ಶಿವಮೊಗ್ಗ: 73ನೆಯ ಸ್ವಾತಂತ್ರೋತ್ಸವವನ್ನು ನಗರದ ಸಿಟಿ ಕೋ-ಆಪರೇಟೀವ್ ಬ್ಯಾಂಕಿನಲ್ಲಿ ಇಂದು ಅದ್ದೂರಿಯಾಗಿ ಆಚರಿಸಲಾಯಿತು.
ಬ್ಯಾಂಕಿನ ಅಧ್ಯಕ್ಷ ಉಮಾಶಂಕರ ಉಪಾಧ್ಯರು ಧ್ವಜಾರೋಹಣ ನೆರವೇರಿಸಿ, ಮಾತನಾಡಿದರು.

ಬ್ಯಾಂಕಿನ ನಿರ್ದೇಶಕರಾದ ಕೆ. ರಂಗನಾಥ್, ಸಿ. ಹೊನ್ನಪ್ಪ, ರುಕ್ಮಿಣಿ ವೇದವ್ಯಾಸ್, ರೇಖಾ ಚಂದ್ರಶೇಖರ್, ರಾಕೇಶ್, ಚಂದ್ರಶೇಖರ್ ಹಾಗೂ ಬ್ಯಾಂಕಿನ ಕಾರ್ಯನಿರ್ವಹಣಾಧಿಕಾರಿ ಮನೋಜ್ ಕುಮಾರ್, ಸಿಬ್ಬಂದಿ ವರ್ಗದವರು ಹಾಗೂ ಪಿಗ್ಮಿ ಸಂಗ್ರಹಕಾರರು ಉಪಸ್ಥಿತರಿದ್ದರು.
















