ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಕೇರಳ: ಆಹಾರ ಅರಸಿ ಬಂದ ಗರ್ಭಿಣಿ ಆನೆಯೊಂದಕ್ಕೆ ಪೈನಾಪಲ್ ಹಣ್ಣಿನಲ್ಲಿ ಮದ್ದು ತುಂಬಿಸಿ, ಸ್ಪೋಟಿಸಿ ಕೊಂದಿರುವ ದಾರುಣ ಘಟನೆ ಕೇರಳದಲ್ಲಿ ನಡೆದಿದೆ.
ಗರ್ಭಿಣಿ ಆನೆಯೊಂದು ಹಸಿವಿನಿಂದ ಆಹಾರ ಅರಸಿ ನಾಡಿಗೆ ಬಂದಿತ್ತು. ಈ ವೇಳೆ ಕೆಲವು ಮನುಷ್ಯ ರೂಪದ ರಾಕ್ಷಸರು ಅನಾನಸ್ ಹಣ್ಣಿನ ಒಳಗೆ ಪಟಾಕಿ ತುಂಬಿಸಿ ಇಟ್ಟಿದ್ದಾರೆ. ಅನಾನಸ್ ಹಣ್ಣು ಎಂದು ತಿಳಿದು ಆನೆ ಅದನ್ನು ತಿನ್ನುವ ವೇಳೆ ಅದರ ಬಾಯಿಯೊಳಕ್ಕೇ ಸ್ಪೋಟಗೊಂಡು ಛಿದ್ರಗೊಂಡಿದೆ.
ಇದರಿಂದಾಗಿ ಯಮಯಾತನೆ ಅನುಭವಿಸಿದ ಆನೆ ಸಮೀಪದ ವೆಲ್ಲಿಯೂರ್ ನದಿಯಲ್ಲಿ ಹೋಗಿ ನಿಂತಿದೆ. ನದಿಯಲ್ಲಿ ನಿಂತ ಆನೆಯನ್ನು ಗಮನಿಸಿ ಅರಣ್ಯಾಧಿಕಾರಿಗಳು ಅನುಮಾನಗೊಂಡು ಅದರ ನೆರವಿಗೆ ಧಾವಿಸಿದ್ದರು. ಆದರೆ ನೀರಿನಿಂದ ಕಾಡಾನೆಯನ್ನು ಹೊರತರಲು ಸಾಧ್ಯವಾಗಲಿಲ್ಲ. ಕೊನೆಗೆ, ನೋವು ತಾಳಲಾರದ ಆನೆ ಅಕ್ಷರಶಃ ನರಳಿ ನರಳಿ ಪ್ರಾಣಬಿಟ್ಟಿದೆ.
ಹಣ್ಣಿನಲ್ಲಿ ಪಟಾಕಿ ಇಟ್ಟು ಸ್ಪೋಟಿಸಿದ ದುರುಳರ ವಿರುದ್ಧ ಎಫ್‘ಐಆರ್ ದಾಖಲಿಸಿ, ಕಾನೂನು ಕ್ರಮಕ್ಕೆ ಅರಣ್ಯ ಇಲಾಖೆ ಮುಂದಾಗಿದೆ.
Get In Touch With Us info@kalpa.news Whatsapp: 9481252093
Discussion about this post