ಕಲ್ಪ ಮೀಡಿಯಾ ಹೌಸ್ | ಮಂಗಳೂರು |
ದುಬೈನಲ್ಲಿ #Dubai ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮಂಗಳೂರು #Mangalore ಮೂಲದ ವಿದಿಶಾ(28) ಎಂಬ ಯುವತಿ ದುರ್ಮರಣಕ್ಕೀಡಾಗಿರುವ ಘಟನೆ ನಡೆದಿದೆ.
ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ವಿದಿಶಾ, 2019ರಲ್ಲಿ ದುಬೈಗೆ ತೆರಳಿದ್ದರು. ಅಲ್ಲಿ, ಎಕ್ಸ್ ಕ್ಯೂಚೆಟ್’ನಲ್ಲಿ ಅಧಿಕಾರಿಯಾಗಿ ಆಕೆ 5 ವರ್ಷ ಸೇವೆ ಸಲ್ಲಿಸುತ್ತಿದ್ದರು.

ಕೋಟೆಗಾರು ಬೀರಿ ಕೆಂಪುಮಣ್ಣ ನಿವಾಸಿಯಾಗಿದ್ದ ವಿದಿಶಾ, ಮಂಗಳೂರು ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷೆ ರಾಜೀವಿ ಕೆಂಪುಮಣ್ಣು ಮತ್ತು ವಿಠಲ್ ಕುಲಾಲ್ ಕೆಂಪುಮಣ್ಣು ಇವರ ಏಕೈಕ ಪುತ್ರಿಯಾಗಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post