಡ ಸಾಹಿತ್ಯ ಲೋಕದ ಜೀವನಾಡಿ, `ಅಕ್ಷರ ಶಕ್ತಿ’, ಹಿರಿಯ ಸಾಹಿತಿ ನಾ. ಡಿಸೋಜ ಅವರಲ್ಲಿ ನಾ ಕಂಡ ಸಂವೇದನಾ ಭಾವಗಳು… ಇಂತಹ ದಿವ್ಯ ಚೇತನ ಇನ್ನು ಮುಂದೆ ತಮ್ಮ ಅಕ್ಷರ ಹಾಗೂ ವ್ಯಕ್ತಿತ್ವದ ಮೂಲಕ ಮಾತ್ರವೇ ನಮ್ಮೊಂದಿರುತ್ತಾರೆ ಎಂಬುದು ನೆನದರೇ….

ನಾ. ಡಿಸೋಜ… ಕನ್ನಡ ಸಾಹಿತ್ಯ ಲೋಕದಲ್ಲಿ ತನ್ನದೇ ಆದ ವಿಶಿಷ್ಟ ರೀತಿಯ ಸಾಹಿತ್ಯ ಪ್ರಪಂಚವನ್ನು ಸೃಷ್ಟಿಸಿಕೊಂಡವರು. ಖ್ಯಾತನಾಮ ಸಾಹಿತಿಗಳು.

Also Read>> ಜ.19ರಂದು ಅಮ್ಮ ಎಂಬ ಅಚ್ಚರಿಗೊಂದು ಅಕ್ಕರೆಯ ನಮನ ಕಾರ್ಯಕ್ರಮ

1937ರ ಜೂನ್ 6ರಂದು ಶಿವಮೊಗ್ಗ #Shivamogga ಜಿಲ್ಲೆ ಸಾಗರದಲ್ಲಿ ಜನಿಸಿದ ಡಿಸೋಜ ಅವರು ಲೋಕೋಪಯೋಗಿ ಇಲಾಖೆಯಲ್ಲಿ ಸುಮಾರು 37 ವರ್ಷ ಸೇವೆ ಸಲ್ಲಿಸಿದ್ದಾರೆ. ಸರ್ಕಾರಿ ಉದ್ಯೋಗದೊಂದಿಗೆ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡು ಸಮಾಜಮುಖಿ ವಿಚಾರಗಳನ್ನು ತಮ್ಮ ಕಥೆ, ಕಾದಂಬರಿಗಳಲ್ಲಿ ಹೊರ ಹೊಮ್ಮುವಂತೆ ಮಾಡಿದ ಅಜಾತಶತ್ರು.

ಡಿಸೋಜರು ಸಾಹಿತ್ಯವು ಸಾಮಾಜಿಕ, ರಾಜಕೀಯ, ಆರ್ಥಿಕ ಹಾಗೂ ಮಾನವೀಯ ಮೌಲ್ಯಗಳನ್ನು ಪರಿಚಯಿಸುವ ಮಾಧ್ಯಮ ಎಂಬುದನ್ನು ತಮ್ಮ ಕೃತಿಗಳಿಂದ ಸಾಬೀತುಪಡಿಸಿದವರು. ಇವರ ಪ್ರಮುಖ ಕೃತಿಗಳಾದ ಕೊಳಗ, ದ್ವೀಪ, ಮುಳುಗಡೆ, ಬಳುವಳಿ, ಮುದುಕನ ಹೊಸ ಹೆಜ್ಜೆ ಇನ್ನು ಮುಂತಾದವುಗಳು ಗ್ರಾಮೀಣ ಜನ ಜೀವನದ ವಿಚಾರಧಾರೆಗಳನ್ನು ಶಕ್ತಿಯುತ ಕಥಾನಕಗಳನ್ನಾಗಿ ಓದುಗ ವರ್ಗಕ್ಕೆ ಸಮರ್ಪಿಸಿದ್ದಾರೆ.ಮುಳುಗಡೆ #Mulugade ಕೇವಲ ಅ ಭೂ-ಪ್ರದೇಶದ ಮುಳುಗಡೆಯಲ್ಲ. ಅಲ್ಲಿ ವಾಸಿಸುವ ಜನರ ಭಾಷೆ, ಸಂಸ್ಕೃತಿ, ಆಚಾರ-ವಿಚಾರಗಳು ಮುಳುಗಡೆಯಾಗುವುದನ್ನು ಮನಮುಟ್ಟುವಂತೆ ತಿಳಿಸಿದ ಸಾಹಿತ್ಯದ ಮಹಾನ್ ದಾರ್ಶನಿಕ ಡಾ.ನಾ. ಡಿಸೋಜ. #NaDsouza ಈ ಮೇಲ್ಕಂಡ ವಿಚಾರಗಳು ಇಂದಿನ ಅಂರ್ತಜಾಲ ಯುಗದಲ್ಲಿ ಲಭ್ಯವಿದೆ.

ನಾ.ಡಿಸೋಜ ಅವರ ವ್ಯಕ್ತಿತ್ವ ಎಂತಹುದ್ದು ಎನ್ನುವುದು ಅವರೊಟ್ಟಿಗೆ ಕಾಲ ಕಳೆದಿರುವವರಿಗೆ ಮಾತ್ರ ಗೊತ್ತಿರುತ್ತದೆ. ನಾನು ಅವರನ್ನು ಭೇಟಿಯಾದ ಮೊದಲ ದಿನದಿಂದ ಇಂದಿನವರೆಗೂ ಅವರ ಭೇಟಿಯ ಕ್ಷಣಗಳು ಹಚ್ಚಹಸಿರಾಗಿದೆ ನನ್ನ ಮನದಲ್ಲಿ.

ಅವರ ಸೂಕ್ಷ್ಮ ಸಂವೇದನೆ, ನಿರ್ಲಿಪ್ತ ಭಾವ, ಸಾತ್ವಿಕ ಮನಸ್ಸು, ತಿಳಿ ನೀರಿನಂತಹ ಶಾಂತ ಚಿತ್ತತೆ, ಮೌನವು ಮಾತಾಗಬಲ್ಲ ಹಾವಭಾವ, ಮನುಷ್ಯ ಮನುಷ್ಯನಿಗೆ ನೀಡಬೇಕಾದ ಕನಿಷ್ಠ ಬೆಲೆ, ಸ್ಪಂದನೆ ಇವೇ ಮೊದಲಾದ ಗುಣವಿಶೇಷತೆಗಳು ಒಡನಾಡಿಗಳಿಗೂ ಪ್ರಭಾವ ಬೀರದೇ ಇರಲಾರವು.
ಸುಮಾರು 2006 ರಲ್ಲಿ ಸಾಗರದ ನೆಹರು ನಗರದಲ್ಲಿ ನಾ.ಡಿಸೋಜ ಅವರ ಮನೆಗೆ ಹೆಗ್ಗೋಡಿನ ಗೆಳೆಯ ಅವಿನಾಶ ಮೊದಲ ಬಾರಿಗೆ ಕರೆದುಕೊಂಡು ಹೋದಾಗ ಅವರ ಸರಳತೆ ನೋಡಿ ನಿಜಕ್ಕೂ ನನ್ನ ನಿರೀಕ್ಷೆಗಳಿಗೂ ಸಾಹಿತಿಗಳಾಗಿ ಅವರು ವಾಸ್ತವದಲ್ಲಿ ಇದ್ದ ಜೀವನ ಶೈಲಿಗೂ ಅಜಗಜಾಂತರ ವ್ಯತ್ಯಾಸ ಕಂಡು ಅಚ್ಚರಿಯಾಗಿತ್ತು.

ನೆಹರು ನಗರದ 2ನೇ ತಿರುವಿನಲ್ಲಿದ್ದ ಎಲ್ಲಾ ಮನೆಗಳು ಕಾಂಕ್ರಿಟಿನ ಬಹು ಮಹಡಿ ಮನೆಗಳು. ನಾ.ಡಿಸೋಜ ಅವರ ಮನೆಯೊಂದನ್ನು ಬಿಟ್ಟು. ತುಂಬ ಚಿಕ್ಕದು ಅಲ್ಲ ದೊಡ್ಡದು ಅಲ್ಲ ಎನ್ನಬಹುದು ಅವರ ಮಂಗಳೂರು ಅಂಚಿನ ಮನೆ. ಅವರ ಮನಸ್ಸಿನಷ್ಟೇ ಶುದ್ಧವಾಗಿದ್ದ ಮನೆ. ನಾ.ಡಿಸೋಜರ ಪತ್ನಿಯಾದ ಫಿಲೋಮಿನಾ ಡಿಸೋಜ ಅವರು ನಾವು ಅವರ ಮನೆಯಲ್ಲಿ ಪುಸ್ತಕಗಳ ಸಂಗ್ರಹಣೆಯ ವೀಕ್ಷಣೆ ಮಾಡುವಷ್ಟರಲ್ಲಿ ಸ್ವಾದಿಷ್ಟ ಕಾಫಿಯನ್ನು ತಂದು ಕೊಟ್ಟರು.
ನಾವಿನ್ನೂ ಪದವಿ ಓದುತ್ತಿದ್ದವರು. ಆದರೂ ಹಿರಿಯ ಸಾಹಿತಿ ಬಹುವಚನದಲ್ಲಿ ಮಾತನಾಡಲು ಶುರು ಮಾಡಿದರು. ಇಷ್ಟು ದೊಡ್ಡ ಸಾಹಿತಿಗಳು ವಿನಯದಿಂದ ನಮ್ಮೊಟ್ಟಿಗೆ ಮಾತುಕತೆ ನಡೆಸಿದರೆಂದು ವಾರಗಳ ಕಾಲ ಅವರ ನಯ-ವಿನಯದ ಸ್ವಾಭಾವವೇ ಮನಸ್ಸಿನಲ್ಲಿ ಮೆಲುಕು ಹಾಕುತ್ತಿತ್ತು.
ನಂತರದಲ್ಲಿ ಸ್ನೇಹಿತರ ಪುಸ್ತಕ ಬಿಡುಗಡೆಗಳಿಗೆ, ಮುನ್ನುಡಿ ಬರೆಯಲಿಕ್ಕೆ, ಚರಕ ಪತ್ರಿಕೆಯ ಬಿಡುಗಡೆ ಸಮಾರಂಭಕ್ಕೆ ಹೀಗೆ ಅನೇಕ ಕಾರ್ಯಕ್ರಮಗಳಿಗೆ ಆಹ್ವಾನಿಸುವಾಗ ಖುದ್ದು ಬಂದು ಕರೆಯುವುದು ಬೇಡ ಮತ್ಯಾಕೆ ಒಂದು ದಿನ ಕೆಲಸ ಬಿಟ್ಟು ಬರುವಿರಿ. ಬಿಡುಗಡೆಯ ಪುಸ್ತಕ ಪೋಸ್ಟ್ ಮಾಡಿ ಸಾಕು ಎಂದು ಹೇಳುತ್ತಿದ್ದರು. ಸಮಾರಂಭದಲ್ಲಿ ಭಾಷಣ ಕೇಳಿದಾಗ ತಿಳಿಯುತ್ತಿತ್ತು ಅದೆಷ್ಟು ಅಳವಾಗಿ ಅ ವಿಷಯ/ಪುಸ್ತಕದ ಕುರಿತು ಅಧ್ಯಯನ ಮಾಡಿಕೊಂಡು ಬಂದಿದ್ದಾರೆಂದು.

ಆಡಂಬರದ ಬಿಸಿಲು ಕುದುರೆ ಏರಿದ ಇಂದಿನ ಸಮಾಜದಲ್ಲಿ ನಾ. ಡಿಸೋಜರಂತಹ ಸರಳ ಸಜ್ಜನಿಕೆಯ ವ್ಯಕ್ತಿತ್ವಗಳು ಮಾದರಿಯಾಗಿರುತ್ತವೆ. ಸಂಬಳ ಬರುವವರು ಕಾರು, ಮನೆ, ಪೀಠೋಪಕರಣ, ಫ್ರಿಜ್ಡ್, ವಾಷಿಂಗ್ ಮಷಿನ್ ಇನ್ನು ಅನೇಕ ಕೈ ಮೀರಿದ ಇಎಂಐಗಳನ್ನು ಚಕ್ರವ್ಯೂಹದಲ್ಲಿ ಸಿಲುಕಿ ನಿಜವಾಗ ಸುಖ ಆನಂದಗಳು ಮರೆತು ಹೋಗುವಂತೆ ಮಾಡಿಕೊಂಡಿರುತ್ತಾರೆ. ಆದರೆ, ಇವೆಲ್ಲಕ್ಕೂ ತದ್ವಿರುದ್ದವಾಗಿ ಸರಳ, ಮಾದರಿ ಜೀವನ ನಡೆಸಿ ಡಿಸೋಜರ ಜೀವನವೇ ನಮಗೊಂದು ಗ್ರಂಥ ಭಂಡಾರ.

ಕನ್ನಡ ನಾಡು ನುಡಿ, ಪ್ರಾದೇಶಿಕ ಜೀವನ ಶೈಲಿ, ಸಂಸ್ಕೃತಿ, ಸಂಸ್ಕಾರಗಳ ಪ್ರಾಮುಖ್ಯತೆಯನ್ನು ಸಾಹಿತ್ಯಿಕವಾಗಿ ಮನವರಿಕೆ ಮಾಡಿಸುವ ಅದ್ಬುತ ಸಂಘ ಜೀವಿ ಮರೆಯಾಗಿರುವುದು ಇಡೀ ಮನುಕುಲಕ್ಕೆ ನಷ್ಟದ ಸಂಗತಿ. ಆದರೆ ಅವರ ಸಾಹಿತ್ಯ, ವ್ಯಕ್ತಿತ್ವ, ಆದರ್ಶ ಎಂದೂ ನಮ್ಮಿಂದ ಮುಳುಗಡೆಯಾಗಲ್ಲ. ವಿಶೇಷವಾಗಿ ಮಲೆನಾಡು ಭಾಗದ ಜನರಿಗೆ ಅವರು ಪ್ರತಿದಿನದ ಬದುಕಿಗೆ ಪ್ರೇರಣೆ ನೀಡುತ್ತಲೇ ಇರುತ್ತಾರೆ.

ಹೋಗಿ ಬನ್ನಿ…

Kalahamsa Infotech private limited

Tags: Kannada News WebsiteLatest News Kannadana d'souzaNa DiSagarShimogaShivamoggaU J Niranjan Murthyಅಜಾತಶತ್ರುದ್ವೀಪನಾ. ಡಿಸೋಜಬಳುವಳಿಮುಳುಗಡೆಯು.ಜೆ. ನಿರಂಜನಮೂರ್ತಿಶಿವಮೊಗ್ಗಸಾಗರ
Share197Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಜ.7-11 | ಮಲ್ಲೇಶ್ವರಂ ರಾಯರ ಮಠದಲ್ಲಿ ಭಜನ, ಪ್ರವಚನ, ಸಂಕೀರ್ತನ ಕಾರ್ಯಕ್ರಮ

Next Post

ಎಲ್ಲಾ ಎಸ್ಕಾಂ ಸಿಬ್ಬಂದಿಗಳಿಗೆ ಗುಡ್ ನ್ಯೂಸ್ ಕೊಟ್ಟ ರಾಜ್ಯ ಸರ್ಕಾರ | ಸಚಿವರು ಹೇಳಿದ್ದೇನು?

kalpa News

kalpa News

Next Post
ಉಚಿತ ವಿದ್ಯುತ್ ಪಡೆಯುವ ಬಗ್ಗೆ ಸಚಿವ ಜಾರ್ಜ್ ಮಹತ್ವದ ಹೇಳಿಕೆ

ಎಲ್ಲಾ ಎಸ್ಕಾಂ ಸಿಬ್ಬಂದಿಗಳಿಗೆ ಗುಡ್ ನ್ಯೂಸ್ ಕೊಟ್ಟ ರಾಜ್ಯ ಸರ್ಕಾರ | ಸಚಿವರು ಹೇಳಿದ್ದೇನು?

Leave a Reply Cancel reply

Your email address will not be published. Required fields are marked *

No Result
View All Result
swr vigilance awareness campaign 2026 hubballi dharwad
English Articles

SWR Vigilance Dept Organizes Inter-School Competitions to Promote Integrity & Ethical Values

by kalpa News
September 24, 2026
0

Kalpa Media House  |  Hubballi | The Vigilance Department of South Western Railway (SWR) organized a series of inter-school competitions...

Read moreDetails
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
Hubballi railway Station Swacchata Pakhwada

Hubballi Division : Swachhata Hi Seva and Swachhata Pakhwada–2026 Launched in

September 18, 2026
swr mysuru division swacchata hi seva 2026 campaign

SWR : Mysuru Division Launches Swachhata Hi Seva 2026 Campaign

September 18, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL