ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ತನ್ನ ಪ್ರಿಯತಮೆಯ ಮೇಲೆ ಅನುಮಾನಗೊಂಡ ಪಾಪಿ ಪ್ರಿಯಕರನೊಬ್ಬ ಆಕೆಯನ್ನು ಕುಕ್ಕರ್’ನಿಂದ #Cooker ಹೊಡೆದ ಕೊಂದಿರುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ #Bengaluru ನಡೆದಿದೆ.
ಇಲ್ಲಿನ ಬೇಗೂರಿನ ಮೈಕೋ ಲೇಔಟ್’ನಲ್ಲಿ ಈ ಘಟನೆ ನಡೆದಿದ್ದು, ಹತ್ಯೆಯಾದ #Murder ಯುವತಿಯನ್ನು ದೇವಾ(24) ಎಂದು ಗುರುತಿಸಲಾಗಿದ್ದು, ವೈಷ್ಣವ್(24) ಎಂಬ ಯುವಕನೇ ಆರೋಪಿಯಾಗಿದ್ದಾನೆ.
ಕೇರಳ #Kerala ಮೂಲದವರಾಗಿರುವ ಈ ಜೋಡಿ ಕಳೆದ ಎರಡು ವರ್ಷಗಳಿಂದ ಲಿವಿಂಗ್ ಗೆದರ್’ನಲ್ಲಿದ್ದರು. #LivingTogether ಇತ್ತೀಚೆಗೆ ಪ್ರಿಯತಮೆ ದೇವಾ ಬೇರೊಬ್ಬ ಯುವಕನ ಜೊತೆಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾಳೆ ಎಂದು ಆರೋಪ ಮಾಡಲಾಗಿತ್ತು.
ಇದೇ ವಿಚಾರಕ್ಕೆ ಇಬ್ಬರ ಮಧ್ಯೆ ಆಗಾಗ ಜಗಳಗಳು ನಡೆಯುತ್ತಿತ್ತು. ಶನಿವಾರ ರಾತ್ರಿ ಕೂಡ ಇದೇ ವಿಚಾರಕ್ಕೆ ಗಲಾಟೆ ನಡೆದಿದೆ. ಈ ವೇಳೆ ವೈಷ್ಣವ್ ಅಲ್ಲೇ ಇದ್ದ ಕುಕ್ಕರ್’ನಿಂದ ಯುವತಿಯ ತಲೆಗೆ ಹೊಡೆದಿದ್ದಾನೆ. ಹಲ್ಲೆಯಿಂದಾಗಿ ತೀವ್ರ ರಕ್ತಸ್ರಾವವಾಗಿ ಯುವತಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ.
ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ದೂರು ದಾಖಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post